ಮಗಳ ಮೊದಲ ಸಿನಿಮಾ ನಿರ್ಮಾಣ ಕನಸು ಹೊತ್ತಿದ್ದ ಕೋಟಿ ರಾಮು. ದರ್ಶನ್ ಸಿನಿಮಾ ಆಫರ್ ಮಿರಾಕಲ್ ಎಂದ ಮಾಲಾಶ್ರೀ.
ಕನಸಿನ ರಾಣಿ ಮಾಲಾಶ್ರೀ ಪುತ್ರಿ ನಟಿಸಿರುವ ಕಾಟೇರ ಸಿನಿಮಾ ರಿಲೀಸ್ ಆಗಿದೆ. ಯಶಸ್ವಿಯಾಗಿ ಒಂದು ವಾರ ಪೂರೈಸಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ. ಯಶಸ್ಸಿನ್ನು ಎಂಜಾಯ್ ಮಾಡುತ್ತಿರುವ ಆರಾಧನಾ ಮತ್ತು ಮಾಲಾಶ್ರೀ ಕೋಟಿ ರಾಮು ಅವರನ್ನು ನೆನೆದು ಭಾವುಕರಾಗಿದ್ದಾರೆ.
'ಮಗನಿಗೆ ಚಿಕ್ಕ ವಯಸ್ಸಿನಿಂದ ಸಿನಿಮಾ ಮೇಲೆ ಆಸಕ್ತಿ ಹೆಚ್ಚಿತ್ತು ಹೀಗಾಗಿ ಅರ್ಯನ್ ಮೇಲೆ ಗಮನ ಇತ್ತು. ಮಗಳು ಯಾವಾಗ ಸಿನಿಮಾ ಮಾಡಲು ಆಸೆ ಹೇಳಿಕೊಂಡಳು ಆಗ ಡಬಲ್ ಖುಷಿ ಪಟ್ಟರು. ಸಿನಿಮಾಗೆ ಎಂಟ್ರಿ ಕೊಡಲು ಆರಾಧನಾ ರೆಡಿಯಾಗುವ ಸಮಯದಲ್ಲಿ ಕೋಟಿ ರಾಮು ಇದ್ದರು ಫೋಟೋಶೂಟ್ ನೋಡಿ ಸಖತ್ ಖುಷಿ ಪಟ್ಟರು. ನಾವೇ ಒಳ್ಳೆ ಕಥೆ ಹುಡುಕೋಣ ನಾವೇ ನಿರ್ಮಾಣ ಮಾಡೋಣ ಎನ್ನುತ್ತಿದ್ದರು ರಾಮು' ಎಂದು ಮಾಲಾಶ್ರೀ ಖಾಸಗಿ ಕನ್ನಡ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಮೂಗು ಸರಿಯಾಗಿಲ್ಲ, ಹಲ್ಲಿನ ಮೇಲೆ ಹಲ್ಲಿತ್ತು; ಆಗ ಮಾಲಾಶ್ರೀ ಎದುರಿಸಿದ ಟೀಕೆಗೆ ನೆಟ್ಟಿಗರು ಶಾಕ್!
'ನಮ್ಮ ಮನೆಯಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಇದೆ ಆದರೆ ನಾನು ಬೇರೆ ಬ್ಯಾನರ್‌ನಲ್ಲಿ ಲಾಂಚ್ ಆಗಬೇಕು ಅನ್ನೋ ಆಸೆ ಇತ್ತು. ಕಷ್ಟ ಪಟ್ಟು ಶ್ರಮದಿಂದ ಅವಕಾಶ ಪಡೆಯಬೇಕು ಅನ್ನೋ ಆಸೆ ಇದೆ ಎಂದು ತಂದೆ ಬಳಿ ಹೇಳಿಕೊಂಡಿದ್ದೆ. ಮನೆಯಿಂದ ಲಾಂಚ್ ಆದರೆ ಸ್ಫೂನ್ ಫೀಡಿಂಗ್ ಆಗುತ್ತದೆ. ನನ್ನ ನಿರ್ಧಾರಕ್ಕೆ ಅಪ್ಪ ಖುಷಿ ಇತ್ತು. ಆದರೆ ಯಾವ ಸಿನಿಮಾ ಮಾಡುತ್ತಿದ್ದೀನಿ ಯಾರ ಜೊತೆ ಮಾಡುತ್ತೀನಿ ಅನ್ನೋ ಚರ್ಚೆ ಆಗ ಇರಲಿಲ್ಲ ಹೀಗಾಗಿ ಅಪ್ಪಂಗೆ ಗೊತ್ತಿಲ್ಲ' ಎಂದು ಆರಾಧನಾ ಹೇಳಿದ್ದಾರೆ.
'ರಾಮು ಅವರು ದರ್ಶನ್ ಅಭಿಮಾನಿ..ಹೀಗಾಗಿ ಅವರಿಗೆ ಮಗಳು ಕಮರ್ಷಿಯಲ್ ಸಿನಿಮಾ ಮೂಲಕ ಲಾಂಚ್ ಆಗಬೇಕು ಅನ್ನೋ ಆಸೆ ಇತ್ತು. ಕಲಾಸಿಪಾಳ್ಯ ಸಿನಿಮಾ ನೋಡಿ ದಿನ ಮನೆಯಲ್ಲಿ ಮಾತನಾಡುತ್ತಿದ್ದರು. ರಾಬರ್ಟ್ ಸಿನಿಮಾ ನೋಡಿ ಖುಷಿಯಾಗಿದ್ದರು ಅಲ್ಲಿಂದ ತರುಣ್ ಫ್ಯಾನ್ ಆಗಿಬಿಟ್ಟರು. ರಾಕ್‌ಲೈನ್ ಮತ್ತು ತರುಣ್ ಮೂಲಕ ಅವಕಾಶ ಸಿಕ್ಕಿದ್ದು ರಾಮು ಅವರೇ ಕಳುಹಿಸಿದ್ದಾರೆ ಅನ್ನೋಷ್ಟು ಖುಷಿ ಆಯ್ತು' ಎಂದಿದ್ದಾರೆ ಮಾಲಾಶ್ರೀ.
ಅಮ್ಮ ಮಾಲಾಶ್ರೀ ಖ್ಯಾತಿ ಹೊರೆಯಲ್ಲ, ಜವಾಬ್ದಾರಿ: ಆರಾಧನಾ ರಾಮ್
' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಯಾವುದರ ಬಗ್ಗೆ ಯೋಚನೆ ಮಾಡದೆ ದಿನ ಸಾಗುತ್ತಿತ್ತು. ಮೊದಲ ಸಿನಿಮಾ ರಿಲೀಸ್ ಸಮಯದಲ್ಲಿ ಅಪ್ಪ ಇಲ್ಲ ಅನ್ನೋ ಬೇಸರ ಕಾಡುತ್ತಿದೆ. ದಿನ ಹತ್ತರವಾಗುತ್ತಿದ್ದಂತೆ ಸುಮ್ಮನೆ ಕುಳಿತುಕೊಂಡರೆ ಅಪ್ಪನೇ ನೆನಪಾಗುತ್ತಾರೆ. ಬಹುಷ ಅವರು ಎಲ್ಲೋ ನಮ್ಮ ಸುತ್ತ ಇದ್ದು ಸಿನಿಮಾ ನೋಡುತ್ತಾ ನನ್ನನ್ನು ಆಶೀರ್ವಾದ ಮಾಡುತ್ತಿದ್ದಾರೆ ಅನಿಸುತ್ತದೆ' ಎಂದಿದ್ದಾರೆ ಆರಾಧನಾ.