ಜೈಲಿನಿಂದಲೇ ಮನವಿ ಮಾಡಿದ ದರ್ಶನ್; ವಕೀಲರ ಮಾತು ಕೇಳಿ ಕಣ್ಣೀರಿಟ್ಟ ಫ್ಯಾನ್ಸ್‌

By Vaishnavi Chandrashekar  |  First Published Jul 11, 2024, 9:18 AM IST

ಅಭಿಮಾನಿಗಳ ಬಳಿ ಮನವಿ ಮಾಡಿದ ನಟ ದರ್ಶನ್. ಇದ್ದಕ್ಕಿದ್ದಂತೆ ಭೇಟಿ ಮಾಡಿದ ವಕೀಲರು ಏನಂತಾರೆ.....


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ನಟ ದರ್ಶನ್ ಸೇರಿಂದ 17 ಮಂದಿ ಜೈಲು ಸೇರಿದ್ದಾರೆ. 13 ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ, ಇನ್ನು ಉಳಿದು ನಾಲ್ವರು ತುಮಕೂರು ಜೈಲಿನಲ್ಲಿ ಇದ್ದಾರೆ. ದರ್ಶನ್ ಜೈಲು ಸೇರುತ್ತಿದ್ದಂತೆ ಸೆಲೆಬ್ರಿಟಿಗಳು ಉರ್ಫ್ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಪೊಲೀಸ್ ಸ್ಟೇಷನ್, ಕೋರ್ಟ್‌, ರಾಜ ರಾಜೇಶ್ವರಿ ನಗರದ ಮನೆ ಮತ್ತು ಪರಪ್ಪನ ಅಗ್ರಹಾರದ ಎದುರು ಜೈ ಕಾರ ಹಾಕಿದರು. ಪೊಲೀಸ್ ಭದ್ರತೆಗೆ ಹೆದರಿ ಸುಮ್ಮನಾದರು. 

ಅಭಿಮಾನಿಗಳಿಗೆ ದರ್ಶನ್‌ ಬಗ್ಗೆ ಮಾಹಿತಿ ಸಿಗುತ್ತಿರುವುದೇ ಮಾಧ್ಯಮಗಳು ಮತ್ತು ವಕೀಲರಿಂದ. ನಿನ್ನೆ ಇದ್ದಕ್ಕಿದ್ದಂತೆ ದರ್ಶನ್‌ರನ್ನು ಭೇಟಿ ಮಾಡಿದ ವಕೀಲರು ಹೊರ ಬಂದು ಮಾಹಿತಿ ಹಂಚಿಕೊಂಡರು. ಮುಂದಿನ ನಡೆ ಏನು ಅಂತ ನಿರ್ಧಾರ ತೆಗೆದುಕೊಳ್ಳಲು ಭೇಟಿ ಮಾಡಿದ್ದು, ಬೇರೆ ಏನೂ ಮಾತನಾಡಲು ಸಾಧ್ಯವಿಲ್ಲ. ಹೋಗಿದ ತಕ್ಷಣ ಅಭಿಮಾನಿಗಳ ಬಗ್ಗೆ ಕೇಳಿದರು ಯಾರೂ ಪಾಪ ಯಾವುದೇ ತರ ತೊಂದರೆ ಮಾಡಿಕೊಳ್ಳುವುದು ಬೇಡ ಅಂದ್ರು ಏಕೆಂದರೆ ಅವರಿಗೆ ಫ್ಯಾನ್ಸ್‌ಗಳು ಅಂದ್ರೆ ತುಂಬಾ ಇಷ್ಟ' ಎಂದು ದರ್ಶನ್ ಪರ ವಕೀಲರು ಮಾತನಾಡಿದ್ದಾರೆ. 

Tap to resize

Latest Videos

ಜೈಲೂಟದಿಂದ 10 ಕೆಜಿ ತೂಕ ಇಳಿದ ದರ್ಶನ್; ಫುಡ್ ಪಾಯಿಸನ್ ಆಗಿದ್ದು ನಿಜವೇ?

ದರ್ಶನ್‌ರನ್ನು ಅಪರೇಟ್ ಆಗಿ ಪವಿತ್ರಾ ಗೌಡರನ್ನು ಸಪರೇಟ್ ಆಗಿ ಮಾತನಾಡಿದ್ದೀನಿ. ಇಲ್ಲಿ ದರ್ಶನ್ ಜೊತೆ ಪವಿತ್ರಾರನ್ನು ಸೇರಿಸಿಕೊಂಡಿದ್ದೀರಾ ಅಂತೀರಾ...ಅಲ್ಲಿ ಇರುವ ಇನ್ನಿಬ್ಬರನ್ನು ನಾನು ಸೇರಿಸಿಕೊಂಡಿದ್ದೀನಿ ಎಂದು ವಕೀಲರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಮೇಲೆ ಎಷ್ಟು ಕಾಳಜಿ ವಹಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.

ಜೈಲೂಟದಿಂದ ಫುಡ್ ಪಾಯಿಸನ್:

ಜೈಲಿನಲ್ಲಿ ನೀಡುತ್ತಿರುವ ಆಹಾರದಿಂದ ದರ್ಶನ್‌ಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ ಎಂದು ಜೂಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಇದರಿಂದ ದರ್ಶನ್ ತುಂಬಾ ತೂಕ ಕಡಿಮೆಯಾಗಿದೆ ಎನ್ನಲಾಗಿದೆ. ಜೈಲು ಅಧಿಕಾರಿಗಳ ನಿರಾಕರಣೆ ಕಾಣೂನುಬಾಹಿರ. ಹೀಗೇ ಮುಂದುವರೆದರೆ ದರ್ಶನ್ ತೂಕ ಕಳೆದುಕೊಳ್ಳಬಹುದು ಇದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈ ಕೋರ್ಟ್‌ ಮುಂದೆ ಮನವಿ ಮಾಡೋದು ಹೊರತು ಪಡಿಸಿ ಮತ್ತೊಂದು ದಾರಿ ಇಲ್ಲ. ಹೀಗಾಗಿ ದರ್ಶನ್‌ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ. 

click me!