ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್ ಕುಮಾರ್(Puneeth Rajkumar) ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದಾರೆ. ನಟನ ಅಭಿಮಾನಿಗಳು ನಟನ ಹಳೆಯ ಫೋಟೋ, ವಿಡಿಯೋ ಕ್ಲಿಪ್, ಮಾತುಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ತಮ್ಮ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಬಹಳಷ್ಟು ಪೋಸ್ಟ್‌ಗಳು ವೈರಲ್ ಅಗುತ್ತಿವೆ.
ಪುನೀತ್ ಕುರಿತ ಈ ಕೆಲವು ಸಾವುಗಳು ಅರ್ಥಪೂರ್ಣವಾಗಿದ್ದು ಅಭಿಮಾನಿಗಳು ಇದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿ ವೈರಲ್ ಮಾಡಿದ್ದಾರೆ. ನಟನ ಕುರಿತ ಈ ಸರಳ ಸಾಲುಗಳು ಬಹಳಷ್ಟು ಅರ್ಥಪೂರ್ಣವಾಗಿದ್ದು ವಾಸ್ತವವನ್ನು ಬಿಂಬಿಸುತ್ತಿದೆ.
1.
ಗಾಜನೂರಿನ
ಗಾಜು ಒಡೆದುಹೋಯಿತು..
ಕನ್ನಡಿಗರ ಮನಸ್ಸೂ
ಚೂರುಚೂರಾಯಿತು !!!
2.
ಅಪ್ಪನಂತೆ ಹಾಡುತ್ತಿದ್ದ..
ಅಪ್ಪನಂತೆ ನಟಿಸುತ್ತಿದ್ದ..
ಅಪ್ಪನಂತೆ ಹೊರಟುಹೋದ !!!
3.
ಹೃದಯಾಘಾತ
ಇಡೀ ನಾಡಿಗೆ ಆಗಿದೆ..
ಎದೆನೋವು ಬಂದದ್ದು
ಅವನಿಗೆ ಮಾತ್ರ!!!
4.
ಕನ್ನಡ ರಾಜ್ಯೋತ್ಸವಕ್ಕೆ
ಅಣ್ಣಾ ಬಾಂಡಿಲ್ಲ !!
ಬೊಂಬೆ ಹಾಡುತೈತೆ
ಅರಮನೆಯಲ್ಲಿ ರಾಜಕುಮಾರನಿಲ್ಲ !!!
5.
ಲೋಕದ ಹಣೆಬರಹವಿಷ್ಟೆ,
ಪಾಪಿಗಳು ಬೇಗ ಸಾಯುವುದಿಲ್ಲ...
ಅಜಾತಶತ್ರುಗಳಿಗೆ ದೇವರು
ಆಯುಷ್ಯ ಕೊಡುವುದಿಲ್ಲ !!!
6.
ಇದೊಂದು ಸೀನನ್ನು
ಕಟ್ ಮಾಡಿಬಿಡಿ..
ಅಪ್ಪು ರೀಟೇಕ್ ಮಾಡುತ್ತಾರೆ
ಒಮ್ಮೆ ಯ್ಯಾಕ್ಷನ್ ಅಂದುಬಿಡಿ !!!
7.
ಇನ್ನೂ ಇಂಟರ್ವಲ್ಲೇ
ಆದಂತ್ತಿಲ್ಲ...
ಹಾಡು ಮುಗಿಯುವ ಮೊದಲೇ
ಕುಣಿತ ನಿಲ್ಲಿಸಿದೆಯಲ್ಲ?!!
ಪುನೀತ್ ಕರ್ನಾಟಕ ಧ್ವಜ ಹಿಡಿದು ರಾಜ್ ಕುಮಾರ್‌ನತ್ತ ಓಡುವ ವ್ಯಂಗ್ಯ ಚಿತ್ರದಲ್ಲಿ ಕನ್ನಡ ರಾಜ್ಯೋತ್ಸವ ನಿನ್ನೊಟ್ಟಿಗೆ ಅಪ್ಪಾಜಿ ಎಂದು ಬರೆದ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಮ್ಮನೆಯ ದೀಪ ಬೆಳಗುತ್ತಿದ್ದರೂ ರಾಜ್ಯದಲ್ಲಿಂದು ಪವರ್ ಇಲ್ಲ ಎನ್ನುತ್ತಿದೆ ಇನ್ನೊಂದು ಪೋಸ್ಟ್. ಕಂದಾ ಯಾಕಿಷ್ಟು ಆತುರ ಎಂದು ಡಾ. ರಾಜ್‌ಕುಮಾರ್ ಪುನೀತ್‌ನನ್ನು ತಬ್ಬಲು ಕೈಚಾಚಿರೋ ಫೋಟೊ ಕೂಡಾ ಇಂಟರ್‌ನೆಟ್‌ನಲ್ಲಿ ಓಡಾಡುತ್ತಿದೆ.
ಭೂಮಿ ಮೇಲೆ ಎಷ್ಟೆಲ್ಲ ಹೂವಿದ್ದರೂ ದೇವರಿಗೆ ಬೆಟ್ಟದ ಹೂವೇ ಬೇಕಾಯಿತು ಎಂದಿದೆ ಇನ್ನೊಂದು ಪೋಸ್ಟ್. ಹೀಗೆ ಬಹಳಷ್ಟು ಪೋಸ್ಟ್‌ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Puneeth Rajkumar Death: ಪಿಎಂ ಮೋದಿ, ಸಚಿವ ರಾಜೀವ್ ಚಂದ್ರಶೇಖರ್ ಸೇರಿ ಗಣ್ಯರ ಕಂಬನಿ
ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.
ಮನೆಯಲ್ಲಿಯೇ ನಟ ಜಿಮ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ನಟನನ್ನು ಆಪ್ತರು ಬೆಂಗಳೂರಿನ(bengaluru) ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ನಟ ಶಿವರಾಜ್ ಕುಮಾರ್ ಅವರು ಭಜರಂಗಿ 2(Bhajarangi 2) ಸಿನಿಮಾ ರಿಲೀಸ್ ಹಿನ್ನೆಲೆ ಥಿಯೇಟರ್‌ನಲ್ಲಿದ್ದರು. ಅಲ್ಲಿಂದ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು
ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಸೇರಿದಂತೆ ಬಹಳಷ್ಟು ಗಣ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ. ಬಹಳಷ್ಟು ಜನ ಅಭಿಮಾನಿಗಳು ನಟ ದಾಖಲಾಗಿದ್ದ ಆಸ್ಪತ್ರೆ ಬಳಿ ಸೇರಿದ್ದರು. ನಟನಿಗೆ ಗುರುವಾರ ರಾತ್ರಿಯೇ ಸುಸ್ತು ಇತ್ತು ಎನ್ನಲಾಗಿದೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ನಟನನ್ನು ಹತ್ತಿರದ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ನಂತರ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್(Modi Tweet) ಮಾಡಿದ್ದಾರೆ. ವಿಧಿಯ ಕ್ರೂರ ತಿರುವು ನಮ್ಮಿಂದ ಒಬ್ಬ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಕಿತ್ತುಕೊಂಡಿದೆ. ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂಬರುವ ಪೀಳಿಗೆಗಳು ಅವರ ಕೃತಿಗಳು ಮತ್ತು ಅದ್ಭುತ ವ್ಯಕ್ತಿತ್ವಕ್ಕಾಗಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.