ಯುಗಾದಿಗೆ ವಿಶ್ ಮಾಡಿ 'ಕಾಂತಾರ-2' ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ರಿಷಬ್ ಶೆಟ್ಟಿ

Published : Mar 22, 2023, 04:36 PM IST
ಯುಗಾದಿಗೆ ವಿಶ್ ಮಾಡಿ 'ಕಾಂತಾರ-2'  ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ರಿಷಬ್ ಶೆಟ್ಟಿ

ಸಾರಾಂಶ

ರಿಷಬ್ ಶೆಟ್ಟಿ ಯುಗಾದಿಗೆ ವಿಶ್ ಮಾಡಿ ಕಾಂತಾರ  ಬರವಣಿಗೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. 

ನಾಡಿನಾದ್ಯಂತ ಯುಗಾದಿ ಸಂಭ್ರಮ ಜೋರಾಗಿದೆ. ಜನರು ಸಡಗರದಿಂದ ಯುಗಾದಿ ಹಬ್ಬ ಆಚರಿಸುತ್ತಿದ್ದಾರೆ. ಸಿನಿಮಾ ಮಂದಿ ಕೂಡ ಜೋರಾಗಿ ಹಬ್ಬ ಆಚರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಅದ್ದೂರಿಯಾಗಿ ಯುಗಾದಿ ಹಬ್ಬ ಆಚರಿಸುತ್ತಿದ್ದಾರೆ. ಕಾಂತಾರ ಸಕ್ಸಸ್‌ನಲ್ಲಿರುವ ರಿಷಬ್ ಅವರಿಗೆ ಈ ಬಾರಿಯ ಯುಗಾದಿ ತುಂಬಾ ವಿಶೇಷವಾಗಿದೆ. ಕಾಂತಾರ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿರುವ ರಿಷಬ್ ಶೆಟ್ಟಿ  ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಕಾಂತಾರ -2 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ರಿಷಬ್ ಶೆಟ್ಟಿಯ ಈ ವಿಶ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ. 

ಕಾಂತಾರ ಬ್ಲಾಕ್‌ಬಸ್ಟರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಕಾಂತಾರ-2 ಮಾಡ್ತಾರೆ ಎನ್ನುವ ಸುದ್ದಿ ಆಗಲೇ ಸುದ್ದಿ ವೈರಲ್ ಆಗಿತ್ತು. ಕಾಂತಾರ ಪಾರ್ಟ್ -2 ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಕೂಡ ಹೆಚ್ಚಾಗಿತ್ತು. ಅಭಿಮಾನಿಗಳ ನಿರೀಕ್ಷೆಯಂತೆ ರಿಷಬ್ ಶೆಟ್ಟಿ ಕಾಂತಾರ-2 ಅನೌನ್ಸ್ ಮಾಡಿದ್ದರು. ಪಾರ್ಟ್-2 ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.ಆದರೀಗ ಪಾರ್ಟ್-2 ಬಗ್ಗೆ ಬಿಗ್ ಅಪ್‌ಡೇಟ್ ಮೂಲಕ ಯುಗಾದಿ ಹಬ್ಬಕ್ಕೆ ಖುಷಿ ವಿಚಾರ ಹಂಚಿಕೊಂಡಿದ್ದಾರೆ. ಕಾಂತಾರ-2 ಸಿನಿಮಾದ ಸ್ಕ್ರಿಪ್ಟ್ ಕೆಲಸ ಪ್ರಾರಂಭವಾಗಿದೆ ಎಂದು ರಿಷಬ್ ಹೇಳಿದ್ದಾರೆ. ಈ ಯುಗಾದಿ ಬರವಣಿಗೆಯ ಆದಿ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. 

ವಿಶ್ವಸಂಸ್ಥೆಯಲ್ಲಿ ಕನ್ನಡದ ಸೂಪರ್‌ ಹಿಟ್‌ ‘ಕಾಂತಾರ’ ಪ್ರದರ್ಶನ

ಕಾಂತಾರ ಬರವಣಿಗೆ ಆರಂಭವೆಂದು ರಿಷಬ್ ಹೇಳಿದ್ದಾರೆ. 'ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಷಯಗಳು' ಎಂದು ವಿಶ್ ಮಾಡುವ ಜೊತೆಗೆ ಬರವಣಿಗೆಯ ಆದಿ ಎಂದು ಹೇಳಿದ್ದಾರೆ. ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ರಿಷಬ್ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಕಾಂತಾರ-2ಗಾಗಿ ಕಾಯುತ್ತಿದ್ದೀವಿ ಎಂದು ಹೇಳುತ್ತಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಕಾಂತಾರ ಪಾರ್ಟ್-2 ಹೇಗಿರಲಿದೆ, ಯಾವಾಗ ರಿಲೀಸ್ ಆಗಲಿದೆ ಎನ್ನುವ ಹೆಚ್ಚಿನ ಮಾಹಿತಿ ಇನ್ನಷ್ಟೆ ಬಹಿರಂಗವಾಗಬೇಕಿದೆ.

Kantara; ಇಟಾಲಿಯನ್, ಸ್ಪ್ಯಾನಿಷ್ ಭಾಷೆಯಲ್ಲೂ ರಿಷಬ್ ಹವಾ; ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಹೊಂಬಾಳೆ

ಪಾರ್ಟ್-2ನಲ್ಲೂ ನಾಯಕಿಯಾಗಿ ಸಪ್ತಮಿ ಗೌಡ ಮುಂದುವರೆಯುವ ಸಾಧ್ಯತೆ ಇದೆ. ಇನ್ನೂ ಕಿಶೋರ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಬ್ ಶೆಟ್ಟಿ ಪೋಸ್ಟ್ ಮಾಡಿ ಈ ಎಲ್ಲಾ ನಟರ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ ಬರವಣಿಗೆ ಪ್ರಾರಂಭಿಸಿರುವ ರಿಷಬ್ ಮತ್ತು ತಂಡ ಸದ್ಯದಲ್ಲೇ ಶೂಟಿಂಗ್‌ಗೆ ಹೊರಡಲಿದೆ. ಪಾರ್ಟ್-2ನಲ್ಲಿ ಇನ್ನೂ ಯಾರೆಲ್ಲ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ. 
  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ