Yash: ಕೆಜಿಎಫ್ ಸ್ಟಾರ್ ವಿರುದ್ಧ ಕೆಟ್ಟದಾಗಿ ಟ್ವೀಟ್: ಸ್ವಯಂ ಘೋಷಿತ ವಿಮರ್ಶಕನ ಗ್ರಹಚಾರ ಬಿಡಿಸಿದ ಫ್ಯಾನ್ಸ್

Published : Mar 22, 2023, 10:55 AM IST
Yash: ಕೆಜಿಎಫ್ ಸ್ಟಾರ್ ವಿರುದ್ಧ ಕೆಟ್ಟದಾಗಿ ಟ್ವೀಟ್: ಸ್ವಯಂ ಘೋಷಿತ ವಿಮರ್ಶಕನ ಗ್ರಹಚಾರ ಬಿಡಿಸಿದ ಫ್ಯಾನ್ಸ್

ಸಾರಾಂಶ

ಕೆಜಿಎಫ್ ಸ್ಟಾರ್ ಯಶ್ ವಿರುದ್ಧ ಕೆಟ್ಟದಾಗಿ ಟ್ವೀಟ್ ಮಾಡಿದ ಸ್ವಯಂ ಘೋಷಿತ ವಿಮರ್ಶಕನಿಗೆ ಅಭಿಮಾನಿಗಳು ಗ್ರಹಚಾರ ಬಿಡಿಸಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬ್ಲಾಕ್‌ಬಸ್ಟರ್ ಕೆಜಿಎಫ್ ಬಳಿಕ ಯಶ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾರಂಗ ರಾಕಿಭಾಯ್ ಸಿನಿಮಾಗಾಗಿ ಎದುರು ನೋಡುತ್ತಿದೆ. ನಿರೀಕ್ಷೆ, ಕುತೂಹಲಕ್ಕೆ ತಕ್ಕಂತೆ ಯಶ್ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದುವರೆಗೂ ಯಶ್ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ಇದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಈ ನಡುವೆ ರಾಕಿಭಾಯ್ ವಿರುದ್ಧ ವಿಮರ್ಶಕ ಎಂದು ಹೇಳಿಕೊಳ್ಳುವ ಉಮೈರ್ ಸಂಧು ಕೆಟ್ಟದಾಗಿ ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಉಮೈರ್ ಸಂಧು ಭಾರತೀಯ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುವುದು, ಮಾತನಾಡುವುದು ಇದೇ ಮೊದಲಲ್ಲ. ಆಗಾಗ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಟ್ವೀಟ್ ಮಾಡುತ್ತಿರುತ್ತಾರೆ. ಇದೀಗ ರಾಕಿಂಗ್ ಸ್ಟಾರ್ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಮೊದಲು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಬಗ್ಗೆಯೂ ಕೆಟ್ಟದಾಗಿ ಟ್ವೀಟ್ ಮಾಡಿದ್ದರು. ಇಬ್ಬರೂ ಸ್ಟಾರ್‌ಗಳ ಘನತೆಗೆ ಧಕ್ಕೆ ತರುವಂತ ಟ್ವೀಟ್ ಮಾಡಿರುವ ಉಮೈರ್‌ಗೆ ಅಭಿಮಾನಿಗಳು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಅಷ್ಟಕ್ಕೂ ಯಶ್ ಬಗ್ಗೆ ಹೇಳಿದ್ದೇನು ಅಂತೀರಾ?, ಯಶ್ ಜೊತೆ ಸಿನಿಮಾ ಮಾಡಲು ಯಾವ ನಿರ್ಮಾಪಕರು ಮುಂದೆ ಬರ್ತಿಲ್ಲ. ಅವಕ ಆಟಿಟ್ಯೂಡ್‌ನಿಂದ ಅನೇಕ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವರನ್ನು ದೂರ ಇಟ್ಟಿವೆ ಎಂದು ಹೇಳಿದ್ದಾರೆ. 'ಯಶ್ ಆ್ಯಟಿಟ್ಯೂಡ್ ನೋಡಿ ದಕ್ಷಿಣ ಹಾಗೂ ಬಾಲಿವುಡ್​ನ ಪ್ರೊಡಕ್ಷನ್​ ಹೌಸ್​ಗಳು ಅವರನ್ನು ಹೊರಗಿಟ್ಟಿವೆ. ಕೆಜಿಎಫ್ 2 ಬಳಿಕ ಅವರು ಪ್ರತಿ ಚಿತ್ರಕ್ಕೆ 75 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ಇದು ತುಂಬಾನೇ ಹೆಚ್ಚಾಯಿತು ಅನ್ನೋದು ನಿರ್ಮಾಪಕರ ಅಭಿಪ್ರಾಯ. ಈ ಕಾರಣಕ್ಕೆ ಯಾರೂ ಯಶ್ ಜೊತೆ ಸಿನಿಮಾ ಮಾಡುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಉಮೈರ್‌ಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ರಾಧಿಕಾ ಪಂಡಿತ್; ಫೋಟೋ ವೈರಲ್

ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡಿ ಉಮೈರ್ ಗ್ರಹಚಾರ ಬಿಡಿಸಿದ್ದಾರೆ. ಯಶ್ 75 ಕೋಟಿ ಅಲ್ಲ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯಲು ಅರ್ಹ ಎಂದು ಹೇಳುತ್ತಿದ್ದಾರೆ. ಅನೇಕರು ನಿನಗೆ ಮಾಡೋಕೆ ಕೆಲಸಾ ಇಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಅನೌನ್ಸ್ ಆದಮೇಲೆ ನೋಡು ಎಂದು ಹೇಳುತ್ತಿದ್ದಾರೆ. ಅನೇಕರು ಕಾಮೆಂಟ್ ಮಾಡಿ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ.

ಪತ್ನಿಗೆ ಕೊತ್ತುಂಬರಿ ಸೊಪ್ಪು ಗಿಫ್ಟ್‌ ಕೊಟ್ಟ ಯಶ್; ರಾಗಿ ಮುದ್ದೆಗೂ ಸೈ ಮೆಂತ್ಯ ಮುದ್ದೆಗೂ ಸೈ ಎಂದ ರಾಧಿಕಾ ಪಂಡಿತ್

ಶ್ರೀನಿಧಿ ಬಗ್ಗೆ ಹೇಳಿದ್ದೇನು?

ಅಂದಹಾಗೆ ಯಶ್ ಬಗ್ಗೆ ಮಾತನಾಡುವ ಮೊದಲು ಶ್ರೀನಿಧಿ ಶೆಟ್ಟಿ ಬಗ್ಗೆ ಟ್ವೀಟ್ ಮಾಡಿದ್ದರು. ‘ಯಶ್ ಜೊತೆ ಕೆಲಸ ಮಾಡಲು ಮುಜುಗರ ಆಗಿತ್ತು. ನಾನು ಅವರ ಜೊತೆ ಮತ್ತೆ ಕೆಲಸ ಮಾಡಲ್ಲ. ಎಲ್ಲರಿಗೂ ಕಿರುಕುಳ ನೀಡುವಂತಹ ವ್ಯಕ್ತಿ' ಎಂದು ಶ್ರೀನಿಧಿ ಶೆಟ್ಟಿ ಹೇಳಿರುವುದಾಗಿ ಉಮೈರ್ ಸಂಧು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಖುದ್ದು ಶ್ರೀನಿಧಿ ಶೆಟ್ಟಿ ಅವರೇ ಪ್ರತಿಕ್ರಿಯೆ ನೀಡಿದ್ದರು. ‘ಕೆಲವರು ಸೋಶಿಯಲ್ ಮೀಡಿಯಾನ ಸುಳ್ಳು ಸುದ್ದಿ ಹಬ್ಬಿಸಲು ಬಳಕೆ ಮಾಡುತ್ತಾರೆ. ನಾನು ಪ್ರೀತಿ ಹಂಚಲು ಬಳಸುತ್ತೇನೆ. ಯಶ್ ಜೊತೆ ಕೆಲಸ ಮಾಡಿರುವ ಬಗ್ಗೆ ಖುಷಿ ಇದೆ. ಅವರು ಜಂಟಲ್​ಮ್ಯಾನ್, ಮೆಂಟರ್, ಗೆಳೆಯ ಹಾಗೂ ಸ್ಫೂರ್ತಿದಾಯಕ ವ್ಯಕ್ತಿ. ನಾನು ಯಾವಾಗಲೂ ನಿಮ್ಮ ಅಭಿಮಾನಿ’ ಎಂದು ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Ba Ma Harish Son Ullas Gowda Death: ವಿಜಯನಗರ ನಿವಾಸದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ 3 ಗಂಟೆಗೆ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
SN Shankar Death: ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ