ಕನ್ನಡದ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ಗೆ ಬೇಸರದ ಸುದ್ದಿ ಇದೆ. ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ..! ಟಾಕ್ಸಿಕ್ ನೋಡಲು ಇನ್ನೂ ಒಂದು ವರ್ಷ..
ಕನ್ನಡದ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ಗೆ ಬೇಸರದ ಸುದ್ದಿ ಇದೆ. ಈ ವರ್ಷ ತೆರೆಗೆ ಬರಲ್ಲ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ..! ನಟ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲಿಕ್ಕೆ ಇನ್ನೂ ಒಂದು ವರ್ಷ ಕಾಯಲೇಬೇಕು..!
ಈ ಮೊದಲು 2025 ಏಪ್ರಿಲ್ 10ಕ್ಕೆ ನಿಗದಿಯಾಗಿದ್ದ ಚಿತ್ರದ ಬಿಡುಗಡೆ ಇದೀಗ ಮುಂದಕ್ಕೆ ಹೋಗಿದೆ. ಚಿತ್ರೀಕರಣ ತಡವಾಗಿದ್ದರಿಂದ ಸಿನಿಮಾ ಬಿಡುಗಡೆ ಒಂದು ವರ್ಷಕ್ಕೆ ಮುಂದಕ್ಕೆ ಹೋಗಿದೆ. ಚಿತ್ರದ ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಾಕಿಂಗ್ ಸ್ಟಾರ್ ಯಶ್, ಅದು ಮಾರ್ಚ್ 19, 2026ಕ್ಕೆ ಬಿಡುಗಡೆಯಾಗಲಿದೆ ಎಂದಿದ್ದಾರೆ. ಆದ್ದರಿಂದ ಯಶ್ ನಟನೆಯ ಟಾಕ್ಸಿಕ್ ಚಿತ್ರವನ್ನು 2026ರಲ್ಲಿ ನೋಡಬಹುದು. ಯಶ್ ಜೊತೆ ಕಿಯಾರಾ ಅಡ್ವಾನಿ ರೊಮಾನ್ಸ್ ನೋಡಲು ಇನ್ನೂ ಒಂದು ವರ್ಷ ಕಾಯ್ಬೇಕು, ಓಕೆ ನಾ?
ಯಶ್ ನಟನೆಯ ಹಿಂದಿನ ಚಿತ್ರ ಕೆಜಿಎಫ್-2 ತೆರೆಕಂಡು ಆಗಲೇ 3 ವರ್ಷವಾಗಿದೆ. ಯಶ್ ಅಭಿಮಾನಿಗಳು ಟಾಕ್ಸಿಕ್ ಚಿತ್ರಕ್ಕಾಗಿ ಕಾಯುತ್ತಲೇ ಇದ್ದಾರೆ. ಕಾರಣ, ಕೆಜಿಎಫ್ ಇಫೆಕ್ಟ್.. ಯಶ್ ನಟನೆಯ ಕೆಜಿಎಫ್ ಸಿನಿಮಾ ಭಾಗ-1 ಹಾಗೂ ಭಾಗ-2 ನೋಡಿದವರು ಯಶ್ ಮುಂಬರುವ ಟಾಕ್ಸಿಕ್ ಚಿತ್ರಕ್ಕೆ ಕಾಯುವಂತಾಗಿದೆ. ಆದರೆ, ಈ ಚಿತ್ರದ ಶೂಟಿಂಗ್ ಸೆಟ್ ಸಂಬಂಧ ಕೆಲವು ಕೇಸ್ ಸೇರಿದಂತೆ ಹಲವು ಸಮಸ್ಯೆ ಎದುರಾಗಿತ್ತು. ಹೀಗಾಗಿ ಈ ಚಿತ್ರವು ಸದ್ಯ ಶೂಟಿಂಗ್ ಹಂತದಲ್ಲೇ ಇದೆ.
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರ, 'ಮದರ್ ಇಂಡಿಯಾ' ಮನೆ ಫಂಕ್ಷನ್‌ಗೆ ಜೋಡೆತ್ತು ಬರಲಿಲ್ಲ..!
ಈ ಕಾರಣಕ್ಕೇ ಎಂಬಂತೆ, ನಟ ಯಶ್ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಟಾಕ್ಸಿಕ್ ಚಿತ್ರದ ಬಿಡುಗಡೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈ ಚಿತ್ರವು 19 ಮಾರ್ಚ್ 2026ರಂದು ಬಿಡುಗಡೆ ಆಗಲಿದೆ ಎಂದು ಯಶ್ ಜಗತ್ತಿಗೇ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಹಾಲಿವುಡ್, ಬಾಲಿವುಡ್ ಸೇರಿದಂತೆ ಬಹಳಷ್ಟು ಕಲಾವಿದರು ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾನಿ ಸೇರಿದಂತೆ ಹಲವು ಖ್ಯಾತನಾಮರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯಶ್ ನಟನೆಯ ಈ ಚಿತ್ರವು ಪ್ಯಾನ್ ಇಂಡಿಯಾ ಬದಲು ಪ್ಯಾನ್ ವರ್ಲ್ಡ್ ರೂಪದಲ್ಲಿ ಬರಲಿದೆ.
ಈ ಚಿತ್ರದ ಮೂಲಕ ನಟ ಯಶ್ ಹಾಗೂ ಕನ್ನಡ ಚಿತ್ರರಂಗ ಮತ್ತೊಂದು ಲೆವಲ್‌ಗೆ ಹೋಗೋದು ಕನ್ಫರ್ಮ್. ಏಕೆಂದರೆ, ಟಾಕ್ಸಿಕ್ ಚಿತ್ರವು ಬಿಗ್ ಬಜೆಟ್ ಸಿನಿಮಾ ಅನ್ನೋದು ಒಂದು ಸಂಗತಿಯಾಗಿದ್ದರೆ ಇದು ಹಾಲಿವುಡ್ ಸಿನಿಮಾದಂತೆ ಜಗತ್ತಿನ ಬಹುಭಾಗಗಳಲ್ಲಿ, ಬಹುಭಾಷೆಗಳಲ್ಲಿ ಬಿಡುಗಡೆ ಅಗುತ್ತಿದೆ. ಒಟ್ಟಿನಲ್ಲಿ, ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರವು ಈ ವರ್ಷದ ಬದಲು ಮುಂದಿನ ವರ್ಷ ತೆರೆಗೆ ಬರಲಿದೆ.
ಕಿಶನ್ ರಾವ್ ದಳವಿ 'ವೇಷಗಳು' ಟೈಟಲ್ ಲಾಂಚ್; ಟೀಮ್‌ಗೆ ಹಾರೈಸಿದ ಭಾವನಾ ಬೆಳಗೆರೆ