ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಜೊತೆ ಇರಲ್ವಂತೆ ಶಿವರಾಜ್ ಕುಮಾರ್ : ಫ್ಯಾನ್ಸ್‌ಗೆ ಸಿಗ್ತಿದೆ ಭರ್ಜರಿ ಗಿಫ್ಟ್

Published : Jul 11, 2024, 02:52 PM IST
ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಜೊತೆ ಇರಲ್ವಂತೆ ಶಿವರಾಜ್ ಕುಮಾರ್ : ಫ್ಯಾನ್ಸ್‌ಗೆ ಸಿಗ್ತಿದೆ ಭರ್ಜರಿ ಗಿಫ್ಟ್

ಸಾರಾಂಶ

ನಾಳೆ ಜುಲೈ 12ರಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ 62ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ವಯಸ್ಸಿನಲ್ಲೂ ಒಂದಾದ್ಮೇಲೆ ಒಂದು ಸಿನಿಮಾ ಮಾಡ್ತಿರುವ ಶಿವಣ್ಣ, ನಾಳೆ ಮನೆಯಲ್ಲಿ ಇರೋದಿಲ್ಲ ಎಂದಿದ್ದಾರೆ. ಒಂದ್ಕಡೆ ಇದು ಬೇಸರತರಿಸಿದ್ರೂ ಅವರ ಗಿಫ್ಟ್ ಅಭಿಮಾನಿಗಳಿಗೆ ಹಿಡಿಸುವಂತಿದೆ.   

ನಟ ದರ್ಶನ್ ಜೈಲಿಗೆ ಹೋಗ್ತಿದ್ದಂತೆ ಸ್ಯಾಂಡಲ್ವುಡ್ ನಲ್ಲಿ ಹುಟ್ಟುಹಬ್ಬದ ಸಂಭ್ರಮ ಕಳೆಗುಂದಿದೆ. ಒಬ್ಬರಾದ್ಮೇಲೆ ಒಬ್ಬರಂತೆ ಹುಟ್ಟುಹಬ್ಬವನ್ನು ಕ್ಯಾನ್ಸಲ್ ಮಾಡ್ತಿದ್ದಾರೆ. ಗಣೇಶ್, ಪ್ರಜ್ವಲ್ ದೇವರಾಜ್ ನಂತ್ರ ಶಿವಣ್ಣನ ಸರದಿ. ನಾಳೆ ಅಂದ್ರೆ ಜುಲೈ 12ರಂದು ರಾಜ್ ಕುಟುಂಬದ ಕುಡಿ, ಅಭಿಮಾನಿಗಳ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಈಗಾಗಲೇ ಶಿವಣ್ಣನ ಅಭಿಮಾನಿಗಳು ಇದಕ್ಕೆ ತಯಾರಿ ನಡೆಸಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ಶಿವರಾಜ್ ಕುಮಾರ್, ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಶಿವರಾಜ್ ಕುಮಾರ್ (Shivraj Kumar) ಪ್ರತಿ ವರ್ಷ ತಮ್ಮ ಹುಟ್ಟುಹಬ್ಬ (Birthday) ವನ್ನು ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಾರೆ. ಎಲ್ಲೇ ಹೋಗಿದ್ರೂ ಜುಲೈ 11ರಂದೇ ಮನೆಗೆ ಬರುವ ಅವರು, ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಮಧ್ಯರಾತ್ರಿಯಿಂದಲೇ ಶಿವಣ್ಣ ಮನೆ ಮುಂದೆ ಅಭಿಮಾನಿ (Fan)ಗಳ ದಂಡಿರುತ್ತದೆ. ಎಲ್ಲರ ಕೈ ಕುಲುಕಿ, ಕೇಕ್ ಕತ್ತರಿಸಿ, ಸೆಲ್ಫಿ ನೀಡಿ ಸಂತೋಷದಿಂದ ಬರ್ತ್ ಡೇ ಆಚರಿಸಿಕೊಳ್ತಿದ್ದ ಶಿವಣ್ಣ ಬಹುಶಃ ಇದೇ ಮೊದಲ ಬಾರಿ, ಹುಟ್ಟುಹಬ್ಬದ ದಿನ ಮನೆಯಲ್ಲಿ ತಾವಿರೋದಿಲ್ಲ ಎಂದಿದ್ದಾರೆ.

ಡಾಲಿ ಧನಂಜಯ ಮೊದಲ ಮಾತು; ನಟ ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ!

ಸಾಮಾಜಿಕ ಜಾಲತಾಣದಲ್ಲಿ ಶಿವಣ್ಣ ಒಂದು ಪೋಸ್ಟ್ ಹಾಕಿದ್ದಾರೆ. ಅಭಿಮಾನಿ ದೇವರುಗಳೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬವಾಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡುವ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಬರ್ತ್ ಡೇಗೆ ನಿಮ್ಮ ಜೊತೆ ಇರೋದಿಕ್ಕೆ ಆಗೋದಿಲ್ಲ. ಆದರೆ ವರ್ಷವಿಡಿ ಒಟ್ಟಿಗೆ ಸೆಲೆಬ್ರೇಟ್ ಮಾಡೋಣ. ನಾನು ಬರ್ತ್ಡೇಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ. ನಿಮ್ಮ ಆಶೀರ್ವಾದ ಸದಾ ಇರಲಿ ಶಿವಣ್ಣ ಎಂದು ಶಿವರಾಜ್ ಕುಮಾರ್ ಪೋಸ್ಟ್ ಹಾಕಿದ್ದಾರೆ.

ಅಭಿಮಾನಿಗಳಿಗೆ ಬರ್ತ್ ಡೇ ಗಿಫ್ಟ್ : ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಮನೆಯಲ್ಲಿ ಇಲ್ಲದೆ ಹೋದ್ರೂ ಅವರ ಬಹುನಿರೀಕ್ಷಿತ ಚಿತ್ರ ಭೈರತಿ ರಣಗಲ್ ಟೀಸರ್ ನಾಳೆ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಶಿವರಾಜ್ ಕುಮಾರ್ ಹುಟ್ಟುಹಬ್ಬದಂತೆ ಚಿತ್ರದ ರಿಲೀಸ್ ದಿನಾಂಕ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇನ್ನು ಶಿವರಾಜ್ ಕುಮಾರ್ ಅಭಿನಯದ ಇನ್ನೊಂದು ಚಿತ್ರ ಉತ್ತರಕಾಂಡ್ ಚಿತ್ರದ ಶಿವಣ್ಣ ಕ್ಯಾರೆಕ್ಟರ್ ಟೀಸರ್ ಕೂಡ ನಾಳೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಒಂದಾದ್ಮೇಲೆ ಒಂದು ಉಡುಗೊರೆ ಸಿಗಲಿದೆ. ಭೈರತಿ ರಣಗಲ್, ಉತ್ತರಕಾಂಡ್ ಜೊತೆ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ , ಅವರ ಮಗಳು ನಿವೇದಿತಾ ನಿರ್ಮಾಣದಲ್ಲಿ ಮೂಡಿಬಂದಿರುವ ಫೈರ್ ಫ್ಲೈ ಸಿನಿಮಾದ ಶಿವರಾಜ್ ಕುಮಾರ್ ಲುಕ್ ಕೂಡ ನಾಳೆಯೇ ಬಿಡುಗಡೆ ಮಾಡುವ ಆಸೆಯಲ್ಲಿ ಅಭಿಮಾನಿಗಳಿದ್ದಾರೆ. 

ಸೆಕ್ಯೂರಿಟಿ ಗಾರ್ಡ್‌ಗೆ ದುಬಾರಿ ಫೋನ್ ಗಿಫ್ಟ್‌ ಕೊಟ್ಟ ಯೂಟ್ಯೂಬರ್ ಸಮೀರ್; ಚಪ್ಪಾಳೆ ಎಂದ ನೆಟ್ಟಿಗರು!

ಶಿವಣ್ಣ, 45 ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದು, ನಾಳೆಯೇ ಅವರ ಕ್ಯಾರೆಕ್ಟರ್ ರಿವೀಲ್ ಆಗುವ ಸಾಧ್ಯತೆ ಇದೆ. ಇದಲ್ಲದೆ ಶಿವರಾಜ್ ಕುಮಾರ್ ಭೈರವನ ಕೊನೆ ಪಾಠ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಈ ತಂಡ ಕೂಡ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಿದೆ. ತೆಲಗು ಚಿತ್ರದಲ್ಲೂ ಶಿವರಾಜ್ ಕುಮಾರ್ ನಟಿಸಲು ಸೈ ಎಂದಿದ್ದು, ಅಲ್ಲಿಂದಲೂ ಅಭಿಮಾನಿಗಳಿಗೆ ಗಿಫ್ಟ್ ಸಿಗುವ ನಿರೀಕ್ಷೆ ಇದೆ. ಶಿವಣ್ಣ ಪೋಸ್ಟ್ ಗೆ ಅಭಿಮಾನಿಗಳು ಸ್ಪಂದಿಸಿದ್ದಾರೆ. ಆರೋಗ್ಯ ಮುಖ್ಯ. ಆರೋಗ್ಯವಾಗಿರಿ ನಂತ್ರ ಹಬ್ಬ ಮಾಡೋಣ ಎಂದಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Fact Check: ಕ್ರಿಕೆಟರ್‌ ತಿಲಕ್‌ ವರ್ಮರನ್ನು ಲವ್‌ ಮಾಡುತ್ತಿದ್ದಾರಾ ಕನ್ನಡದ ಈ ನಟಿ? ಯಾರದು?
Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda