'ದೇವರಿಗೆ ನಿಸ್ವಾರ್ಥ ಆತ್ಮಗಳ ಮೇಲೆ ಪ್ರೀತಿ ಜಾಸ್ತಿ '  ಚಿರು-ಪುನೀತ್ ಪೋಟೋ ಹಂಚಿಕೊಂಡ ಮೇಘನಾ

By Suvarna News  |  First Published Oct 29, 2021, 10:11 PM IST

* ಸ್ಯಾಂಡಲ್ ವುಡ್ ಗೆ ಪುನೀತ್  ನಿಧನದ ಆಘಾತ
* ಪುನೀತ್ ಕಳೆದುಕೊಂಡ ಸ್ಯಾಂಡಲ್ ವುಡ್
* ಪುನೀತ್ ಪೋಟೋ ಶೇರ್ ಮಾಡಿ ನಮನ ಸಲ್ಲಿಸಿದ ಮೇಘನಾ ರಾಜ್
* ಚಿರಂಜೀವಿ ಸರ್ಜಾ ಮತ್ತು ಪುನೀತ್ ಒಟ್ಟಾಗಿರುವ ಪೋಟೋ ಹಂಚಿಕೊಂಡ ಮೇಘನಾ


ಬೆಂಗಳೂರು( ಅ. 29) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅಕಾಲಿಕ ಅಗಲಿಕೆ ಕನ್ನಡ ಚಿತ್ರರಂಗಕ್ಕೆ (Sandalwood) ಬರಸಿಡಿಲು ಬಡಿದಂತೆ ಮಾಡಿದೆ.  ನಟಿ ಮೇಘನಾ ರಾಜ್  ಅಂತಿಮ ನಮನ ಸಲ್ಲಿಸಿದ್ದಾರೆ.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ಚಿತ್ರರಂಗ ಅಗಲಿದ್ದರು. ಈಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ದೂರವಾಗಿದ್ದಾರೆ. ಮೇಘನಾ   ಇಬ್ಬರಿಗೂ ವಂದನೆ ಸಲ್ಲಿಸಿದ್ದಾರೆ.

Tap to resize

Latest Videos

 ಮನಸ್ಸಿನಲ್ಲಿ ಯಾವುದೇ ಸ್ವಾರ್ಥವಿರದ ಆತ್ಮಗಳನ್ನು ದೇವರು  ಜಾಸ್ತಿ ಪ್ರೀತಿ ಮಾಡುತ್ತಾನೆ.. ಅದನ್ನು ಈ ರೀತಿ ಸಾಬೀತು  ಮಾಡುತ್ತಾನೆ ಎಂದು ಮೇಘನಾ ಬರೆದುಕೊಂಡಿದ್ದಾರೆ. ಕಳೆದ ವರ್ಷ ಪತಿಯನ್ನು ಕಳೆದುಕೊಂಡು  ನೋವು ಅನುಭವಿಸಿದ್ದರು.

ಸ್ಯಾಂಡಲ್ ವುಡ್, ರಾಜಕಾರಂಣಿಗಳು, ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಸಂತಾಪ  ಸೂಚಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.  ಪುನೀತ್ ಅಂತ್ಯ ಸಂಸ್ಕಾರ ಭಾನುವಾರ ನೆರವೇರಲಿದ್ದು ಅಭಿಮಾನಿಗಳಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. 

ಅಪ್ಪನ ಸಮಾಧಿ ಬಳಿಯೇ ಅಪ್ಪು ಅಂತ್ಯ ಸಂಸ್ಕಾರ

ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್  ನಿಧನ ಹಿನ್ನೆಲೆಯಲ್ಲಿ ನಾಳೆ (ಅ.30)  ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಖಾಸಗಿ ಶಾಲೆಗಳ (Private School) ಒಕ್ಕೂಟ ರೂಪ್ಸಾ (Rupsa) ಇಂದು (ಅ.29) ಪ್ರಕಟಣೆ ಹೊರಡಿಸಿದ್ದು, ಪುನೀತ್ ರಾಜ್‌ಕುಮಾರ್ ಅಗಲಿಕ ಹಿನ್ನೆಲೆಯಲ್ಲಿ ಶೋಕಾಚರಣೆ ನಿಮಿತ್ತ ಖಾಸಗಿ ಶಾಲೆಗಳಿಗೆ ನಾಳೆ (ಶನಿವಾರ) ರಜೆ ಘೋಷಿಸಲಾಗಿದೆ ಎಂದು ರುಪ್ಸಾ ಒಕ್ಕೂಟ ಅಧ್ಯಕ್ಷ ‌ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ.  ಆದ್ರೆ, ಸರ್ಕಾರಿ ಶಾಲೆ ರಜೆ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. 

"

ಎಂಬಿಎ ಪರೀಕ್ಷೆಗೆ ಮುಂದೂಡಿಕೆ
ಇನ್ನು ನಾಳೆ (ಅ.30) ನಡೆಯಬೇಕಿದ್ದ ಬೆಂಗಳೂರು ಸಿಟಿ ವಿಶ್ವವಿದ್ಯಾಲದ ಎಂಬಿಎ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ.  ಪರೀಕ್ಷೆ ‌ಮುಂದೂಡಿಕೆ ಕುರಿತು ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ. ಎಂಬಿಎ ಅಂತಿಮ ವರ್ಷದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂಡೂಡಲಾಗಿದೆ ಎಂದು ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜು ತಿಳಿಸಿದ್ದಾರೆ. 

ಬೆಂಗ್ಳೂರಲ್ಲಿ ಮದ್ಯ ಮಾರಾಟ ನಿಷೇಧ
ಬೆಂಗಳೂರು ನಗರದಲ್ಲಿ ತಕ್ಷಣವೇ ಜಾರಿಗೆ ಬರುವಂತೆ  ಅ.31ರ ಮಧ್ಯರಾತ್ರಿ ವರೆಗೆ  ಸಂಪೂರ್ಣವಾಗಿ ಮದ್ಯ ಮಾರಾಟ (Liquor Sale Ban) ನಿ‍ಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Pant) ಆದೇಶ ಹೊರಡಿಸಿದ್ದು,  ತತಕ್ಷಣವೇ ಜಾರಿಗೆ ಬರಲಿದೆ.

ಭದ್ರತೆ: ಬೆಂಗಳೂರಿನಲ್ಲಿ 6 ಸಾವಿರ ಪೊಲೀಸರು, ಕೆಎಸ್ಆರ್‌ಪಿ KSRP ಪ್ಲಟೂನ್ ನಿಯೋಜನೆ ಮಾಡಲಾಗಿದ್ದು,  ಭಾನುವಾರ ಮಧ್ಯ ರಾತ್ರಿ ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಷ್ಟೇ ಜನ ಬಂದ್ರೂ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತೆ. ಈ ಸಂದರ್ಭದಲ್ಲಿ ಕುಚೇಷ್ಟೇ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್ ಕಮಲ್ ಪಂಥ್ ಎಚ್ಚರಿಕೆ ಕೊಟ್ಟಿದ್ದಾರೆ.

 

click me!