ಥ್ರಿಲ್ಲಿಂಗ್ ಅಪ್‌ಡೇಟ್ ಕೊಟ್ಟ ಸಕ್ಕತ್ ಸ್ಟುಡಿಯೋ, ಸದ್ಯವೇ ತೆರೆಗೆ ಬರಲಿದೆ 'ಮರ್ಯಾದೆ ಪ್ರಶ್ನೆ'..!

By Shriram Bhat  |  First Published Sep 9, 2024, 7:06 PM IST

ಮರ್ಯಾದೆ ಪ್ರಶ್ನೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ವಿಘ್ನ ವಿಪತ್ತುಗಳಿಲ್ಲದೆ ನಿಮ್ಮೆಲ್ಲರನ್ನು ತಲುಪುತ್ತೇವೆ ಅತಿ ಶೀಘ್ರದಲ್ಲೇ..ಹಬ್ಬ ಮಾಡೋಣ ರೆಡಿ  ಇರಿ..ಇದು ಮರ್ಯಾದೆ ಪ್ರಶ್ನೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದ್ದು, ಭಿನ್ನ ಪಾತ್ರಗಳಿಗೆ ಹಲವರು ಬಣ್ಣ ಹಚ್ಚಿದ್ದಾರೆ.


ಸ್ಯಾಂಡಲ್‌ವುಡ್‌ನಲ್ಲಿ ಅಂಗಳದಲ್ಲಿ 'ಮರ್ಯಾದೆ ಪ್ರಶ್ನೆ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಶೀರ್ಷಿಕೆ ಅನಾವರಣವನ್ನೇ ಕೊಂಚ ವಿಭಿನ್ನವಾಗಿ ಮಾಡಿದ್ದ ಚಿತ್ರತಂಡ, ಅದಾದ ಬಳಿಕವೂ ಚಿತ್ರದ ಪ್ರಚಾರವನ್ನೂ ಅಷ್ಟೇ ವಿಶೇಷವಾಗಿ ನೋಡುಗನ ಮುಂದೆ ತಂದಿಟ್ಟಿತ್ತು. ಸಾಕಷ್ಟು ಸಿನಿಮೋತ್ಸಾಹವಿರುವ  ಆರ್ ಜೆ ಪ್ರದೀಪ್ ಅವರು ತಮ್ಮದೇ ಸಕ್ಕತ್ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. 

ಸಕ್ಕತ್ ಕಂಟೆಂಟ್‌ಗಳ ಮೂಲಕವೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ ಸಕ್ಕತ್ ಸ್ಟುಡಿಯೋ, ಈ ಹಿಂದೆ ವೆಬ್‌ಸಿರೀಸ್‌ ಗಮನ ಸೆಳೆದಿದ್ದ  ಈ ನಿರ್ಮಾಣ ಸಂಸ್ಥೆ ಈಗ ಸಿನಿರಂಗಕ್ಕೂ ಹೆಜ್ಜೆ ಇಟ್ಟಿದೆ. ಸಕ್ಕತ್ ಸ್ಟುಡಿಯೋ ಸಖತ್ ಕ್ರಿಯೇಟಿವ್ ಆಗಿ ಮರ್ಯಾದೆ ಪ್ರಶ್ನೆ ಚಿತ್ರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. RCB ಕಪ್ ಗೆಲ್ಲಬೇಕು ಅಂತಾ ಕೊಹ್ಲಿ ತಂಡಕ್ಕೆ ಚಿಯರ್ ಹೇಳುವ ಹಾಡು ನಿರ್ಮಿಸಿದ್ದ ಸಕ್ಕತ್ ಸ್ಟುಡಿಯೋ, ರಾಪರ್ ಆಲ್ ಓಕೆ ಕಡೆಯಿಂದಲೂ ಮರ್ಯಾದೆ ಪ್ರಶ್ನೆಗಳಿಗೆ ಉತ್ತರ ಕೊಡಿಸಿತ್ತು. ಹೀಗೆ ಆರಂಭದಿಂದಲೂ ಬಗೆ ಬಗೆಯಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರತಂಡ ಗೌರಿ ಗಣೇಶ ಹಬ್ಬದ ದಿನವಾದ ಇಂದು ಥ್ರಿಲ್ಲಿಂಗ್ ಅಪ್ ಡೇಟ್ ಕೊಟ್ಟಿದೆ.

Tap to resize

Latest Videos

ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ!

ಮರ್ಯಾದೆ ಪ್ರಶ್ನೆ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ವಿಘ್ನ ವಿಪತ್ತುಗಳಿಲ್ಲದೆ ನಿಮ್ಮೆಲ್ಲರನ್ನು ತಲುಪುತ್ತೇವೆ ಅತಿ ಶೀಘ್ರದಲ್ಲೇ..ಹಬ್ಬ ಮಾಡೋಣ ರೆಡಿ  ಇರಿ..ಇದು ಮರ್ಯಾದೆ ಪ್ರಶ್ನೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಪ್ರತಿಭಾನ್ವಿತರ ದಂಡೇ ಚಿತ್ರದಲ್ಲಿದ್ದು, ಭಿನ್ನ ಪಾತ್ರಗಳಿಗೆ ಹಲವರು ಬಣ್ಣ ಹಚ್ಚಿದ್ದಾರೆ. ರಾಕೇಶ್‌ ಅಡಿಗ, ಸುನೀಲ್‌ ರಾವ್‌, ಶೈನ್‌‌ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್‌, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್‌ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. 

ಸಕ್ಕತ್‌ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಈ ಚಿತ್ರಕ್ಕೆ ಪ್ರದೀಪ್‌ ಅವರೇ ಕಥೆ ಬರೆದಿದ್ದಾರೆ. ಕ್ರಿಯೆಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಕ್ಕೆ ಹೊಸದೊಂದು ಕಥೆ ಕೊಡೊಕೆ ರೆಡಿ ಆಗಿದ್ದಾರೆ ಪ್ರದೀಪ್. ಮರ್ಯಾದೆ ಪ್ರಶ್ನೆ ಚಿತ್ರವನ್ನ ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಕ್ಯಾಮರಾವರ್ಕ್ ಮಾಡಿದ್ದಾರೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ.

ಆರಾಮ್ ಅರವಿಂದ ಸ್ವಾಮಿಯಾದವ್ರು ಯಾರು? ಅನೀಶ್-ಅಭಿಷೇಕ್ ಮಿಂಚೋದು ಗ್ಯಾರಂಟಿ ಅಂತಿದಾರೆ!

ಪ್ರತಿಯೊಬ್ಬರಲ್ಲೂ ಸೌಂದರ್ಯ ಇದ್ದೇ ಇರುತ್ತೆ.. ಆದ್ರೆ, ಅದನ್ನು ಕಾಪಾಡಿಕೊಳ್ಳೋಕೆ ನಾವು ಸ್ವಲ್ಪ ಸಮಯ ಕೊಡ್ಬೇಕು. ತಿನ್ನೋದು, ವ್ಯಾಯಾಮ, ಹೀಗೆ ಕೆಲವೊಂದನ್ನು ಸರಿಯಾಗಿ ಪಾಲಿಸ್ಬೇಕು. ಜೊತೆಗೆ, ಯಾವುದಕ್ಕೂ ಹೆಚ್ಚು ತಲೆ ಕೆಡಿಸ್ಕೋಬಾರದು. ಪ್ರತಿಯೊಬ್ಬರ ಜೀವನದಲ್ಲೂ ಆತಂಕ ಇದ್ದೇ ಇರುತ್ತೆ. ಆದ್ರೆ, ಅದನ್ನು ಎಷ್ಟು ಮನಸ್ಸಿಗೆ, ದೇಹಕ್ಕೆ ತಗೋಬೇಕೋ ಅಷ್ಟೇ ತಗೋಬೇಕು. ಮಿಕ್ಕಿದ್ದನ್ನು ಹಾಗೇ ಬಿಟ್ಬಿಡ್ಬೇಕು. ಕೆಲವೊಂದು ವಿಷ್ಯಕ್ಕೆ ನಾವು ಏನೂ ಮಾಡೋಕೆ ಆಗಲ್ಲ..' 

ಹೀಗೆ ತಮ್ಮ ಸೌಂದರ್ಯದ ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ. ಕರಾವಳಿಯ ಈ ಚೆಲುವೆ 'ನಿನಗಾಗಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದ್ದಾರೆ. 'ನೀಲ ಮೇಘ ಶ್ಯಾಮ' ನಟಿಸಿದ ಮೊದಲ ಚಿತ್ರವಾದರೂ, ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು ನಿನಗಾಗಿ ಸಿನಿಮಾ. ಇದೀಗ ಅಕ್ಟೋಬರ್‌ನಲ್ಲಿ 'ಭೈರಾದೇವಿ' ಸಿನಿಮಾ ಮೂಲಕ ಮತ್ತೆ ಸಿನಿಪ್ರೇಮಿಗಳಿಗೆ ದರ್ಶನ ನೀಡಲಿದ್ದಾರೆ ರಾಧಿಕಾ. 

ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?

click me!