ವಿಷ್ಣು ಸರ್ ನಟಿಸಲ್ಲ ಅಂದ್ರೆ ನಾನೂ ನಟಿಸಲ್ಲ ಅಂದಿದ್ರಂತೆ ಜಯಲಲಿತಾ; ಮನಸ್ಸಿನಲ್ಲಿ ಏನಿತ್ತಂತೆ ಗೊತ್ತಾ?

By Shriram BhatFirst Published Jul 27, 2024, 12:35 PM IST
Highlights

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರವು ಶತದಿನೋತ್ಸವ ಪೂರೈಸಿ ಹತ್ತುಹಲವು ದಾಖಲೆಗಳನ್ನು ನಿರ್ಮಿಸಿತ್ತು. ಆ ಚಿತ್ರವನ್ನು ನೋಡಿದ ತಮಿಳು ಚಿತ್ರರಂಗ, ಅದನ್ನು ತಮಿಳಿಗೆ ರೀಮೇಕ್ ಮಾಡಲು ಯೋಚಿಸಿ ನಟಿ ಜಯಲಲಿತಾರನ್ನು ನಾಯಕಿಯಾಗಲು ಕೇಳಿತ್ತು. ಆಗ ನಟಿ ಜಯಯಲಿತಾ..

ನಟ ವಿಷ್ಣುವರ್ಧನ್ (Vishnuvardhan) ಅವರು ನಾಗರಹಾವು ಸಿನಿಮಾ ಮೂಲಕ ಸ್ಟಾರ್ ನಟರಾಗಿ ಸ್ಯಾಂಡಲ್‌ವುಡ್ ಸಿನಿರಂಗದಲ್ಲಿ ಮಿಂಚುತ್ತಿದ್ದ ಕಾಲವದು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರವು ಶತದಿನೋತ್ಸವ ಪೂರೈಸಿ ಹತ್ತುಹಲವು ದಾಖಲೆಗಳನ್ನು ನಿರ್ಮಿಸಿತ್ತು. ಆ ಚಿತ್ರವನ್ನು ನೋಡಿದ ತಮಿಳು ಚಿತ್ರರಂಗ, ಅದನ್ನು ತಮಿಳಿಗೆ ರೀಮೇಕ್ ಮಾಡಲು ಯೋಚಿಸಿ ನಟಿ ಜಯಲಲಿತಾರನ್ನು ನಾಯಕಿಯಾಗಲು ಕೇಳಿತ್ತು. ಆಗ ನಟಿ ಜಯಯಲಿತಾ (Jayalalitha) ಹೇಳಿದ್ದೇನು? ಇಲ್ಲಿದೆ ಉತ್ತರ..

ನಾಗರಹಾವು ಸಿನಿಮಾ ತಮಿಳಿಗೆ ರೀಮೇಕ್ ಮಾಡುವಾಗ, ನಟಿ ಜಯಲಲಿತಾ ಬಹುಬೇಡಿಕೆಯ ನಟಿ. ಅವರಿಗೆ ಆ ಸಿನಿಮಾಗೆ ನಾಯಕಿಯಾಗಲು ಕೇಳಿದಾಗ 'ಈ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಆಕ್ಟ್ ಮಾಡ್ತಾರಾ ಅಂತ ಕೇಳಿದ್ರಂತೆ. ಆಗ ಚಿತ್ರತಂಡ, ಇಲ್ಲ, ನಾವು ಬೇರೆ ಹೀರೋ ಹಾಕಿಕೊಂಡು ಇಲ್ಲಿ ಮಾಡ್ತಾ ಇದೀವಿ ಅಂದ್ರಂತೆ. ಆಗ ನಟಿ ಜಯಲಲಿತಾ ಅವರು, 'ಆ ಹೀರೋ ಮಾಡಲ್ಲ ಅಂದ್ರೆ ನಾನೂ ಈ ಸಿನಿಮಾ ಮಾಡಲ್ಲ. ಅಂದಿದ್ದರಂತೆ. ಮನಸ್ಸಿನ ತುಂಬಾ ಅವರಿಗೆ ವಿ‍ಷ್ಣು ಬಗ್ಗೆ ಗೌರವ, ಪ್ರೀತಿ ತುಂಬಿತ್ತಂತೆ.

Latest Videos

ರಾಘವೇಂದ್ರ ಸ್ವಾಮಿಗಳ ಪವಾಡ ರಜನಿಕಾಂತ್ ಲೈಫಲ್ಲಿ ನಡೆದಿತ್ತಾ? ಈ ಬಗ್ಗೆ ರಿಷಬ್ ಶೆಟ್ಟಿ ಏನಂದ್ರು ನೋಡಿ!

ನಟ ವಿಷ್ನುವರ್ಧನ್ ನಟನೆಯ ನಾಗರಹಾವು ಚಿತ್ರವನ್ನು ನೋಡಿ ನಟಿ ಜಯಲಲಿತಾ ಅವರು ಅಷ್ಟು ಇಂಪ್ರೆಸ್ ಆಗಿದ್ದರಂತೆ. ವಿಷ್ಣುವರ್ಧನ್ ಅವರ ಜೊತೆ ನಟಿಸಬೇಕು ಎಂದು ನಟಿ ಜಯಲಲಿತಾ ಕೂಡ ಅಂದುಕೊಂಡಿದ್ದರಂತೆ. ಆದರೆ, ವಿಷ್ಣುವರ್ಧನ್ ಅವರು ಕನ್ನಡ ಬಿಟ್ಟು ತಮಿಳಿನಲ್ಲಿ ನಟಿಸಲು ಆಗ ಒಪ್ಪಲಿಲ್ಲ, ಜಯಲಲಿತಾ ಅವರು ತಮಿಳು ಚಿತ್ರರಂಗ ಬಿಟ್ಟು ಕನ್ನಡಕ್ಕೆ ಬರಲಿಲ್ಲ. ಹೀಗಾಗಿ ನಟ ವಿಷ್ಣುವರ್ಧನ್ ಹಾಗೂ ನಟಿ ಜಯಲಲಿತಾ ಸಂಗಮದ ಸಿನಿಮಾ ಬರಲೇ ಇಲ್ಲ!

ಪುಟ್ಟಣ್ಣ ಕಣಗಾಲರ ಮಾತಿನಂತೆ, ನಟ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗವನ್ನು ತೊರೆದು ತಮಿಳಿಗೆ ಹೋಗದೇ ಇಲ್ಲೇ ಬಹುಬೇಡಿಕೆಯ ನಟರಾಗಿ ಉಳಿದರು. ವಿಷ್ಣು ಅವರಿಗೆ ಸೌತ್ ಹಾಗು ನಾರ್ತ್ ಎಲ್ಲಾ ಕಡೆಯಿಂದ ಅಂದು ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ, ಪುಟ್ಟಣ್ಣ ಕಣಗಾಲರ ಮಾತಿಗೆ ಗೌರವ ಕೊಟ್ಟು, ಕನ್ನಡ ನೆಲದ ಮೇಲೆ ಪ್ರೀತಿಯಿಟ್ಟು, ಕನ್ನಡ ಪ್ರೇಕ್ಷಕರ ಮೇಲೆ ನಂಬಿಕೆಯಿಟ್ಟು ನಟ ವಿಷ್ಣುವರ್ಧನ್ ಕನ್ನಡ ಚಿತ್ರರಂಗವನ್ನೇ ಆಯ್ಕೆ ಮಾಡಿಕೊಂಡರು.

ಇದು ಅಂತಿಂಥ ವಿಷ್ಯ ಅಲ್ಲ, ಕೆ ಬಾಲಚಂದರ್ ನಾಲ್ಕು ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟ ವಿಷ್ಣುವರ್ಧನ್? 

ಒಟ್ಟಿನಲ್ಲಿ, ತಮಿಳಿನಲ್ಲಿ ಸೂಪರ್ ಸ್ಟಾರ್ ನಟಿಯಾಗಿದ್ದರೂ ಜಯಲಲಿತಾ ಅವರು ಕನ್ನಡದಲ್ಲಿ ಆಗತಾನೇ ಸ್ಟಾರ್ ಆಗಿ ಉದಯಿಸಿದ್ದ ನಟ ವಿಷ್ಣುವರ್ಧನ್ ಅವರ ನಟನೆಗೆ ಫಿದಾ ಆಗಿಬಿಟ್ಟಿದ್ದರು. ಜೊತೆಗೆ, ತಾವೊಬ್ಬ ಸೂಪರ್ ಸ್ಟಾರ್ ಆಗಿದ್ದರೂ ಹೊಸ ಕನ್ನಡದ ನಟನ ಜೊತೆ ನಟಿಸಲು ಮನಸ್ಸು ಮಾಡಿದ್ದರು. ಆದರೆ, ಅವರ ಆಸೆ ಕೈಗೂಡಲೇ ಇಲ್ಲ ಎನ್ನುವುದು ಬೇರೆ ಮಾತು. ಆದರೆ, ಅದು ನಟ ವಿಷ್ಣುವರ್ಧನ್ ಅವರ ಘನತೆಯನ್ನು ಹೆಚ್ಚಿಸಿತು, ಕನ್ನಡಿಗರ ಗೌರವಕ್ಕೆ ಸಾಕ್ಷಿಯಾಯಿತು ಎನ್ನಬಹುದು. 

click me!