ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ

Published : Mar 19, 2022, 09:17 AM ISTUpdated : Mar 19, 2022, 09:32 AM IST
ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ

ಸಾರಾಂಶ

*  ನಾಳೆ ಬೆಂಗಳೂರಿನಲ್ಲಿ ಪ್ರದಾನ: ಎಸ್‌ಟಿಎಸ್‌, ಜಿಟಿಡಿ *  ನಂದಿನಿ ರಾಯಭಾರಿಯಾಗಿ ಸಲ್ಲಿಸಿದ ಸೇವೆಗೆ ಗೌರವ *  ಕಳೆದ 20 ವರ್ಷದಿಂದ ಸಹಕಾರ ರತ್ನ ಪ್ರಶಸ್ತಿ ನೀಡುತ್ತಿರುವ ಸಹಕಾರ ಮಹಾಮಂಡಳ   

ಬೆಂಗಳೂರು(ಮಾ.19):  ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ‘ಸಹಕಾರ ರತ್ನ’ (Saharakara Ratna) ಪ್ರಶಸ್ತಿ(Award) ಪ್ರದಾನ ಸಮಾರಂಭವು ಭಾನುವಾರ ನಡೆಯಲಿದ್ದು, ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಶುಕ್ರವಾರ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌(ST Somashekhar) ಮತ್ತು ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಮತ್ತು ಶಾಸಕ ಜಿ.ಟಿ.ದೇವೇಗೌಡ(GT Devegowda) ಈ ವಿಷಯ ತಿಳಿಸಿದರು.

ಪುನೀತ್‌ ರಾಜ್‌ಕುಮಾರ್‌ ಅವರು ನಂದಿನಿ(Nandini) ಉತ್ಪನ್ನದ ರಾಯಭಾರಿಯಾಗಿದ್ದರು(Ambassador). ಹೀಗಾಗಿ ಅವರಿಗೆ ಮರಣೋತ್ತರ(Posthumous) ಸಹಕಾರ ರತ್ನ ಪಶಸ್ತಿ ಮಾಡಲು ನಿರ್ಧರಿಸಲಾಗಿದೆ. ಭಾನುವಾರ ನಗರದ ಕೆಂಗೇರಿ ಉಪನಗರದಲ್ಲಿರುವ ಗಣೇಶ ಮೈದಾನದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಮುಖ್ಮಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

ಈ ಹಿಂದೆ ಪ್ರತಿ ವರ್ಷ ಆರು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಕಳೆದ ವರ್ಷ ಜಿಲ್ಲೆಗೆ ಒಬ್ಬರಂತೆ ನಿರ್ಧರಿಸಲಾಗಿದೆ. 40-50 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಒಟ್ಟು 100 ಅರ್ಜಿಗಳು ಬಂದಿದ್ದವು. ಕೆಲ ಡಿಸಿಸಿ ಬ್ಯಾಂಕ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವವರ ಜತೆಗೆ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಆಯ್ಕೆ ಮಾಡಿದ್ದೇವೆ. ಇದರ ಜತೆಗೆ ಸ್ತ್ರೀಶಕ್ತಿ ಸಂಘಗಳಿಗೆ 20 ಕೋಟಿ ರು. ಸಹಾಯಧನ ನೀಡುತ್ತೇವೆ. ಪ್ರಶಸ್ತಿ ವಿಜೇತರಿಗೆ 15 ಗ್ರಾಂ ಚಿನ್ನದ ಪದಕ, ಪ್ರಮಾಣ ಪತ್ರ ನೀಡಿ ಗೌರವಿಸುತ್ತೇವೆ ಎಂದು ಮಾಹಿತಿ ನೀಡಿದರು.

ಸಹಕಾರ ಕ್ಷೇತ್ರದ ಸರ್ವರ್ತೋಮುಖ ಬೆಳವಣಿಗೆಗೆ ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದರಿಂದ ಹೊಸಪೀಳಿಗೆ, ವಿಶೇಷವಾಗಿ ಯುವಜನರು ಸಹಕಾರ ಕ್ಷೇತ್ರಕ್ಕೆ ಬರುತ್ತಾರೆಂಬ ವಿಶ್ವಾಸದೊಂದಿಗೆ 2003ರಲ್ಲಿ ವಿಶೇಷ ಯೋಜನೆ ರೂಪಿಸಿ ಜಾರಿಗೊಳಿಸಲಾಯಿತು. ಸಹಕಾರಿ ಚಳವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಹಕಾರ ಸಂಘ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ, ಪೋಷಿಸಿಕೊಂಡು ಬಂದಿರುವ ಸಹಕಾರಿ ಮುಖಂಡರನ್ನು, ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ‘ಕರ್ನಾಟಕ ರತ್ನ’(Karnataka Ratna) ಪ್ರಶಸ್ತಿ ನೀಡಿ ಗೌರವಿಸುವ ಪ್ರಕ್ರಿಯೆ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯ ಜಾರಿ ಹೊಣೆಯನ್ನು ಸರ್ಕಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಕ್ಕೆ ವಹಿಸಿದೆ. ಕಳೆದ 20 ವರ್ಷದಿಂದ ಸಹಕಾರ ಮಹಾಮಂಡಳವು ಸಹಕಾರ ರತ್ನಪ್ರಶಸ್ತಿ ಯೋಜನೆಯನ್ನು ತೃಪ್ತಿಕರವಾಗಿ ಜಾರಿಗೊಳಿಸುತ್ತಾ ಬಂದಿದೆ ಎಂದರು.

'ಜೇಮ್ಸ್' ಸಂಭ್ರಮಕ್ಕೆ ಬ್ರೇಕ್; ಪುನೀತ್ ಅಭಿಮಾನಿಗಳಿಗೆ ಭಾರಿ ನಿರಾಸೆ

ಪುನೀತ್ ರಾಜ್‌ಕುಮಾರ್ ಬಯೋಗ್ರಫಿ ‘ನೀನೇ ರಾಜಕುಮಾರ’ ಬಿಡುಗಡೆ ಮಾಡಿದ ಕಿಚ್ಚ

ಬೆಂಗಳೂರು: ಪುನೀತ್  ರಾಜ್‌ಕುಮಾರ್​ ಅವರ ಜೀವನ ಕಥನದ ಕೃತಿ (Puneeth Rajkumar Biography) ಹೊರ ಬಂದಿದೆ. ಕಿಚ್ಚ ಇದನ್ನು ಅನಾವರಗೊಳಿಸಿದ್ದರು. ಮಾ.15 ರಂದು ಪುನೀತ್ ರಾಜ್‌ಕುಮಾರ್(Puneeth Rajkumar) ಅವರ ಬಯೋಗ್ರಫಿ 'ನೀನೇ ರಾಜಕುಮಾರ್' ಕೃತಿಯನ್ನು  ಸಿನಿಮಾ ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಬರೆದಿದ್ದು, ಅದನ್ನು ಇಂದು(ಮಂಗಳವಾರ) ಬೆಂಗಳೂರಿನಲ್ಲಿ ನಟ ಕಿಚ್ಚ ಸುದೀಪ್ (Kichcha Sudeep) ಬಿಡುಗಡೆ ಮಾಡಿದ್ದರು. 

ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದ್ದು, ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದು.  ಈ ಕೃತಿ ಪುನೀತ್ ರಾಜ್ ಕುಮಾರ್ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?