Puneeth RajKumar Death: ಒಂದೂವರೆ ವರ್ಷದಲ್ಲಿ ಮೂವರು ನಟರನ್ನು ಕಳೆದುಕೊಂಡ ಸ್ಯಾಂಡಲ್‌ವುಡ್

Suvarna News   | Asianet News
Published : Oct 29, 2021, 03:27 PM ISTUpdated : Oct 29, 2021, 03:52 PM IST
Puneeth RajKumar Death: ಒಂದೂವರೆ ವರ್ಷದಲ್ಲಿ ಮೂವರು ನಟರನ್ನು ಕಳೆದುಕೊಂಡ ಸ್ಯಾಂಡಲ್‌ವುಡ್

ಸಾರಾಂಶ

ಕಳೆದ ಒಂದೂವರೆ ವರ್ಷದಲ್ಲಿ ಮೂವರು ನಟರ ಕಳೆದುಕೊಂಡ ಸ್ಯಾಂಡಲ್‌ವುಡ್(Sandalwood) ಚಿರು ಸರ್ಜಾ, ಸಂಚಾರಿ ವಿಜಯ್, ಪುನೀತ್ ರಾಜ್ ಕುಮಾರ್(Puneeth Rajkumar)

ಇತ್ತೀಚಿನ ದಿನಗಳಲ್ಲಿ ಯುವಜನರು ಅಕಾಲಿಕವಾಗಿ ಸಾವನ್ನಪ್ಪುವ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಚಿತ್ರರಂಗವೂ(Cinema Industry) ಹೊರತಲ್ಲ. ಇಡೀ ದೇಶದಲ್ಲಿಯೂ ಬಹಳಷ್ಟು ಪ್ರತಿಭಾನ್ವಿತ ನಟರು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರಗಾಗಿಲ್ಲ. ಸ್ಯಾಂಡಲ್‌ವುಡ್(Sandalwood) ಕಳೆದ ಒಂದೂವರೆ ವರ್ಷದಲ್ಲಿ ಮೂವರು ಪ್ರತಿಭಾನ್ವಿತ ನಟರನ್ನು ಕಳೆದುಕೊಂಡಿದೆ. ಹೃದಯಾಘಾತದಿಂದ ಸಾವನ್ನಪ್ಪಿದ್ದ ಚಿರಂಜೀವಿ ಸರ್ಜಾ, ಅಪಘಾತದಲ್ಲಿ ಅಗಲಿದ ಸಂಚಾರಿ ವಿಜಯ್ ಈಗ ಪುನೀತ್ ಅವರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

"

ಕಳೆದ ಒಂದೂವರೆ ವರ್ಷದಿಂದ ಪ್ರತಿಭಾನ್ವಿತ ಯುವ ನಟರನ್ನು ಕಳೆದುಕೊಂಡ ನೋವನ್ನು ಚಿತ್ರರಂಗ ಅನುಭವಿಸುತ್ತಲೇ ಬಂದಿದೆ. ಚಿರು ಸಾವು ಕೊರೋನಾ ಸಂದರ್ಭ ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವಾಗಿತ್ತು. ಅದರ ನೋವು ಮಾಸುವ ಮುನ್ನವೇ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅಪಘಾತದಿಂದ ಸಾವನ್ನಪ್ಪಿದರು. ಆ ಸಾವಿನ ನೋವು ಹಾಗೆಯೇ ಇರುವಾಗಲೇ ಸ್ಯಾಂಡಲ್‌ವುಡ್ ಮತ್ತೊಮ್ಮೆ ಬಹು ಪ್ರತಿಭಾನ್ವಿತ ನಟ, ಅದಕ್ಕೂ ಹೆಚ್ಚು ಸರಳ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಿದೆ.

ಪುನೀತ್ ರಾಜ್‌ಕುಮಾರ್(ಜನನ:17 ಮಾರ್ಚ್ 1975 ಮರಣ:ಅ.21/2021)

ಬಾಲನಟನಾಗಿ ಸ್ಯಾಂಡಲ್‌ವುಡ್‌ಗೆ(Sandalwood) ಎಂಟ್ರಿ ಕೊಟ್ಟ ವರನಟ ಡಾ. ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್(Puneeth Rajkumar) ಅಲ್ಲಿಂದ ತೊಡಗಿ ಸಿನಿಪ್ರಿಯರನ್ನು ರಂಜಿಸಿಕೊಂಡೇ ಬಂದಿದ್ದಾರೆ.

ಬಾಲಕಲಾವಿದನಾಗಿ, ಯುವನಟನಾಗಿ, ಆಕ್ಷನ್ ಹೀರೋ ಆಗಿ, ಫ್ಯಾಮಿಲಿ ಸಿನಿಮಾಗಳನ್ನು ಕೊಟ್ಟು ಎಲ್ಲ ವಯಸ್ಸಿನ ವೀಕ್ಷಕರನ ನೆಚ್ಚಿನ ನಟನಾಗಿದ್ದ ಪುನೀತ್ ರಾಜ್‌ಕುಮಾರ್ ಅವರು ಅ.29ರ ಶುಕ್ರವಾರ ಹೃದಯಾಘಾತದ(Heart Attack) ನಂತರ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಾಗಿದ್ದರು.

ಸಂಚಾರಿ ವಿಜಯ್‌ ಹುಟ್ಟಿದಬ್ಬವಿಂದು: ಕಳೆದ ಕೆಲವು ದಿನಗಳಲ್ಲಿ ಕೊನೆಯುಸಿರೆಳೆದ ಗಣ್ಯರು

ಮನೆಯಲ್ಲಿ ಕಸರತ್ತು ಮಾಡುವ ವೇಳೆ ಹೃದಯಾಘಾತದಿಂದ ನಟ ಕುಸಿದು ಬಿದ್ದಿದ್ದರು. ಅವರನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ದ ನಂತರ ಆಪ್ತರು ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಟ ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಅದ್ಭುತ ನಟ, ಅದ್ಭುತ ಹಾಡುಗಾರ, ಸರಳ ವ್ಯಕ್ತಿಯಾಗಿದ್ದ ಪುನೀತ್ ಅವರಿಗೆ ಎಲ್ಲರೂ ಅಭಿಮಾನಿಗಳೇ.

ಸಂಚಾರಿ ವಿಜಯ್(ಜನನ: 17 ಜುಲೈ 1983 ಮರಣ: 15 ಜೂನ್ 2021)

ತಡರಾತ್ರಿ ಔಷಧ ತರಲು ಹೋಗುತ್ತಿದ್ದಾಗ ವಿಜಯ್‌(Sanchari Vijay) ಅವರಿದ್ದ ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಅಪಘಾತ (Accident )ಸಂಭವಿಸಿತ್ತು. ವಿಜಯ್‌ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಲ ತೊಡೆಯ ಮೂಳೆ ಮುರಿದಿದ್ದು, ಸರ್ಜರಿ ಮಾಡಲಾಗಿತ್ತು. ನಟ ಮೆದುಳು ನಿಷ್ಕ್ರಿಯವಾಗಿ ಜೂನ್.15 2021ರಂದು ಮೃತಪಟ್ಟಿದ್ದರು.

ನಟ ಸಂಚಾರಿ ವಿಜಯ್ ಬ್ರೈನ್ ಡೆಡ್; ಅಂಗಾಂಗ ದಾನದ ಬಳಿಕ ಕೊನೆಯುಸಿರು!

ನಟನ ಅಂಗಾಗಳನ್ನು ದಾನ ಮಾಡಲು ಅವರ ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ಅವರ ಅದ್ಭುತ ಕಾನ್ಸೆಪ್ಟ್‌ಗಳ ಸಿನಿಮಾ ಎಲ್ಲರಿಗೂ ಮೆಚ್ಚುಗೆಯಾಗುತ್ತಿತ್ತು. ಯುವ ನಟನ ಅಕಾಲಿಕ ಸಾವು ಸಿನಿಪ್ರಿಯರನ್ನು ಶೋಕದಲ್ಲಿ ಮುಳುಗಿಸಿತ್ತು.

ಲಿವರ್, ಎರಡು ಕಿಡ್ನಿ,‌ ಎರಡು ಕಣ್ಣು ಸದ್ಯ ಟ್ರಾನ್ಸ್ ಪ್ಲಾಂಟ್ ಮಾಡಲಾಗುತ್ತದೆ. ಹಾರ್ಟ್‌ನ ಟಿಶ್ಯು ವಾಲ್ವ್ ಕೂಡ ಟ್ರಾನ್ಸ್ ಪ್ಲಾಂಟ್ ಗೆ ಹೋಗಲಿದೆ. ಬೆಳಿಗ್ಗೆ ಕುಟುಂಬದವರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ ಎಂದಿದ್ದಾರೆ.

ಚಿರಂಜೀವಿ ಸರ್ಜಾ(ಜನನ:17 ಅಕ್ಟೋಬರ್ 1984, ಮರಣ:8 ಜೂನ್ 2020)

ಸ್ಯಾಂಡಲ್‌ವುಡ್‌ನ ಯುವ ನಟ ಚಿರಂಜೀವಿ ಸರ್ಜಾ(Chiranjeevi Sarja) ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಶಾಕ್ ಆಗಿತ್ತು. ಕೊರೋನಾ ಸಂದರ್ಭ ಹೃದಯಾಘಾತದಿಂದ ಮೃತಪಟ್ಟ ನಟನ ಗರ್ಭಿಣಿ ಪತ್ನಿ ಮೇಘನಾ ರಾಜ್ ಸರ್ಜಾ ಅವರ ನೋವಿಗೆ ಕನ್ನಡಿಗರ ಮನ ಮಿಡಿದಿತ್ತು.ಚಿರು ಸಾವಿನಿಂದ ಚಿತ್ರರಂಗವೇ ನೋವಿನಲ್ಲಿ ಮುಳುಗಿತ್ತು. ಪ್ರತಿಭಾನ್ವಿತ ಯುವನಟನ ಅಕಾಲಿಕ ಸಾವು ಎಲ್ಲರಿಗೂ ಆಘಾತ ತಂದಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್