'ಡಾಲರ್ಸ್ ಪೇಟೆಯ ಬ್ಯಾಂಕ್ ನಿಂದ ಹಣ ನಾಪತ್ತೆ' ಜುಲೈಗೊಂದು ಅದ್ಭುತ ಕನ್ನಡ ಸಿನಿಮಾ

Published : Mar 19, 2022, 05:00 AM ISTUpdated : Mar 19, 2022, 05:20 AM IST
'ಡಾಲರ್ಸ್ ಪೇಟೆಯ ಬ್ಯಾಂಕ್ ನಿಂದ ಹಣ ನಾಪತ್ತೆ' ಜುಲೈಗೊಂದು ಅದ್ಭುತ ಕನ್ನಡ ಸಿನಿಮಾ

ಸಾರಾಂಶ

* ವಿಭಿನ್ನ ಕಥಾಹಂದರದ ಡಾಲರ್ಸ್ ಪೇಟೆ * ಮೂರನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ * ಜುಲೈನಲ್ಲಿ ತರೆಯ ಮೇಲೆ ಬರಲಿದೆ * ಹೊಸ ಪ್ರತಿಭೆಗಳ ವಿನೂತನ ಪ್ರಯತ್ನ

ಬೆಂಗಳೂರು(ಮಾ. 19)  ಬೆಂಗಳೂರಿನ (Bengaluru) ಡಾಲರ್ಸ್ ಪೇಟೆಯ (Dollars Pete) ಬ್ಯಾಂಕ್ ನಿಂದ ಹಣ ನಾಪತ್ತೆ.. ಚೂರು ಕನ್ ಪ್ಯೂಸ್ ಆದ್ರಾ.. ಇದೇನು ಅಪರಾಧ ಪ್ರಕರಣ ಅಲ್ಲ.. ಇದು ಸಿನಿಮಾ ಕತೆ.. ರೋಚಕವಾಗಿದೆ! ವಿಭಿನ್ನ ಕಥಾಹಂದರ (Story) ಹೊಂದಿರುವ 'ಡಾಲರ್ಸ್ ಪೇಟೆ' ಸಿನಿಮಾ  36  ದಿನಗಳ ಚಿತ್ರೀಕರಣ ಮುಗಿಸಿ ನಮೂರನೇ ಹಂತಕ್ಕೆ ತಯಾರಿ ನಡೆಸಿದೆ.

ಡಾಲರ್ಸ್ ಪೇಟೆಗೆ ಪೆಂಟ್ರಿಕ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯ ಪೂಜಾ ಮೋಹನ್ ಹಣ ಹೂಡಿದ್ದಾರೆ. ಮದಗಜ(Madagaja), ಮಾರ್ಫಿ, ಸಕೂಚಿ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮೋಹನ್ ಮುನಿನಾರಾಯಣಪ್ಪ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ.

ಡಾಲರ್ಸ್ ಪೇಟೆಯಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ, ಮೆಟ್ರೋಸಾಗಾ ಖ್ಯಾತಿಯ ಆಕರ್ಷ ಕಮಲ, ಕಿರಿಕ್ ಪಾರ್ಟಿಯ (Kirik Party) ರಾಘವೇಂದ್ರ, ಮದಗಜ ಮತ್ತು ರಾಬರ್ಟ್ ನಲ್ಲಿ ಕಾಣಿಸಿಕೊಂಡಿದ್ದ ದತ್ತು ಕಾಣಿಸಿಕೊಂಡಿದ್ದಾರೆ. ಯುವ ಪ್ರತಿಭೆಗಳಾದ ಕುಶಾಲ್, ಲೊಕೇಶ್, ವೆಂಕಟ್, ವಿಶ್ವ, ಪೃಥ್ವಿ ತೆರೆಯ ಮೇಲೆ ಬರಲಿದ್ದಾರೆ. ಬರ್ತ್ 10000BC  ಖ್ಯಾತಿಯ ಆನಂದ್ ಸುಂದರೇಶ್ ಕ್ಯಾಮರಾ ಕಣ್ಣು ಚಿತ್ರಕ್ಕಿದೆ. ಮಹೇಶ್ ತೊಗಟ ಸಂಕಲನದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸೂರಜ್ ಜೋಯಿಶ್ ಸಂಗೀತದಲ್ಲಿ ಮೂರು ಅದ್ಭುತ ಹಾಡುಗಳು ಮೂಡಿಬಂದಿವೆ. ಮುಂದಿನ ಜುಲೈ ವೇಳೆಗೆ ಚಿತ್ರ ತೆರೆಯ ಮೇಲೆ ಬರಲಿದ್ದು ಮೊದಲ ಪೋಸ್ಟರ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ. 

The Kashmir Files: 100 ಕೋಟಿ ಕಲೆಕ್ಷನ್‌ನತ್ತ 'ದಿ ಕಾಶ್ಮೀರ್​ ಫೈಲ್ಸ್' ಸಿನಿಮಾ

ಕರ್ನಾಟಕಲ್ಲಿ ಜೇಮ್ಸ್ ಅಬ್ಬರ:   ಪುನೀತ್‌ ರಾಜ್‌ಕುಮಾರ್‌(Puneeth Rajkumar) ನಟನೆಯ  ‘ಜೇಮ್ಸ್‌’ಗೆ(James) ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ 386 ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ದಾಖಲಾಗಿದೆ. ಮೊದಲ ದಿನವೇ ಅಂದಾಜು 20 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ.

ಮೊದಲ ದಿನ ಬೆಂಗಳೂರಿನ(Bengaluru) ವೀರೇಶ್‌, ಪ್ರಸನ್ನ, ವೀರಭದ್ರೇಶ್ವರ ಥಿಯೇಟರ್‌ಗಳಲ್ಲಿ ಬೆಳಗಿನ ಜಾವ 4.05ಕ್ಕೆ ಜೇಮ್ಸ್‌ ಪ್ರದರ್ಶನ ಆರಂಭವಾಗಿತ್ತು. ಬೆಳಗಿನ ಜಾವ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡ ಚಿತ್ರವೊಂದು ಪ್ರದರ್ಶನ ಕಂಡಿದ್ದು ಇದೇ ಮೊದಲು. 

ಮಾರ್ಟಿನ್ ಏನ್ ಮಾಡ್ತಾ ಇದ್ದಾನೆ? ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) 'ಪೊಗರು'  ಚಿತ್ರದ ನಂತರ 'ಮಾರ್ಟಿನ್' (Martin) ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ (AP Arjun) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಶೂಟಿಂಗ್ ಸಾಗಿದೆ.

ಮಾರ್ಟಿನ್' ಚಿತ್ರತಂಡದಿಂದ ಸ್ಪೆಷಲ್ ಮಾಹಿತಿಯೊಂದು ಬಹಿರಂಗವಾಗಿದೆ. ಆರು ತಿಂಗಳ ಹಿಂದೆ 'ಮಾರ್ಟಿನ್' ಚಿತ್ರದ ಟೈಟಲ್ ಟೀಸರ್ ಬಿಟ್ಟಿದ್ದ ರಿಲೀಸ್ ಮಾಡಿದ್ದ ಧ್ರುವ ಸರ್ಜಾ ಅನಂತರ ಯಾಕೆ ಸೈಲೆಂಟ್ ಆಗಿಬಿಟ್ಟರು ಅಂತಾ ಅವರ ಅಭಿಮಾನಿಗಳು ಯೋಚಿಸಿದ್ದಕ್ಕೆ ಈಗ ಉತ್ತರ ಸಿಕ್ಕಿದೆ. 

ನಿರ್ದೇಶಕ ಎ.ಪಿ ಅರ್ಜುನ್ ಬತ್ತಳಿಕೆಯಿಂದ ಬರುತ್ತಿರುವ 'ಮಾರ್ಟಿನ್' ಹೈ ಬಜೆಟ್​ನಲ್ಲಿ ರೆಡಿಯಾಗುತ್ತಿದೆ.  ಕಥೆ ಡಿಮ್ಯಾಂಡ್ ಮಾಡಿದನ್ನು ತೆರೆ ಮೇಲೆ ತರೋದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಅರ್ಜುನ್. ದೊಡ್ಡ ಗ್ಯಾಪ್ ನಂತರ ಜೋಡಿ ಒಂದಾಗಿ ಕೆಲಸ ಮಾಡುತ್ತಿದೆ.

ಸ್ಯಾಂಡಲ್ ವುಡ್ ಕೊರೋನಾ ನಂತರ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ.  ಕೊರೋನಾ ನಿಯಮಗಳ ಕಾರಣ ಬಹುತೇಕ ಕಾಳ ಚಿತ್ರಮಂದಿರಗಳು ನಿರ್ಬಂಧ ಅನುಭವಿಸಿದ್ದವು. ಹೊಸ ವರ್ಷ ಆರಂಭವಾದ ನಂತರ ನಿಧಾನಕ್ಕೆ ತೆರೆದುಕೊಂಡವು. ಕೋಟಿಗೊಬ್ಬ, ಸಲಗ ಸಿನಿಮಾಗಳು ಸದ್ದು ಮಾಡಿದ್ದು ಈಗ ಜೇಮ್ಸ್ ಸರದಿ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!