ಕಲಾಸಿಪಾಳ್ಯ ಚಾಕ್ನಾ 'ನೂರು ರೂಪಾಯಿ ಮಿಕ್ಸ್': ಲೋಕಲ್ ಬಾಯ್ಸ್‌ಗಾಗಿ ಭೀಮನ ಪಕ್ಕಾ ಲೋಕಲ್ ಸಾಂಗ್!

Published : Jan 04, 2024, 01:15 PM IST
ಕಲಾಸಿಪಾಳ್ಯ ಚಾಕ್ನಾ 'ನೂರು ರೂಪಾಯಿ ಮಿಕ್ಸ್': ಲೋಕಲ್ ಬಾಯ್ಸ್‌ಗಾಗಿ ಭೀಮನ ಪಕ್ಕಾ ಲೋಕಲ್ ಸಾಂಗ್!

ಸಾರಾಂಶ

ಕಲಾಸಿಪಾಳ್ಯ ಚಾಕ್ನಾ ಬಗ್ಗೆ ನೀವೆಲ್ಲಾ ಕೇಳಿರ್ತಿರಾ. ಇಲ್ಲಿ ಸಿಗೋ ಚಾಕ್ನಾ ಸಿಕ್ಕಾಪಟ್ಟೆ ಫೇಮಸ್. ಪಕ್ಕಾ ಲೋಕಲ್ ಫುಡ್ ಇದು. ಬೆಂಗಳೂರಲ್ಲಿರೋ ಲೋಕಲ್ ಬಾಯ್ಸ್ಗೆ ಕಲಾಸಿಪಾಳ್ಯ ಚಾಕ್ನಾ ತಿನ್ನೋ ಅಭ್ಯಾಸ ಇದ್ದೇ ಇರುತ್ತೆ. ಈ ಚಾಕ್ನಾ ಮೇಲೆ ಒಂದು ಸಾಂಗ್ ಬಂದ್ರೆ ಹೆಂಗ್ ಇರುತ್ತೆ.?

ಕಲಾಸಿಪಾಳ್ಯ ಚಾಕ್ನಾ ಬಗ್ಗೆ ನೀವೆಲ್ಲಾ ಕೇಳಿರ್ತಿರಾ. ಇಲ್ಲಿ ಸಿಗೋ ಚಾಕ್ನಾ ಸಿಕ್ಕಾಪಟ್ಟೆ ಫೇಮಸ್. ಪಕ್ಕಾ ಲೋಕಲ್ ಫುಡ್ ಇದು. ಬೆಂಗಳೂರಲ್ಲಿರೋ ಲೋಕಲ್ ಬಾಯ್ಸ್ಗೆ ಕಲಾಸಿಪಾಳ್ಯ ಚಾಕ್ನಾ ತಿನ್ನೋ ಅಭ್ಯಾಸ ಇದ್ದೇ ಇರುತ್ತೆ. ಈ ಚಾಕ್ನಾ ಮೇಲೆ ಒಂದು ಸಾಂಗ್ ಬಂದ್ರೆ ಹೆಂಗ್ ಇರುತ್ತೆ.? ಅದು ಕೂಡ ಈಗ ಆಗೋಗಿದೆ. ಕಲಾಸಿಪಾಳ್ಯ ಚಾಕ್ನಾನ ಬ್ಯಾಕ್ಗ್ರೌಂಡ್ನಲ್ಲಿ ನಟ ದುನಿಯಾ ವಿಜಯ್ ಮಾಸ್ ಸಾಂಗ್ ಒಂದನ್ನ ಕೊಟ್ಟಿದ್ದಾರೆ. ಆ ಸಾಂಗ್ ರಿಲೀಸ್ ಆಗಿದೆ. ಭೀಮ. ದುನಿಯಾ ವಿಜಯ್ ಕನಸಿನ ಎರಡನೇ ಸಿನಿಮಾ. ಪಕ್ಕಾ ಲೋಕಲ್ ಮಾಸ್ ಸಿನಿಮಾ. 

ಸಲಗ ಸಿನಿಮಾದಲ್ಲಿ ಬೆಂಗಳೂರು ಭೂಗತ ಜಗತ್ತಿನ ಅನಾವರಣ ಮಾಡಿದ್ದ ವಿಜಯ್ ಈಗ ಭೀಮ ಸಿನಿಮಾದಲ್ಲಿ ಬೆಂಗಳೂರು ರೌಡಿಸಂನ ಮತ್ತೊಂದು ಮುಖವನ್ನ ತೆರೆದಿಡುತ್ತಿದ್ದಾರೆ. ಹೀಗಾಗಿ ಭೀಮನ ಲೋಕಲ್ ಹಾಡುಗಳನ್ನ ರಿಲೀಸ್ ಮಾಡ್ತಿದ್ದಾರೆ ವಿಜಯ್. ಈಗ ಬಂದಿರೋ ಕಲಾಸಿಪಾಳ್ಯ ಚಾಕ್ನಾ ಸಾಂಗ್ ಲೋಕಲ್ ಬಾಯ್ಸ್ಗಾಗೆ ಮಾಡಿದ ಲೋಕಲ್ ಸಾಂಗ್ ಹಾಗಿದೆ. ಭೀಮ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ ಆಗಿದ್ದು ಬ್ಯಾಡ್ ಬ್ಯಾಯ್. ಈ ಬ್ಯಾಡ್ ಬ್ಯಾಯ್ ಎಷ್ಟು ಹಿಟ್ ಆಯ್ತು ಅಂದ್ರೆ ಗಲ್ಲಿ ಗಲ್ಲಿಗಳಲ್ಲಿ ಸೌಂಡ್ ಮಾಡ್ತು. ಈ ಹಾಡಿನಲ್ಲಿ ಕುಷ್ಕ ತಿನ್ಕೊಮನೆ ಅಂತ ಲಿರಿಕ್ಸ್ ಬರೆದಿದ್ರು ವಿಜಯ್. 

ಈಗ ಬ್ಯಾಡ್ ಬಾಯ್ ಕುಷ್ಕ ಹಾಡಿನ ಬಳಿಕ ನೂರುಪಾಯಿ ಮಿಕ್ಸ್ನ ಚಾಕ್ನಾ ಸಾಂಗ್ ಬಂದಿದೆ. ಈ ಹಾಡಿನಲ್ಲಿ ಚಾಕ್ನಾ, ಲಿವರ್, ಕಿಡ್ನಿ, ಕೈಮಾ, ಬೋಟಿ ಫ್ರೈ ಎಲ್ಲದರ ಕತೆ ಹೇಳಿದ್ದಾರೆ. ಈ ಹಾಡನ್ನ ರಾಪ್ ಸ್ಟಾರ್ MC Bijju ಬರೆದಿದ್ದು Charan Raj ಹಾಗು  MC Bijju ಸೇರಿ ಹಾಡಿದ್ದಾರೆ. ಚಾಕ್ನಾ ಹಾಡಿಗೆ ರಾಪ್ ಟಚ್ ಕೊಟ್ಟು ಮ್ಯೂಸಿಕ್ ಮಾಡಿದ್ದಾರೆ ಚರಣ್ ರಾಜ್. ಈ ಚಾಕ್ನಾ ಅಡ್ಡಕ್ಕೂ ಭೀಮ ಸಿನಿಮಾದ ಕತೆಗೂ ಒಂದು ಲಿಂಕ್ ಇದೆ ಅನ್ನೋದು ಪಕ್ಕಾ. ಕಲಾಸಿ ಪಾಳ್ಯ ಅಂದ್ರೇನೆ ಒಂದ್ ಕಾಲದಲ್ಲಿ ರೌಡಿಗಳ ಅಡ್ಡ. 

ನಡುರಸ್ತೆಯಲ್ಲೇ ನಟ ದುನಿಯಾ ವಿಜಯ್ ಅರೆಸ್ಟ್: ಭೀಮ ಚಿತ್ರದ ಕತೆಯೇನು?

ಈಗಲೂ ಸಣ್ಣಪುಟ್ಟ ರೌಡಿಸಂ ಅಲ್ಲಿದೆ. ಹೀಗಾಗಿ ಭೀಮನ ಕತೆ ನಡೆಯೋದೇ ಈ ಲೋಕಲ್ ಕಲಾಸಿಪಾಳ್ಯದಲ್ಲಿ ಅನ್ನೋದು ಇಂಟ್ರೆಸ್ಟಿಂಗ್. Krishna Sarthak ಹಾಗು Jagadeesh Gowda ನಿರ್ಮಾಣದ ಭೀಮ ಸಿನಿಮಾ ಫೆಬ್ರವರಿಯಲ್ಲಿ ತೆರೆ ಮೇಲೆ ಬರಲಿದೆ. ವಿಜಯ್ ಪಕ್ಕಾ ಲೋಕಕ್ ರೌಡಿಸಂ ಕತೆ ಹೇಳ ಹೊರಟಿರೋ ಭೀಮನಲ್ಲಿ ಐ ಲವ್ ಯು ಕಣೇ ಅನ್ನೋ ಲವ್ ಸಾಂಗ್ ಕೂಡ ಇದ್ದು, ಭೀಮನಲ್ಲಿ ಲವ್ ಸ್ಟೋರಿಯೂ ಇದೆ ಅನ್ನೋದು ಕನ್ಫರ್ಮ್.. ಈ ಭೀಮನಿಗೆ ಅಶ್ವಿನಿ ನಾಯಕಿ. ಒಟ್ಟಿನಲ್ಲಿ ವಿಜಯ್ ನಿರ್ದೇಶನದ ಭೀಮ ಸಿನಿಮಾ ಈಗ ಸ್ಯಾಂಡಲ್‌ವುಡ್‌ನ ಸೆನ್ಸೇಷನ್ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್