ಎಷ್ಟೇ ಗುಟ್ಟಾಗಿಟ್ರೂ ರಟ್ಟಾಯ್ತು: ಮನಸ್ತಾಪ ಶುರುವಾಗಿದ್ದು ಇಲ್ಲಿಂದ.. ಆದ್ರೆ ಕೊನೆಯಾಗಿದ್ದು ಅಲ್ಲಿ..!

Published : Mar 22, 2025, 03:22 PM ISTUpdated : Mar 22, 2025, 03:41 PM IST
ಎಷ್ಟೇ ಗುಟ್ಟಾಗಿಟ್ರೂ ರಟ್ಟಾಯ್ತು: ಮನಸ್ತಾಪ ಶುರುವಾಗಿದ್ದು ಇಲ್ಲಿಂದ.. ಆದ್ರೆ ಕೊನೆಯಾಗಿದ್ದು ಅಲ್ಲಿ..!

ಸಾರಾಂಶ

ಹಾಗಿದ್ದರೆ ಬಹುತೇಕ ಪ್ರಶ್ನೆಗಳಲ್ಲಿ ಏನಿತ್ತು? ಅವರಿಬ್ಬರ ವಿಚ್ಛೇದನಕ್ಕೆ ಕಾರಣವೇನು ಎಂಬುದೇ ಆಗಿತ್ತು.. ಅದಕ್ಕೆ ಸಾಕಷ್ಟುಮುಜುಗರ ಅನುಭವಿಸುತ್ತ ಉತ್ತರ ಕೊಡುವ ಪ್ರಯತ್ನ ಮಾಡುತ್ತಿದ್ದರು ಮಾಜೀ ಜೋಡಿ. ಅದು ಅವರು ವೈಯಕ್ತಿಕ ಸಂಗತಿ. ಆದರೆ ..

ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಡಿವೋರ್ಸ್ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣವಾಗಿದ್ದು ಇತ್ತೀಚಿನ 'ಮುದ್ದು ರಾಕ್ಷಸಿ' ಹಾಗೂ 'ಸೂತ್ರಧಾರಿ' ಸುದ್ದಿಗೋಷ್ಠಿ ಎಂದರೆ ತಪ್ಪಲ್ಲ. ಕಾರಣ, ಮುದ್ದು ರಾಕ್ಷಸಿ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಸಿಕ್ಕರೆ, ಸೂತ್ರಧಾರಿ ಪ್ರೆಸ್‌ಮೀಟ್‌ನಲ್ಲಿ ಚಂದನ್ ಶೆಟ್ಟಿ ಸಿಕ್ಕಿದ್ದಾರೆ. ಹೀಗಾಗಿ ಮಾಧ್ಯಮದವರು ಅಲ್ಲಿ ಇಷ್ಟೂ ದಿನ ಹರಿದಾಡುತ್ತಿದ್ದ ಸೋಷಿಯಲ್ ಮೀಡಿಯಾ ಸುದ್ದಿಗೆ ಕ್ಲಾರಿಫಿಕೇಶನ್ ಕೇಳಿದ್ದಾರೆ. ಚಂದನ್ ಹಾಗೂ ನಿವೇದಿತಾ ಅದನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. 

ಹಾಗಿದ್ದರೆ ಬಹುತೇಕ ಪ್ರಶ್ನೆಗಳಲ್ಲಿ ಏನಿತ್ತು? ಅವರಿಬ್ಬರ ವಿಚ್ಛೇದನಕ್ಕೆ (Divorce) ಕಾರಣವೇನು ಎಂಬುದೇ ಆಗಿತ್ತು.. ಅದಕ್ಕೆ ಸಾಕಷ್ಟುಮುಜುಗರ ಅನುಭವಿಸುತ್ತ ಉತ್ತರ ಕೊಡುವ ಪ್ರಯತ್ನ ಮಾಡುತ್ತಿದ್ದರು ಮಾಜೀ ಜೋಡಿ. ಕಾರಣ, ಅದು ಅವರು ವೈಯಕ್ತಿಕ ಸಂಗತಿ. ಆದರೆ ಅದನ್ನು ಜಗತ್ತಿನ ಎದುರು ಹೇಗೆ ಹೇಳುವುದು? ಆದರೆ, ಸೆಲೆಬ್ರೆಟಿಗಳು ಎಂದರೆ ಪಬ್ಲಿಕ್ ಫಿಗರ್‌ಗಳು ಎಂಬ ಅಲಿಖಿತ ನಿಯಮ ಇರೋದ್ರಿಂದ ಅದನ್ನು ಹೇಳಲೇಬೇಕಿತ್ತು. ಆದರೆ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇಬ್ಬರೂ ಉತ್ತರ ಕೊಟ್ಟಿದ್ದಾರೆ. 

'ಮತ್ತೆ ನನ್ ಲೈಫಲ್ಲಿ ಬರಬೇಡ, ಗುಡ್ ಬೈ..' ಹೇಳಿ ಹೊರಟ ಚಂದನ್ ಶೆಟ್ಟಿ: ಏನಿದು BIG ಹಲ್‌ಚಲ್..?!

ಆದರೆ, ಒಂದಂತೂ ಸ್ಪಷ್ಟ.. 'ನಂಗೆ ಟೀ ಇಷ್ಟ ಆದ್ರೆ ಅವ್ನಿಗೆ ಕಾಫಿ ಇಷ್ಟ.. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಇತ್ತು' ಎಂಬುದು ನಿವೇದಿತಾ ಮಾತಿನ ಅರ್ಥ ಆಗಿದ್ದರೆ, ಚಂದನ್ ಅದನ್ನೇ ಸ್ವಲ್ಪ ವಿಭಿನ್ನವಾಗಿ ಹೇಳಿದ್ದಾರೆ. ನಾನು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳೋ ಅಭ್ಯಾಸ ಇರೋವ್ನು. ಆದ್ರೆ, ಅವ್ಳು ಅದಕ್ಕೆ ತದ್ವಿರುದ್ಧ.. ರಾತ್ರಿ ಲೇಟಾಗಿ ಮಲಗಿ ಬೆಳಿಗ್ಗೆ ಲೇಟಾಗಿ ಏಳ್ತಿದ್ಳು.. ಹೀಗಾಗಿ ನಮ್ಮಿಬ್ಬರ ಮಧ್ಯೆ ಪರಸ್ಪರ ಟೈಮ್ ಕೊಡೋಕೆ ಆಗ್ತಿರಲಿಲ್ಲ. ಇಲ್ಲಿಂದ ಶುರುವಾದ ಮನಸ್ತಾಪ ಡಿವೋರ್ಸ್ ತನಕ ಕರೆದುಕೊಂಡು ಹೋಯ್ತು' ಎನ್ನುವ ಅರ್ಥದಲ್ಲಿ ಮಾತನ್ನಾಡಿದ್ದಾರೆ. 

ಆದರೆ, ಅಚ್ಚರಿ ಎಂದರೆ.. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಅವರದೇ ಸುದ್ದಿಗಳು ಯಾಕೆ ಎಂಬುದೇ ಅರ್ಥವಾಗಲಾರದು. ಕಲಾವಿದರಾಗಿ ಅವರಿಬ್ಬರ ಜೀವನ ನಮಗೆ ಮುಖ್ಯವಾಗಿದ್ದರೆ ಸಾಕು. ಅವರಿಬ್ಬರ ವೈಯಕ್ತಿಕ ಜೀವನ ಕಟ್ಟಿಕೊಂಡು ನಮಗೇನಾಗ್ಬೇಕು? ಅವರೇ ಸಮಾಜಕ್ಕೆ ಮಾದರಿ ಅಂತಾದ್ರೆ, ಎಲ್ರೂ ಹಾಗೇ ಲವ್ ಮಾಡಿ ಮದ್ವೆ ಆಗಿ ಬಳಿಕ ಡಿವೋರ್ಸ್ ತಗೋಬಹುದು! ಆದ್ರೆ ಹಾಗೇನೂ ಆಗ್ತಿಲ್ಲ. ಅಂದ್ಮೇಲೆ ಅದೆಲ್ಲಾ ವಿಷಯ ಕೆಲಸವಿಲ್ಲದ ಸೋಷಿಯಲ್ ಮೀಡಿಯಾಗೆ ಸರಕೇ ಹೊರತೂ ಬೇರೇನಿಲ್ಲ. 

ಅದೇ ನನ್ನನ್ನು 'ಬೇಡರ ಕಣ್ಣಪ್ಪ' ಪಾತ್ರಕ್ಕೆ ಎಳೆದು ತಂದಿದ್ದು:.. ಡಾ ರಾಜ್‌ಕುಮಾರ್

ಲವ್ ಮಾಡುವಾಗ ಹೊಂದಾಣಿಕೆ ಇತ್ತು, ಮದ್ವೆ ಆದ್ರು.. ಆದ್ರೆ, ಮದ್ವೆ ಬಳಿಕ ಒಟ್ಟಿಗೇ ಇರುವಾಗ ಆ ಹೊಂದಾಣಿಕೆ ಆಗಿಬರಲಿಲ್ಲ. ಆದ್ದರಿಂದ ಬೇರೆಬೇರೆ ಆದ್ರು.. ಅಲ್ಲಿಗೆ ಮುಗೀತು.. ಇಬ್ಬರಿಗೂ ಜೊತೆಯಾಗಿರುವ ಜೀವನಕ್ಕಿಂತ ತಮ್ಮತಮ್ಮ ಜೀವನ ಹಾಗೂ ಸಾಧನೆಯ ಬಗ್ಗೆ ಹೆಚ್ಚಿನ ಒಲವಿದೆ. ಹೀಗಾಗಿ ನಿವೇದಿತಾ ಹಾಗೂ ಚಂದನ್ ಬೇರೆಯಾಗಿದ್ದಾರೆ. ಅದು ಅವರಿಷ್ಟ, ಯಾರಿಗೂ ಅದು ಕಷ್ಟವಲ್ಲ. ಅವರು ಅವರಿಷ್ಟದಂತೆ ಇರಲಿ ಬಿಡಿ.. ಇನ್ನಾದ್ರೂ ಈ ವಿಷಯಕ್ಕೆ ಸೋಷಿಯಲ್ ಮೀಡಿಯಾ ಅಂತ್ಯ ಹಾಡೋದು ಒಳ್ಳೇದು.. ಕಾರಣ, ಸಾಧನೆ ಮಾತನಾಡಿದರೆ ಸಾಕು..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep