
ಬೆಂಗಳೂರು (ಜ.4): ಕೆಜಿಎಫ್-2 ಯಶಸ್ಸಿನ ಬಳಿಕ ಯಶ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕೇವಲ ಒಂದು ತಿಂಗಳ ಹಿಂದೆ ತಮ್ಮ ಮುಂಬರುವ ಚಿತ್ರವಾಗಿ ಟಾಕ್ಸಿಕ್‌ಅನ್ನು ಯಶ್ ಘೋಷಣೆ ಮಾಡಿದ್ದರು. ಇದರ ನಡುವೆ ಬುಧವಾರ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಈ ಬಾರಿಯೂ ಅವರು ತಮ್ಮ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಶ್ ಹೇಳಿದ್ದು, ಯಾರೂ ಕೂಡ ಈ ವಿಚಾರವಾಗಿ ಬೇಸರಪಟ್ಟುಕೊಳ್ಳಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಯಶ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಇರೋದೇನು?
ಜನವರಿ 8 ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಆಪೇಕ್ಷೆ ಪಡುವ ದಿನ.. ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದಿರಿಂದ ಈ ಜನವರಿ 8 ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ.. ನಿಮ್ಮ ಪ್ರೀತಿಯ ಯಶ್' ಎಂದು ಅವರು ಬರೆದುಕೊಂಡಿದ್ದಾರೆ.
ನಾವು ಟಾಕ್ಸಿಕ್ ಸಿನಿಮಾವನ್ನು ಘೋಷಣೆ ಮಾಡಿ ಅಂದಾಜು ಒಂದು ತಿಂಗಳಾಗಿದೆ. ಅಂದಿನಿಂದ ನೀವು ನಮ್ಮ ಮೇಲೆ ತೋರಿರುವ ಪ್ರೀತಿ ಆದರಕ್ಕೆ ಯಾವುದೂ ಸಮವಲ್ಲ. ನಿಮ್ಮ ಅಭಿಮಾನ, ಉತ್ಸಾಹ ಹಾಗೂ ಸಿನಿಮಾಗಳ ವಿಶ್ಲೇಷಣೆ ನನಗೆ ಇನ್ನಷ್ಟು ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ನನಗೆ ಗೊತ್ತು ನಿಮ್ಮಲ್ಲಿ ಬಹಳಷ್ಟು ಜನ ಜನ್ಮದಿನದಂದು ನನ್ನನ್ನು ಖುದ್ದಾಗಿ ಭೇಟಿ ಮಾಡಬೇಕು ಎನ್ನುವ ಇಚ್ಛೆಯಲ್ಲಿ ಇರುತ್ತೀರಿ. ನಿಮಗೆ ಏನು ಅನಿಸುತ್ತದೆಯೋ ಅದನ್ನು ಹೇಳಬೇಕು ಎನ್ನುವ ಆಸೆಯಲ್ಲಿ ಇದ್ದಿರುತ್ತೀರಿ. ಆದರೆ, ಈ ಬಾರಿಯ ಜನ್ಮದಿನದಂದು ಅಂದರೆ ಜನವರಿ 8 ರಂದು ನಾನು ಪ್ರಯಾಣದಲ್ಲಿರುತ್ತೇನೆ. ಹಾಗಾಗಿ ನಿಮ್ಮನ್ನ ಭೇಟಿಯಾಗಲು ಸಾಧ್ಯವುಲ್ಲ. ನಾನು ಖುದ್ದಾಗಿ ಇಲ್ಲಿ ಇರದೇ ಇದ್ದರೂ ನಿಮ್ಮೆಲ್ಲರ ವಿಶ್ ನನಗೆ ತಲುಪುತ್ತದೆ ಹಾಗೂ ಅದು ಬಹಳ ವಿಶೇಷವೂ ಆಗಿರುತ್ತದೆ ಎಂದು ಯಶ್ ತಮ್ಮ ಇಂಗ್ಲೀಷ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಲ್ಲಿ ಸ್ಟಾರ್ಸ್ ಮೆರಗು: ರಿಷಬ್ ಬಳಿಕ ಯಶ್‌ಗೂ ಬಂತು ಆಹ್ವಾನ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.