ನಟ ದರ್ಶನ್ ಜೈಲಿಗೆ ಹೋಗಿರುವುದು ನಮ್ಮ ಮನೆಯವರೇ ಅಪರಾಧ ಮಾಡಿದ್ದಾರೆಂಬ ಭಾವನೆ ಬರುತ್ತಿದೆ. ಆದರೆ, ದರ್ಶನ್ ತಪ್ಪು ಮಾಡಿದ್ದರೆ ಕಾನೂನಿನ ನಿಯಮಾನುಸಾರ ಶಿಕ್ಷೆಯಾಗಲಿ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ಬೆಂಗಳೂರು (ಜು.11): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಿಗೆ ಹೋಗಿರುವುದು ನಮ್ಮ ಮನೆಯವರೇ ಅಪರಾಧ ಮಾಡಿದ್ದಾರೆಂಬ ಭಾವನೆ ಬರುತ್ತಿದೆ. ಆದರೆ, ದರ್ಶನ್ ತಪ್ಪು ಮಾಡಿದ್ದರೆ ಕಾನೂನಿನ ನಿಯಮಾನುಸಾರ ಶಿಕ್ಷೆಯಾಗಲಿ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ನಟ ದರ್ಶನ್ ಸೇರಿದಂತೆ ಒಟ್ಟು 17 ಜನರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಿರುವ ಬಗ್ಗೆ ಇದೇ ಮೊದಲ ಬಾರಿಗೆ ನಟ ಡಾಲಿ ಧನಂಜಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರು ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಆರೋಪಿಗಳು ನಮ್ಮ ಮನೆಯವರೇ ಆದಾಗ ಏನ್ ಮಾಡೋದು ಹೇಳಿ. ಅಲ್ಲಿ ಒಂದು ದುರಂತ ಆಗಿದೆ. ಜೀವ ಹೋಗಿದೆ. ಆ ಮನುಷ್ಯನ ತಂದೆ, ತಾಯಿ ಮುಖ ನೋಡಿದಾಗ ಬೇಜಾರಾಗುತ್ತದೆ. ತಪ್ಪು ಮಾಡಿದ್ದಾರೆಂದರೆ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಆದರೆ, ಈ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರ ಹೆಸರು ಕೇಳಿಬಂದಿರುವುದು ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ ಎಂದು ಹೇಳಿದರು.
undefined
ನಟ ದರ್ಶನ್‌ಗೆ ಜೈಲೂಟ ತಿಂದು ವಾಂತಿ ಭೇದಿಯಾದರೂ, ಇನ್ನೊಂದು ವಾರ ಮನೆ ಊಟದ ಭಾಗ್ಯವಿಲ್ಲ!
ಇನ್ನು ನಮ್ಮ ನಡುವೆ ಸಮಾಜದಲ್ಲಿ ಜೀವನ ಮಾಡುವ ಒಬ್ಬ ವ್ಯಕ್ತಿಯ ಜೀವ ಹೋದಾಗ ಕಾನೂನಾತ್ಮಕವಾಗಿ ಏನೇನು ಆಗ್ಬೇಕು ಅದು ಆಗತ್ತದೆ. ಅಲ್ಲಿ ಏನೇನು ಆಗಿದಿಯೋ ಅದೆಲ್ಲಾ ಪೊಲೀಸರಿಗೆ ಗೊತ್ತಿರುತ್ತದೆ.. ಆದರೆ, ಕೆಲವೊಂದು ಹೋರಾಟಗಳನ್ನ ಒಂಟಿಯಾಗಿ ಫೈಟ್ ಮಾಡಬೇಕಾಗುತ್ತದೆ. ಈ ಬಗ್ಗೆ ನಾವು ಯಾರೂ ಏನನ್ನೂ ಹೇಳಕ್ಕೆ ಆಗಲ್ಲ. ಈ ಕೊಲೆ ಕೇಸಿನ ಬಗ್ಗೆ ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬ ಉದನ್ನು ನಾವ್ಯಾರೂ ಜಡ್ಜ್ ಮಾಡಕ್ಕೆ ಆಗಲ್ಲ. ಒಂದು ವೇಳೆ ನಟ ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ ಎಂದು ಡಾಲಿ ಧನಂಜಯ ತಿಳಿಸಿದರು.