ರಾಘವೇಂದ್ರ ಸ್ವಾಮಿಗಳ ಪವಾಡ ರಜನಿಕಾಂತ್ ಲೈಫಲ್ಲಿ ನಡೆದಿತ್ತಾ? ಈ ಬಗ್ಗೆ ರಿಷಬ್ ಶೆಟ್ಟಿ ಏನಂದ್ರು ನೋಡಿ!

By Shriram Bhat  |  First Published Jul 27, 2024, 11:06 AM IST

ಮಂತ್ರಾಲಯದಲ್ಲಿ ಗುರು ರಾಘವೇಂದ್ರರ ದರ್ಶನ ಮಾಡಿ ಅಲ್ಲಿ ರಾಯರ ಬಳಿ ನಟ ರಜನಿಕಾಂತ್ ಅವರು ಒಂದು ಹರಕೆ ತರ 'ನಾನು ನೂರನೇ ಸಿನಿಮಾ ಮಾಡಿದರೆ ಅದನ್ನು 'ಶ್ರೀ ರಾಘವೇಂದ್ರಸ್ವಾಮಿ' ಬಗ್ಗೆ ಮಾಡ್ತೀನಿ ಎಂದು ಹೇಳಿಕೊಂಡು ಬಂದಿದ್ದರಂತೆ. ಬಂದ ಬಳಿಕ ನಟ ರಜನಿಕಾಂತ್..


ಕಾಂತಾರ ಖ್ಯಾತಿಯ ನಟ, ನಿರ್ದೇಶಕ ರಿಷಬ್ (Rishab Shetty) ಶೆಟ್ಟಿಯವರು ಏಷ್ಯಾನೆಟ್ ಸುವರ್ಣಾದಲ್ಲಿ ಮಾತನಾಡುತ್ತ, 'ಕೆಲವೊಂದು ಪವಾಡಗಳು, ಘಟನೆಗಳು ನಮ್ಮ ನಿರೀಕ್ಷೆ ಹಾಗೂ ಯೋಚೆನಗಳನ್ನೂ ಮೀರಿ ನಡೆಯುತ್ತವೆ. ಅವುಗಳ ಬಗ್ಗೆ ನಾವು ಯಾವುದೇ ತರ್ಕ, ವಾದಗಳನ್ನು ಮಾಡಿ ಪ್ರಯೋಜನವಿಲ್ಲ. ಅದಕ್ಕೆ ಬಹಳಷಟು ಉದಾಹರಣೆಗಳನ್ನೂ ನೀಡಬಹುದು' ಎಂದಿದ್ದಾರೆ. ಇಲ್ಲಿ, ನಟ ರಜನಿಕಾಂತ್ (Rajinikanth) ತಮ್ಮ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ಹೇಳಿಕೊಂಡಿದ್ದನ್ನು ರಿಷಬ್ ಶೆಟ್ಟಿ ತಮ್ಮ ಮಾತಿನಲ್ಲಿ ವಿವರಿಸಿದ್ದಾರೆ.

ರಿಷಬ್ ಶೆಟ್ಟಿ 'ಕನ್ನಡದಲ್ಲಿ ಅಣ್ಣಾವ್ರು 'ಶ್ರೀ ರಾಘವೇಂದ್ರ ಮಹಾತ್ಮೆ' ಸಿನಿಮಾ ಮಾಡಿದಾಗ ಅದನ್ನು ತಮಿಳಿನಲ್ಲಿ ಆ ಸಿನಿಮಾ, ಪಾತ್ರವನ್ನು ನಟ ರಜನಿಕಾಂತ್ ಮಾಡುತ್ತಾರೆ. ಅದರ ಬಳಿಕ ಅವರಿಗೆ ಹೀರೋ ಆಗಿ ಅವಕಾಶ ಸಿಗೋದಕ್ಕೆ ಶುರು ಆಯ್ತಂತೆ. ಅದಕ್ಕೂ ಮೊದಲು ಅವ್ರು ಮಾಡ್ತಾ ಇದ್ದಿದ್ದು ವಿಲನ್ ಅಥವಾ ಸಪೋರ್ಟಿಂಗ್ ರೋಲ್. ಆಗ, ಸೀದಾ ಮಂತ್ರಾಲಯಕ್ಕೆ ಹೋದ ನಟ ರಜನಿಕಾಂತ್ ಅವರು ರಾಯ ದರ್ಶನ ಮಾಡಿ ಬಂದರಂತೆ. 

Tap to resize

Latest Videos

undefined

ವಿಗ್-ಕೂದಲಿಗೂ ಶನಿಗೂ ಸಂಬಂಧ ಇದೆ, ದರ್ಶನ್‌ಗೆ ಎಚ್ಚರಿಸಿದ್ದೆ:ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ!

ಮಂತ್ರಾಲಯದಲ್ಲಿ ಗುರು ರಾಘವೇಂದ್ರರ ದರ್ಶನ ಮಾಡಿ ಅಲ್ಲಿ ರಾಯರ ಬಳಿ ನಟ ರಜನಿಕಾಂತ್ ಅವರು ಒಂದು ಹರಕೆ ತರ 'ನಾನು ನೂರನೇ ಸಿನಿಮಾ ಮಾಡಿದರೆ ಅದನ್ನು 'ಶ್ರೀ ರಾಘವೇಂದ್ರಸ್ವಾಮಿ' ಬಗ್ಗೆ ಮಾಡ್ತೀನಿ ಎಂದು ಹೇಳಿಕೊಂಡು ಬಂದಿದ್ದರಂತೆ. ಬಂದ ಬಳಿಕ ನಟ ರಜನಿಕಾಂತ್ ಅವರು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿ ಅದೆಲ್ಲವನ್ನೂ ಮರೆತೇಬಿಟ್ಟಿದ್ದರಂತೆ. 

ಆದರೆ, ಅವರ ಹುಟ್ಟುಹಬ್ಬದ ಸಮಯದಲ್ಲಿ, ಅವರ ಯಾವುದೋ ಸಿನಿಮಾ ಸಕ್ಸಸ್‌ ಮೀಟ್‌ನಲ್ಲಿ, ಯಾರೋ ಒಬ್ಬ ಫ್ಯಾನ್ 'ರಜನಿಕಾಂತ್ 99ನೇ ಸಿನಿಮಾ' ಎಂಬ ಬೋರ್ಡ್‌ ಒಂದನ್ನು ಹಿಡಿದು ಬಂದಿದ್ದನಂತೆ. ಅದನ್ನು ನೋಡಿ ರಜನಿಕಾಂತ್ ಅವರಿಗೆ ತಾವು ಹೊತ್ತಿದ್ದ ಹರಕೆ ನೆನಪಾಯಿತಂತೆ. ಅದನ್ನು ನಟ ರಜನಿಕಾಂತ್ ಅವರು ನನಗೆ ರಾಯರೇ ಬಂದು ಮೆಸೇಜ್ ಕೊಟ್ಟಂಗೆ ಇತ್ತು' ಎಂದಿದ್ದಾರೆ. 

ನಟ ರಜನಿಕಾಂತ್ ಅವರು ಹೇಳಿಕೊಂಡಂತೆ, ರಾಯರೇ ಆ ಬೋರ್ಡ್‌ ಹಿಡಿದವನ ರೂಪದಲ್ಲಿ ಬಂದು 'ನಿಂದು 99 ಸಿನಿಮಾಗಳು ಆಗಿವೆ, ಮುಂದಿನದು ನೂರನೇ ಸಿನಿಮಾ, ರಾಘವೇಂದ್ರ ಸ್ವಾಮಿಗಳ ಬಗ್ಗೆ ಮಾಡಬೇಕಾಗಿದೆ, ನಿನ್ನ ಹರಕೆಯಂತೆ ಎಂದು ನೆನಪು ಮಾಡಿಕೊಟ್ಟಂತೆ, ಹಳೆಯ ಹರಕೆಯನ್ನು ನೆನಪಿಸಿಕೊಟ್ಟಂತೆ ಆಗಿತ್ತು' ಎಂದಿದ್ದಾರೆ. 

ಅದರಂತೆ. ಕೆಲವೊಂದು ಘಟನೆಗಳು ನಮ್ಮ ನಿರೀಕ್ಷೆ ಹಾಗೂ ಯೋಜನೆಗಳನ್ನು ಮೀರಿ ನಡೆದು ಹೋಗುತ್ತವೆ. ಅವುಗಳನ್ನು ನಾವು ಕೇಳಿ ಅಥವಾ ನೋಡಿ ನಂಬಬೇಕು ಅಷ್ಟೇ' ಎಂದಿದ್ದಾರೆ 'ಕಾಂತಾರ' ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಕಾಂತಾರ ಸಿನಿಮಾ ಶೂಟಿಂಗ್ ಸಮಯದಲ್ಲಿ, ಮೊದಲು ಮತ್ತು ಆಮೇಲೆ ಕೂಡ ಹೀಗೆಯೇ ಸಾಕಷ್ಟು ಪವಾಡಗಳು ನಡೆದ ಬಗ್ಗೆ ಕೂಡ ವರದಿಯಾಗಿವೆ. ಅವುಗಳೆಲ್ಲವೂ ನಡೆದಾಗ ಅಲ್ಲಿದ್ದು ನೋಡಿದವರಿಗೆ, ಅನುಭವ ಹೊಂದಿದವರಿಗೆ ಮಾತ್ರ ನಿಜ. ಉಳಿದವರಿಗೆ ಅದೊಂದು ನಂಬಿಕೆಯಷ್ಟೇ!

ಇದು ಅಂತಿಂಥ ವಿಷ್ಯ ಅಲ್ಲ, ಕೆ ಬಾಲಚಂದರ್ ನಾಲ್ಕು ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟ ವಿಷ್ಣುವರ್ಧನ್?

ಒಟ್ಟಿನಲ್ಲಿ, ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಹಲವಾರು ಬಾರಿ ತಾವು ಕೆಲವು ಪವಾಡಗಳನ್ನು ಕಣ್ಣಾರೆ ಕಂಡು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದೀಗ ಇಲ್ಲಿ, ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೀವನದಲ್ಲಿ ನಡೆದ ಘಟನೆಯನ್ನೂ ಸಹ ಉಲ್ಲೇಖಿಸಿ ಮಾತನಾಡಿದ್ದಾರೆ. ಕಾಂತಾರ ಸಿನಿಮಾ ಶೂಟಿಂಗ್ ವೇಳೆ ನಡೆದ ಕೆಲವು ಪವಾಡಗಳನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವರು ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ. 

click me!