ಯಾರೋ ಇನ್ನೊಬ್ಬರ ಮುಂದೆ ಹೇಳಿದ್ದ ಮಾತೊಂದು ಜಗತ್ತಿಗೇ ಹರಡಿದಾಗ, ಅವರವರಿಗೆ ಗೊತ್ತಿದ್ದ ಸತ್ಯ ಸ್ಥಳದಲ್ಲೇ ಸತ್ತು ಹೋಯಿತು. ಆದರೆ, ಗೊತ್ತಿಲ್ಲದ ಸಂಗತಿ ಅವರಿಬ್ಬರ ಸ್ನೇಹ ಖಾಲಿಯಾಗಲು ಕಾರಣವಾಯಿತು. ಅವರಿಬ್ಬರೂ ಅಂದು ಆ ಒಂದು ಸಿನಿಮಾ ಸಿಕ್ಕಾಗ, ಜೊತೆಯಲ್ಲೇ ಇದ್ದಿದ್ದರೆ ಅವರಿಬ್ಬರಿಗೂ ಒಂದೇ ಸತ್ಯ ಗೊತ್ತಿರುತ್ತಿತ್ತು. ಆಗ ಸುಳ್ಳು..
ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್ (Kichcha Sudeep) ಹಾಗೂ ಡಿ ಬಾಸ್ ದರ್ಶನ್ (D Boss Darshan) ಅವರಿಬ್ಬರ ಮಧ್ಯೆ ದ್ವೇಷವಿದೆ ಎಂದು ಬಹಳಷ್ಟು ಜನರು ಅಂದುಕೊಂಡಿದ್ದಾರೆ. ಆದರೆ ಅವರಿಬ್ಬರಿಗೂ ಆಪ್ತರಾಗಿರುವ ಕೆಲವರ ಪ್ರಕಾರ, ಸುದೀಪ್ ಹಾಗೂ ದರ್ಶನ್ ಮಧ್ಯೆ ಏನೂ ಇಲ್ಲ. ಅಂದರೆ, ಕೆಲವರಿಗೆ ಇದು ವಿಚಿತ್ರ ಎನಿಸಬಹುದು. ಆದರೆ, ನಿಜವಾಗಿ ಅವರಿಬ್ಬರನ್ನೂ ಬಲ್ಲವರು ಹಾಗೇ ಹೇಳುತ್ತಾರೆ. ಈಗ ಅವರಿಬ್ಬರಲ್ಲಿ ಮೊದಲಿನಂತೆ ಮಿತೃತ್ವವೂ ಇಲ್ಲ, ಶತೃತ್ವವೂ ಇಲ್ಲ!
ಹೌದು, ದಶಕದ ಮೊದಲು ಕನ್ನಡದ ನಟರಾದ ಸುದೀಪ್ ಹಾಗು ದರ್ಶನ್ ಮಧ್ಯೆ ಗಾಢವಾದ ಗೆಳೆತನವಿತ್ತು. ಒಟ್ಟೊಟ್ಟಿಗೇ ಓಡಾಡುತ್ತಿದ್ದರು, ಒಟ್ಟಿಗೇ ಊಟ, ತಿಂಡಿ ಮಾಡುತ್ತಿದ್ದರು, ಮಾತಕತೆ ಎಲ್ಲವೂ ಇತ್ತು. ಆದರೆ, ಅದ್ಯಾವುದೋ ಕೆಟ್ಟ ಘಳಿಗೆ ಎಂಬಂತೆ, ಒಂದು ಸಿನಿಮಾ ಚಾನ್ಸ್ ಕೊಡಿಸಿದ್ದರ ಬಗ್ಗೆ ಮೈಕ್ ಮುಂದೆ ಆಡಿದ್ದ ಮಾತು ಅವರಿಬ್ಬರ ಸ್ನೇಹ ಕದಡಿತು ಎನ್ನಲಾಗಿದೆ. ಅದು ಸ್ನೇಹ ಶುರುವಾಗುವುದರ ಮೊದಲು ನಡೆದಿದ್ದ ಘಟನೆ, ಅಂದು ಅವರಿಬ್ಬರ ಮಧ್ಯೆ ಸರಿಯಾಗಿ ಪರಿಚಯವೇ ಇರಲಿಲ್ಲ.
undefined
ವಿಷ್ಣು ಸರ್ ನಟಿಸಲ್ಲ ಅಂದ್ರೆ ನಾನೂ ನಟಿಸಲ್ಲ ಅಂದಿದ್ರಂತೆ ಜಯಲಲಿತಾ; ಮನಸ್ಸಿನಲ್ಲಿ ಏನಿತ್ತಂತೆ ಗೊತ್ತಾ?
ಆದರೆ, ಯಾರೋ ಇನ್ನೊಬ್ಬರ ಮುಂದೆ ಹೇಳಿದ್ದ ಮಾತೊಂದು ಮೈಕ್ ಮುಂದೆ ಬಂದು ಜಗತ್ತಿಗೇ ಹರಡಿದಾಗ, ಅವರವರಿಗೆ ಗೊತ್ತಿದ್ದ ಸತ್ಯ ಸ್ಥಳದಲ್ಲೇ ಸತ್ತು ಹೋಯಿತು. ಆದರೆ, ಗೊತ್ತಿಲ್ಲದ ಸಂಗತಿ ಅವರಿಬ್ಬರ ಸ್ನೇಹ ಖಾಲಿಯಾಗಲು ಕಾರಣವಾಯಿತು. ಅವರಿಬ್ಬರೂ ಅಂದು ಆ ಒಂದು ಸಿನಿಮಾ ಸಿಕ್ಕಾಗ, ಜೊತೆಯಲ್ಲೇ ಇದ್ದಿದ್ದರೆ ಅವರಿಬ್ಬರಿಗೂ ಒಂದೇ ಸತ್ಯ ಗೊತ್ತಿರುತ್ತಿತ್ತು. ಆಗ ಸುಳ್ಳು ಎನ್ನಲು ಅಥವಾ ಸತ್ಯವೇ ಎಂದು ಸಂಶಯಿಸಲು ಯಾವುದೇ ಅವಕಾಶವೇ ಇರತ್ತಿರಲಿಲ್ಲ.
ಆದರೆ, ಒಬ್ಬರ ಪಾಲಿನ ಸತ್ಯ ಇನ್ನೊಬ್ಬರ ಪಾಲಿಗೆ ಅಸತ್ಯ ಅಥವಾ ಗೊತ್ತೇ ಇಲ್ಲದ ಸಂಗತಿ ಆಗಿದ್ದು, ಒಟ್ಟಿಗಿದ್ದ ಅವರಿಬ್ಬರೂ ದೂರವಾಗಲು ಕಾರಣವಾಯಿತು. ಸುದೀಪ್- ದರ್ಶನ್ ಸ್ನೇಹದ ಜಾಗದಲ್ಲಿ ದ್ವೇಷ ಇಲ್ಲವೇ ಇಲ್ಲ, ಆದರೆ ಪ್ರೀತಿ, ವಿಶ್ವಾಸ ಖಾಲಿಯಾಯಿತು ಅಷ್ಟೇ. ಅದೊಂಥರಾ ಖಾಲಿ ಪಾತ್ರೆ. ಇದು ಹೇಗೆಂದರೆ, ನಿಮ್ಮಲ್ಲಿರುವ ಒಂದು ಬಕೆಟ್‌ನಲ್ಲಿ ನೀರು ತುಂಬಿಸಿಟ್ಟಿದ್ದೀರಿ, ಆದರೆ ಈಗ ಅದನ್ನು ನೀವು ಖಾಲಿ ಮಾಡಿದ್ದೀರಿ ಅಷ್ಟೇ. ಅದು ಖಾಲಿಯಾಗಿದೆ ಹೊರತೂ ನೀರು ಇದ್ದ ಜಾಗದಲ್ಲಿ ನೀವು ಮೂತ್ರವನ್ನೇನೂ ತುಂಬಿಸಿಟ್ಟಿಲ್ಲ ಎನ್ನುವಂತೆ ಅಷ್ಟೇ.
ದಶಕದ ಹಿಂದೆ ಇದ್ದ ಒಡನಾಟದ ಜಾಗದಲ್ಲಿ, ಸ್ನೇಹ ಮಾತುಕತೆ ಇದ್ದಲ್ಲಿ ಈಗ ಏನೂ ಇಲ್ಲ ಅಷ್ಟೇ. ಇಬ್ಬರೂ ಪರಿಚಯವನ್ನೇನೂ ಮರೆತಿಲ್ಲ, ಈಗಲೂ ಒಟ್ಟಿಗೇ ಸಿಕ್ಕರೇ ಪರಸ್ಪರ ಸ್ಮೈಲ್ ಎಕ್ಸ್‌ಚೇಂಜ್ ಆಗುತ್ತವೆ. ಮಾತುಕತೆಗೆ ಅಲ್ಲಿ ಅವಕಾಶವೇ ಇಲ್ಲ, ಏಕೆಂದರೆ ಅವರಿಬ್ಬರ ಮಧ್ಯೆ ಮಾತನಾಡಲೂ ವಿಷಯವೇ ಇಲ್ಲ. ಮೌನವಷ್ಟೇ ಅವರಿಬ್ಬರನ್ನು ಇದ್ದಲ್ಲೇ ಇಡಲು ಸಹಕಾರಿಯಾಗಿದೆ.
ಇದೊಂಥರಾ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ, ಡಿವೋರ್ಸ್ ರೀತಿಯೇ. ಲವ್ ಆಯ್ತು, ಮದುವೆಯೂ ಆಯ್ತು, ಆದ್ರೆ ಹೊಂದಾಣಿಕೆ ಆಗಲಿಲ್ಲ, ದೂರವಾದ್ರು. ಈಗ ಚಂದನ್-ನಿವೇದಿತಾ ಮಧ್ಯೆ ಈಗ ಸಂಬಂಧವೇ ಇಲ್ಲ ಎಂದಮೇಲೆ ದ್ವೇಷ ಎಲ್ಲಿಂದ ಬರಬೇಕು ಹೇಳಿ? ಸುದೀಪ್-ದರ್ಶನ್ ವಿಷ್ಯದಲ್ಲೂ ಅಷ್ಟೇ ಆಗಿರೋದು. ಇದಕ್ಕೆ ಸಾಕ್ಷಿ ಬೇಕು ಎಂದು ನೀವು ಕೇಳಿದರೂ ರೆಡಿ ಇದೆ. ಡೆವಿಲ್ ಸಿನಿಮಾದಲ್ಲಿ ತಾವು ನಟಿಸುತ್ತಿರುವ ಸಂಗತಿಯನ್ನು ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಅವರು ಸುದೀಪ್‌ಗೆ ಹೇಳಿದಾಗ ಅವರು ಖುಷಿಯಿಂದ 'ಆಗಲೀ ಮಾಡು, ಒಳ್ಳೇದಾಗಲಿ' ಎಂದರಂತೆ.
ಸುದೀಪ್ ಅವರ ಮುಖದಲ್ಲಾಗಲೀ ಮಾತಿನಲ್ಲಾಗಲೀ ಯಾವುದೇ ದ್ವೇಷ, ಕೋಪ-ತಾಪ ಕಾಣಿಸಲಿಲ್ಲವಂತೆ. ಅವರಿಬ್ಬರೂ ಸ್ನೇಹದಿಂದ ದೂರವಾದಾಗಲೂ ಅಷ್ಟೇ, ನಟ ದರ್ಶನ್, 'ನಾವಿಬ್ಬರೂ ಇನ್ಮುಂದೆ ಸ್ನೇಹಿತರಲ್ಲ, ಕನ್ನಡ ಚಿತ್ರರಂಗದ ಇಬ್ಬರು ನಟರು ಅಷ್ಟೇ' ಎಂಬ ಹೇಳಿಕೆ ನೀಡಿದ್ದರು. ಅಲ್ಲೂ ಕೂಡ ಅಷ್ಟೇ, 'ನಾವಿಬ್ಬರೂ ಸ್ನೇಹಿತರಲ್ಲ, ಶತ್ರುಗಳು' ಎಂದು ಅವರೂ ಕೂಡ ಹೇಳಿರಲಿಲ್ಲ. ಅವರಿಬ್ಬರ ಮಧ್ಯೆ ಏನೂ ಇಲ್ಲ, ಆದರೆ ಇಬ್ಬರಿಗೂ ಸ್ವತಂತ್ರ ಬದುಕಿದೆ.
ಇದು ಅಂತಿಂಥ ವಿಷ್ಯ ಅಲ್ಲ, ಕೆ ಬಾಲಚಂದರ್ ನಾಲ್ಕು ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟ ವಿಷ್ಣುವರ್ಧನ್?
ಸಾಮಾನ್ಯವಾಗಿ, ನಾವೆಲ್ಲರೂ ಇಬ್ಬರ ಮಧ್ಯೆ ಸ್ನೇಹವಿಲ್ಲ ಅಂದರೆ ದ್ವೇಷವಿದೆ ಅಂದುಕೊಳ್ಳುತ್ತೇವೆ. ಅದು ಬಹಳಷ್ಟು ವೇಳೆ ತಪ್ಪೇ ಆಗಿರುತ್ತದೆ. ಏಕೆಂದರೆ, ಏನೂ ಇಲ್ಲದೇ ಖಾಲಿಯೂ ಆಗಿರಬಹುದು ಅಲ್ಲವೇ? ಸುದೀಪ್ ಹಾಗೂ ದರ್ಶನ್ ಅವರಿಬ್ಬರನ್ನೂ ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರ, ಅವರಿಬ್ಬರಲ್ಲಿ ನಿಜವಾಗಿಯೂ ಈಗ ದ್ವೇಷವೂ ಇಲ್ಲ, ಸ್ನೇಹವೂ ಇಲ್ಲ, ಇರುವುದು ಗ್ಯಾಪ್ ಅಥವಾ ಖಾಲಿತನ ಅಷ್ಟೇ..! ಅದೊಂಥರಾ ಒಳ್ಳೆಯದೇ ಅಲ್ಲವೇ...!?