ಅಂತಿಮ ದರ್ಶನಕ್ಕೆ ಜನಸಂದಣಿ ಹೆಚ್ಚಳ : ಅಪ್ಪು ಅಂತ್ಯಕ್ರಿಯೆ ಭಾನುವಾರ

By Suvarna News  |  First Published Oct 30, 2021, 2:39 PM IST
  • ಅಪ್ಪು ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬರುತ್ತಿರುವ ಹಿನ್ನೆಲೆ
  • ನಾಳೆ ನಡೆಯಲಿದೆ ಪವರ್ ಸ್ಟಾರ್ ಪುನೀತ್ ಅಂತಿಮ ಸಂಸ್ಕಾರ

ಬೆಂಗಳೂರು (ಅ.30) : ಪವರ್‌ ಸ್ಟಾರ್‌ (Power star) ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಅವರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದು  ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಅಪ್ಪು ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಎಲ್ಲರಿಗೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. 

"

Tap to resize

Latest Videos

ಸದ್ಯ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಸಂಜೆಯವರೆಗೂ ಈ ಪ್ರಕ್ರಿಯೆ ನಡೆಯಲಿದ್ದು ರಾತ್ರಿ ವೇಳೆ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸುವುದು ಕಷ್ಟಸಾಧ್ಯವಾದ ಕಾರಣ ನಾಳೆಗೆ ಮುಂದೂಡಲಾಗಿದೆ. ಈ ಬಗ್ಗೆ ನಟ ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗು ಮಾತನಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basvaraja Bommai) ಮಾಹಿತಿ ನೀಡಿದ್ದಾರೆ. 

ತಂದೆ ತಾಯಿಗೆ ತಕ್ಕ ಮಗ ಪುನೀತ್: ಸಾ.ರಾ ಗೋವಿಂದ್

ಪುತ್ರಿ ಆಗಮನ

ಇನ್ನು ಪುನೀತ್ ರಾಜ್‌ ಕುಮಾರ್‌ ಅವರ ಪುತ್ರಿ ಸದ್ಯ ದೆಹಲಿಗೆ ಆಗಮಿಸಿದ್ದು ಅವರೂ ಬೆಂಗಳೂರಿಗೆ ಆಗಮಿಸುವುದು ಸಂಜೆಯ ಸಮಯವಾಗುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರುನಾಡ ಪವರ್ ಸ್ಟಾರ್ ಅಂತಿಮ ದರ್ಶನ ಪಡೆಯಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ. ಅಪಾರ ಸಂಖ್ಯೆಯಲ್ಲಿ ಬರುವ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. 

ಬಿಗಿ ಭದ್ರತೆ

, ನಗರ ವ್ಯಾಪ್ತಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಎರಡು ದಿನಗಳ ಕಾಲ ಬಿಗಿ ಪೊಲೀಸ್‌ ಬಂದೋಬಸ್ತ್ (Police security) ಕಲ್ಪಿಸಲಾಗಿದೆ. 

ಹೃದಯಾಘಾತದಿಂದ (Heart attack) ಪುನೀತ್‌ ಮೃತಪಟ್ಟಸುದ್ದಿ ತಿಳಿದ ಕೂಡಲೇ ರಾಜಧಾನಿಯ ಬಹುತೇಕ ಕಡೆ ‘ಅಘೋಷಿತ ಬಂದ್‌’ (bandh) ವಾತಾವರಣ ನೆಲೆಸಿತು. ಅಲ್ಲದೆ, ವಸಂತನಗರದ ವಿಕ್ರಂ ಆಸ್ಪತ್ರೆ (Vikram hospital) ಸಮೀಪ ಪವರ್‌ ಸ್ಟಾರ್‌ ಹಾಗೂ ಡಾ.ರಾಜ್‌ ಕುಮಾರ್‌ (Dr Rajkumar) ಕುಟುಂಬದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ನಟನ ಅಂತಿಮ ಯಾತ್ರೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಿದ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamal Panth) ಅವರು, ಸಮವಸ್ತ್ರದೊಂದಿಗೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ತಕ್ಷಣವೇ ಕರ್ತವ್ಯಕ್ಕೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಹಾಜರಾಗುವಂತೆ ಸಂದೇಶ ರವಾನಿಸಿದರು.

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

ನಟನ ಅಂತ್ಯಕ್ರಿಯೆ ಮುಗಿಯುವರೆಗೆ ತಮ್ಮ ಠಾಣಾ ಸರಹದ್ದಿನಲ್ಲಿ ಗಸ್ತು ಹೆಚ್ಚಿಸಬೇಕು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಡೆ ಹೆಚ್ಚಿನ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು. ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜನ ಸೇರುವ ಮಾರುಕಟ್ಟೆಗಳು, ಪ್ರಮುಖ ಜಂಕ್ಷನ್‌ಗಳು ಹಾಗೂ ಮಾಲ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ವದಂತಿಗಳಿಗೆ ಕಿವಿಕೊಡಬೇಡಿ:

ಇನ್ನು ವದಂತಿಗಳಿಗೆ ಕಿವಿಗೊಡದಂತೆ ನಗರದಲ್ಲಿ ಶಾಂತಿ ಕಾಪಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರು ಮನವಿ ಸಹ ಮಾಡಿದರು.

‘ದಯವಿಟ್ಟು ಯಾವುದೇ ವದಂತಿಗಳನ್ನು ನಂಬಬೇಡಿ ಹಾಗೂ ಯಾವುದೇ ರೀತಿಯ ವದಂತಿಗಳನ್ನು ಪ್ರಚಾರ ಮಾಡಬೇಡಿ. ಬೆಂಗಳೂರು ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಗಳೂರು ಪೊಲೀಸರಾದ ನಾವು ನಗರದಲ್ಲಿ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಭರವಸೆಯನ್ನು ನೀಡುತ್ತೇವೆ ಎಂದು ಇಲಾಖೆ ಟ್ವೀಟ್‌ ಮಾಡಿತ್ತು

click me!