Puneeth Rajkumar Death: ನಟ ಪುನೀತ್‌ ರಾಜ್‌ಕುಮಾರ್ ಕೊನೆಯದಾಗಿ ಹಂಚಿಕೊಂಡ ಪೋಸ್ಟ್, ಮಾತುಗಳಿವು!

By Suvarna News  |  First Published Oct 29, 2021, 3:27 PM IST

ಪವರ್ ಸ್ಟಾರ್ ಸೋಷಿಯಲ್ ಮೀಡಿಯಾದಲ್ಲಿ ಕೊನೆಯದಾಗಿ ಹಂಚಿಕೊಂಡ ಫೋಟೋ ಮತ್ತು ಮಾತುಗಳಿವು...


ಕನ್ನಡ ಚಿತ್ರರಂಗದ (Sandalwood) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಇನ್ನಿಲ್ಲ ಎಂದು ಸುದ್ದಿ ಕೇಳಿ ಬರುತ್ತಿದ್ದಂತೆ, ಇಡೀ ಕರ್ನಾಟಕವೇ ಶಾಕ್‌ನಲ್ಲಿದೆ. ನಟನಾಗಿ, ನಿರ್ಮಾಪಕನಾಗಿ (Producer), ಅತ್ಯುತ್ತಮ ಡ್ಯಾನ್ಸರ್ ಆಗಿ, ಒಳ್ಳೆಯ ಸ್ನೇಹಿತನಾಗಿ ಚಿತ್ರರಂಗದ ಪ್ರತಿಯೊಬ್ಬರ ಜೊತೆಯೂ ಉತ್ತಮ ಸಂಬಂಧ ಹೊಂದಿದ್ದ ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ಕೊನೆಯದಾಗಿ ಹಂಚಿಕೊಂಡ ಪೋಸ್ಟ್ ಅವರು ನಿರ್ಮಾಣ ಮಾಡುತ್ತಿರುವ ವೈಲ್ಡ್‌ ಲೈಫ್‌ (WildLife) ಸಿನಿಮಾ ಗಂಧದಗುಡಿ ಬಗ್ಗೆ.

"

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ನಿಧನಕ್ಕೆ ಗಣ್ಯರ ಸಂತಾಪ

Tap to resize

Latest Videos

undefined

'ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ,' ಎಂದು ಬರೆದುಕೊಂಡಿದ್ದರು. ಈ ಗಂಧದಗುಡಿ ಚಿತ್ರವನ್ನು ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.  ಲಾಕ್‌ಡೌನ್‌ ಸಮಯದಲ್ಲಿ ರಾಜ್ಯದ ಅರಣ್ಯಗಳನ್ನು ಸುತ್ತಾಡಿ, ರೂಪಿಸಿದ ಈ ಚಿತ್ರದ ಮೂಲಕ ಪ್ರಕೃತಿಯ ವೈಭವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆಯಂತೆ. 

ಪರಿಸರ ಹಾಗೂ ಅಡ್ವೆಂಚರ್ ಬೇಸ್ ಸಿನಿಮಾ ಇದಾಗಿದ್ದು, ಕರ್ನಾಟಕದ ವೈಲ್ಡ್‌ ಲೈಫ್ ಅನ್ನು ಈ ಸಿನಿಮಾ ಮೂಲಕ ನೋಡಬಹುದು. 90 ನಿಮಿಷಗಳ ಅವಧಿಯ ಈ ಚಿತ್ರದ ಟ್ರೈಲರ್ ಅನ್ನು ನ.1ಕ್ಕೆ ಬಿಡುಗಡೆ ಮಾಡಲು ಪುನೀತ್ ರಾಜ್‌ಕುಮಾರ್ ನಿರ್ಧರಿಸಿದ್ದರು. ಈ ಸಿನಿಮಾ ಓಟಿಟಿಯಲ್ಲಿ (OTT) ತೆರೆ ಕಾಣುವ ಸಾಧ್ಯತೆಗಳಿವೆ. 

'ಡೇರ್ಡೆವಿಲ್ ಮುಸ್ತಾಫಾ' ಸಿನಿಮಾ ತಂಡ 'ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ' ಎಂಬ ರಂಗಭೂಮಿ ಗೀತೆಯಲ್ಲಿ ನಾವು ಅಪ್ಪಾಜಿಯವರನ್ನು ಮೊಟ್ಟ ಮೊದಲ ಬಾರಿಗೆ ಅನಿಮೇಷನ್ ಶೈಲಿಯಲ್ಲಿ ಕಾಣಬಹುದು, ಬಹಳ ಸೊಗಸಾಗಿ ಮೂಡಿ ಬಂದಿದೆ. ನಾಡಹಬ್ಬ ದಸರಾ ನಿಮ್ಮ ಬಾಳಲ್ಲಿ ಆರೋಗ್ಯ, ನೆಮ್ಮದಿ ತರಲಿ. ಎಲ್ಲರಿಗೂ ವಿಜಯದಶಮಿ (Vijaya Dashami) ಹಬ್ಬದ ಶುಭಾಶಯಗಳು,' ಎಂದು ಬರೆದುಕೊಂಡು ಅಣ್ಣಾವ್ರ ವಿಡಿಯೋ ಹಂಚಿಕೊಂಡು ಇಡೀ ಕರ್ನಾಟಕದ ಜನರಿಗೆ ದಸರಾ ಹಬ್ಬಕ್ಕೆ ವಿಶ್ ಮಾಡಿದ್ದರು. 

Puneeth Rajkumar Death: ಪುನೀತ್‌ ರಾಜ್‌ಕುಮಾರ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಪುನೀತ್ ಕೊನೆಯ ಬಾರಿ ಕಾಣಿಸಿಕೊಂಡ ಜಾಹೀರಾತು (Advertisment) ಕೂಡ ಹಂಚಿ ಕೊಂಡಿದ್ದಾರೆ. ಬಿಳಿ ಪಂಚೆ, ಬಿಳಿ ಶಲ್ಯೆ, ಬಿಳಿ ಶರ್ಟ್ ಧರಿಸಿ ಮಧುಮಗನಂತೆ ಕಾಣಿಸಿಕೊಂಡಿದ್ದಾರೆ. ನೀವು ನಮ್ಮ ಕನ್ನಡ ಚಿತ್ರರಂಗ ಕಿಂಗ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ತಮ್ಮ ಪಿಆರ್‌ಕೆ ಬ್ಯಾನರ್‌ನಲ್ಲಿ ಯುವ ಕಲಾವಿದರಿಗೆ, ಯುವ ನಿರ್ದೇಶಕರಿಗೆ ಯುವಕರಿಗೆ ಪ್ರೋತ್ಸಾಹ ನೀಡಿ ಬೆಳೆಸುತ್ತಿದ್ದರು. ಈಗ ದೊಡ್ಡ ಮನೆಯಲ್ಲಿ ಒಂದು ಕುಡಿ ಇಲ್ಲ ಎಂದರೆ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ.

ಸದಾ ಡಾ.ರಾಜ್‌ಕುಮಾರ್ ಹಾಡಿರುವ ಹಾಡೊಂದನ್ನು ಹೇಳಿ ವೀಡಿಯೋ ಹಂಚಿಕೊಳ್ಳುತ್ತಿದ್ದ ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಂದೆಯೊಂದಿಗೂ ಹಲವು ಚಿತ್ರಗಳಲ್ಲಿ ನಟಿಸಿದ್ದರಿಂದ ಕನ್ನಡ ಚಿತ್ರರಸಿಕರಿಗೆ ತುಂಬಾ ಹತ್ತಿರವಾಗಿದ್ದರು.

click me!