ನಟ ಯಶ್ ಅವರಿಗೆ ಇಂದು (ಜ.8) ಹುಟ್ಟುಹಬ್ಬದ ಸಂಭ್ರಮ. ಒಮಿಕ್ರೋನ್ ಆತಂಕದ ವಾತಾವರಣದಲ್ಲಿರುವ ಕಾರಣ ಈ ಬಾರಿಯೂ ರಾಕಿಂಗ್‌ಸ್ಟಾರ್ ಯಶ್ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಮನೆಯಲ್ಲೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಜನ್ಮ ದಿನದ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ.
ನಟ ಯಶ್ (Yash) ಅವರಿಗೆ ಇಂದು (ಜ.8) ಹುಟ್ಟುಹಬ್ಬದ ಸಂಭ್ರಮ. ಒಮಿಕ್ರೋನ್ (Omicron) ಆತಂಕದ ವಾತಾವರಣದಲ್ಲಿರುವ ಕಾರಣ ಈ ಬಾರಿಯೂ ರಾಕಿಂಗ್‌ಸ್ಟಾರ್ ಯಶ್ ಅವರು ತಮ್ಮ ಹುಟ್ಟುಹಬ್ಬವನ್ನು (Birthday) ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ. ಮನೆಯಲ್ಲೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಜನ್ಮ ದಿನದ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶಿಸಿ, ಯಶ್ ನಟಿಸಿರುವ ಕೆಜಿಎಫ್ 2 (KGF 2) ಸಿನಿಮಾದ ಹೊಸ ಪೋಸ್ಟರ್ (Poster) ಅಥವಾ ದೃಶ್ಯಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ನರ್ತನ್ (Nartan) ನಿರ್ದೇಶನದ ಯಶ್ ಅವರ ಮುಂದಿನ ಚಿತ್ರ ಘೋಷಣೆ ಮಾಡುವ ಸಾಧ್ಯತೆ ಕೂಡ ಇಲ್ಲದೇ ಇಲ್ಲ.
ಯಶ್ ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದು, ಕೆಜಿಎಫ್ 2 ಚಿತ್ರದ ಹೊಸ ಪೋಸ್ಟರ್ ಇತ್ಯಾದಿ ಬಿಡುಗಡೆ ಮಾಡದೇ ಇರುವುದು, ಅವರ ಹೊಸ ಸಿನಿಮಾ ಘೋಷಣೆ ಆಗದೇ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸಾಮಾಜಿಕ ಜಾಲತಾಣಗಳ (Social Media) ಮೂಲಕ ಅಪ್‌ಡೇಟ್ ಕೇಳುತ್ತಲೇ ಇರುವ ಅಭಿಮಾನಿಗಳ (Fans) ಬೇಸರ ತಣಿಸಲು ಯಶ್ ಏನು ಮಾಡುತ್ತಾರೆ ಅನ್ನುವುದು ಇವತ್ತು ತಿಳಿಯಲಿದೆ.
ದುಡ್ಡಿಗಾಗಿ ಸಿನಿಮಾ ಮಾಡಲ್ಲ, ಜವಾಬ್ದಾರಿಯಿಂದ ಆಯ್ಕೆ ಮಾಡಿಕೊಳ್ಳುವೆ ಎಂದ ಯಶ್!
ಅಭಿಮಾನಿಗಳು ಯಶ್ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇಂದು ದೊಡ್ಡ ಅಭಿಯಾನವನ್ನೇ ಮಾಡಲು ಸಜ್ಜಾಗಿದ್ದಾರೆ. ಹೌದು! ಕೋವಿಡ್ (Covid) ಕಾರಣಕ್ಕೆ ಈ ಬಾರಿಯೂ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿರುವ ಯಶ್, ಅಭಿಮಾನಿಗಳು ತಾವು ಇರುವಲ್ಲಿಂದಲೇ ಶುಭ ಹಾರೈಸಬೇಕು ಎಂದು ಕೋರಿದ್ದಾರೆ.
ಹಾಗಾಗಿ ಅಭಿಮಾನಿಗಳು 'ಕೆಜಿಎಫ್ 2' ಸಿನಿಮಾದ ಹೊಸ ಪೋಸ್ಟರ್‌ನ್ನು ಟ್ರೆಂಡಿಂಗ್ ಮಾಡಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಯಶ್ ಹುಟ್ಟು ಹಬ್ಬದ ಪ್ರತೀ ವರ್ಷವೂ ಒಂದಲ್ಲಾ ಒಂದು ವಿಶೇಷತೆ ಇರುತ್ತೆ. ಕೇಕ್, ಕಟೌಕ್ ಮೂಲಕ ಯಶ್ ಈ ಹಿಂದೆ ದಾಖಲೆ ಮಾಡಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನ ಟ್ರೆಂಡ್ ಹುಟ್ಟು ಹಾಕಿ ದಾಖಲೆ ಬರೆಯಲು ಯಶ್ ಅಭಿಮಾನಿಗಳು ಮುಂದಾಗಿದ್ದು, ಟ್ವಿಟ್ಟರ್‌ನಲ್ಲಿ (Twitter) ಯಶ್‌ಬಾಸ್ ಬರ್ತ್‌ಡೇ ಎನ್ನುವ ಆ್ಯಶ್ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಇಂದು 24 ಗಂಟೆಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಗುಜರಾತ್‌ನಿಂದ ಬಂಗಾಳದವರೆಗೂ ಪ್ಯಾನ್ ಇಂಡಿಯಾ ಟ್ವೀಟರ್ ಟ್ರೆಂಡಿಂಗ್ ಮಾಡಲು ಸಜ್ಜಾಗಿದ್ದಾರೆ.
ಇನ್ನು ಹೊಂಬಾಳೆ ಫಿಲಂಸ್ (Hombale Films) ಯಶ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿಯನ್ನು (Common DP) ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಯಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಹೊಂಬಾಳೆ ನಿರ್ಧರಿಸಿದೆ. ಯಶ್ ಜನ್ಮದಿನದಂದು 'ಕೆಜಿಎಫ್ 2' ಟ್ರೇಲರ್ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕ ದೂರವಿರುವ ಕಾರಣ ಈಗಲೇ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ ಎಂದು ಯಶ್ ಹೇಳಿದ್ದಾರೆ.
3 Years Of KGF: ದೃಶ್ಯಕಾವ್ಯದ ವಿಡಿಯೋ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್
ಕೆಜಿಎಫ್' ಸಕ್ಸಸ್ ಬಳಿಕ ಇದೀಗ ಇಡೀ ಭಾರತೀಯ ಚಿತ್ರರಂಗವೇ 'ಕೆಜಿಎಫ್ 2' ಚಿತ್ರಕ್ಕಾಗಿ ಕಾತುರದಿಂದ ಕಾದು ಕುಳಿತಿದೆ. ಈಗಾಗಲೆ ಬಿಡುಗಡೆಯಾಗಿರುವ 'ಕೆಜಿಎಫ್ 2' ಚಿತ್ರದ ಟೀಸರ್ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಅದರಂತೇ ಪ್ರೇಕ್ಷಕರು ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ಕ್ಕೆ ವಿಶ್ವದಾದ್ಯಾಂತ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಮತ್ತೊಮ್ಮೆ ಯಾವ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕು. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ.