'ಕಿರಿಕ್ ಪಾರ್ಟಿ' ಪ್ರೊಡಕ್ಷನ್ ಹೌಸ್ ಹೆಸರೇಳಲು ಹಿಂಜರಿದ ರಶ್ಮಿಕಾ; ಕೃತಜ್ಞತೆ ಇಲ್ಲದವಳೆಂದು ಹಿಗ್ಗಾಮುಗ್ಗ ಟ್ರೋಲ್

By Vaishnavi ChandrashekarFirst Published Oct 25, 2022, 12:15 PM IST
Highlights

ಪ್ರೊಡಕ್ಷನ್ ಹೌಸ್‌ ಹೆಸರು ಹೇಳಲು ಹಿಂಜರಿದ ರಶ್ಮಿಕಾ ಮಂದಣ್ಣ. ಯಾಕಮ್ಮಾ ಕೈ ಈ ರೀತಿ ಮಾಡಬೇಕು? ಎಂದು ಗರಂ ಆದ ನೆಟ್ಟಿಗರು...
 

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೂ ಟ್ರೋಲ್‌ಗಳಿಗೂ ಅವಿನಾಭಾವ ಸಂಬಂಧ ಅನಿಸುತ್ತದೆ. ಗೊತ್ತೋ ಗೊತ್ತಿಲ್ಲದೆನೋ ಒಂದು ಹೇಳಿಕೆ ಕೊಡುವುದು ಆ ಹೇಳಿಕೆನ ಜನರು ಮತ್ತೊಂದು ರೀತಿಯಲ್ಲಿ ಅರ್ಥ ಮಾಡಿಸಿಕೊಳ್ಳುವುದು ಹೀಗೆ ಪದೇ ಪದೇ ನಡೆದು ರಶ್ಮಿಕಾ ಟ್ರೋಲ್ ಕ್ವೀನ್ ಆಗಿಬಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಹಿಂದಿ ಜನಪ್ರಿಯ ಶೋ ಕರ್ಲಿ ಟೇಲ್ಸ್‌ನಲ್ಲಿ ತಮ್ಮ ಸಿನಿಮಾ ಜರ್ನಿ ಮತ್ತು ಲೈಫ್‌ಸ್ಟೈಲ್‌ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಚಿತ್ರರಂಗಕ್ಕೆ ಕಾಲಿಡಲು ಅಡಿಪಾಯ ಹಾಕಿಕೊಟ್ಟ ನಿರ್ಮಾಣ ಸಂಸ್ಥೆ ಹೆಸರನ್ನು ಹೇಳುವುದಕ್ಕೆ ಹಿಂಜರಿದ ಕಾರಣ ಕನ್ನಡಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ರಶ್ಮಿಕಾ ಮಾತುಗಳ: 

'ಕಾಲೇಜು ದಿನಗಳಲ್ಲಿ ನಾನು ಫ್ರೆಶ್‌ ಫೇಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದೆ ಏಕೆಂದರೆ ನನ್ನ ಟೀಚರ್ ಒಬ್ಬರು ಹೋಗಿ ಒಮ್ಮೆ ಪ್ರಯತ್ನಿಸು ಎಂದು ಹೇಳಿದ್ದರು. ನನಗೆ ಇಷ್ಟವಿಲ್ಲದಿದ್ದರೂ ಸ್ಪರ್ಧಿಸಿದೆ. ಮೊದಲು ಸ್ಟೇಟ್‌ ಲೆವೆಲ್‌ನಲ್ಲಿ ಸ್ಪರ್ಧೆ ಇತ್ತು ಆನಂತರ ನ್ಯಾಷನಲ್‌ ಲೆವೆಲ್‌ನಲ್ಲಿತ್ತು ಆಮೇಲೆ ನಾನು ಟೈಟಲ್ ಪಡೆದುಕೊಂಡೆ.  ಇದೆಲ್ಲಾ ಆದ ಮೇಲೆ ನನ್ನ ಫೋಟೋ ಮತ್ತು ಹೆಸರನ್ನು ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ಮೊದಲ ಪೇಜ್‌ನಲ್ಲಿ ಹಾಕಿದ್ದರು. ನನ್ನ ನಾರ್ಮಲ್ ಕಾಲೇಜ್‌ ಲೈಫ್‌ ನಡೆಯುತ್ತಿತ್ತು.' ಎಂದು ಜರ್ನಿ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

 

'ಒಂದು ದಿನ ಒಂದು ಪ್ರೊಡಕ್ಷನ್‌ ಹೌಸ್‌ ನನಗೆ ಕರೆ ಮಾಡಿದ್ದರು, ಇದರಲ್ಲಿ ನನಗೆ ನಂಬಿಕೆ ಇರಲಿಲ್ಲ ಇದೊಂದು ಪ್ರ್ಯಾಂಕ್ ಅನ್ಕೊಂಡು ಸುಮ್ಮನಾದೆ. ಇಲ್ಲ ಸರ್‌ ನನಗೆ ಇದರಲ್ಲಿ ಆಸಕ್ತಿ ಇಲ್ಲ ನಾನು ವಿದ್ಯಾಭ್ಯಾಸ ಮುಂದುವರೆಸಬೇಕು ಎಂದು ಹೇಳಿ ಫೋನ್ ಕಟ್ ಮಾಡಿದೆ. ರಾಮಯ್ಯ ಕಾಲೇಜ್‌ನಲ್ಲಿ ಓದುತ್ತಿರುವೆ ಎಂದು ತಿಳಿದುಕೊಂಡು ನನ್ನ ಟೀಚರ್‌ಗಳ ಮೂಲಕ ನನ್ನ ಸಂಪರ್ಕ ಮಾಡಲು ಮುಂದಾದ್ದರು. ನನ್ನ ಟೀಚರ್‌ಗಳು ನನ್ನ ಬೆನ್ನಿಂದೆ ಬಿದ್ದ ಕಾರಣ ನಾನು ಸರಿ ಮೀಟಿಂಗ್‌ಗೆ ಹೋಗಲು ಒಪ್ಪಿಕೊಂಡೆ ಏಕೆಂದರೆ ಟೀಚರ್‌ಗಳಿಗೆ ನಾನು ಇಲ್ಲ ಎಂದು ಹೇಳುವುದಿಲ್ಲ. ಮೀಟಿಂಗ್ ಹೋಗಿದೆ ಅಲ್ಲಿ ಆಡಿಷನ್ ನಡೆಯಿತ್ತು...ಓ ದೇವರೆ ಅಡಿಷನ್ ಮಾಡೋದು ತುಂಬಾನೇ ಕಷ್ಟ. ಏನಾದರೂ ಸೀನ್ ಕೊಟ್ಟು ಮಾಡಲು ಹೇಳಿದ್ದರೆ ಓಕೆ ಸುಮ್ಮನೆ ಕ್ಯಾಮೆರಾ ಮುಂದೆ ಹೇಗೆ ತಯಾರಿ ಮಾಡಿಕೊಳ್ಳುವುದು?. ನನ್ನ ಜೀವನದಲ್ಲಿ ನಾನು ಆಕ್ಟಿಂಗ್ ಮಾಡಿಲ್ಲ ನನಗೆ ಮಾಡಲು ಬರುವುದಿಲ್ಲ ನಾನು ಅಡಿಷನ್ ಕೊಡುವುದಿಲ್ಲ ಅಂತ ಹೇಳಿದೆ. ಆಡಿಷನ್ ಬೇಡ ನೀವು ನಮ್ಮ ಜೊತೆ ಕಾಮನ್ ಆಗಿ ಹೇಗೆ ಮಾತನಾಡುತ್ತೀರಿ ಹಾಗೆ ಮಾತನಾಡಿ ಆದರೆ ಕ್ಯಾಮೆರಾ ಆನ್ ಆಗಿರುತ್ತದೆ ಎಂದು ಹೇಳಿದ್ದರು.' ಎಂದು ಆಡಿಷಬ್ ದಿನಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಬೆಳಗ್ಗೆದ್ದು ಕುಡಿಯೋದು ಬಿಸಿನೀರು, ಜ್ಯೂಸ್ ಯಾವ್ದೂ ಅಲ್ಲ, ಮತ್ತೇನು ?

'ಒಬ್ಬರ ಜೊತೆ ಮಾತನಾಡುವಾಗ ನಾನು ತುಂಬಾನೇ ಎಕ್ಸಪ್ರೆಸ್ ಮಾಡುವೆ ಹೀಗಾಗಿ ನಾನು ಹೆಚ್ಚಿಗೆ ಮಾತನಾಡಿದೆ ಅದರಲ್ಲೂ ನಾನು ಕೈ ಎಲ್ಲಾ ಬಳಸಿಕೊಂಡು ಮಾತನಾಡುವ ವ್ಯಕ್ತಿ ಈ ಗುಣ ಅವರಿಗೆ ಇಷ್ಟವಾಯ್ತು. ನಟ-ನಟಿರ ಜೀವನ ಹೇಗಿರುತ್ತೆ ನೋಡಬೇಕು ಅನ್ನೋದು ನನ್ನ ಆಸೆ ಆಗಿತ್ತು ಹೀಗಾಗಿ ಒಂದು ಸಿನಿಮಾ ಮಾಡಿ ಹೊರ ಬರೋಣ ಅಂದುಕೊಂಡೆ ಆದರೆ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆ ದಿನ ನಾನು ಸ್ವೀಕರಿಸಿ ಪ್ರೀತಿ ಎಂದೂ ಮರೆಯಲಾಗದು. ಚಿತ್ರಮಂದಿರದಿಂದ ಹೊರ ಬರುವಾಗ ಜನರು ನನ್ನ ಹೆಸರು ಕೂಗುತ್ತಿದ್ದಾರೆ, ಆ ಪಾತ್ರದ ಹೆಸರಿನಿಂದ ನನ್ನನ್ನು ಕರೆಯುತ್ತಿದ್ದಾರೆ. ಒಂದಾದ ಮೇಲ್ಲೊಂದು ಸೈನ್ ಮಾಡಿ ಮಾಡಿ ಈಗ ಇಲ್ಲಿಗೆ ಬಂದು ನಿಂತಿರುವೆ'  ಎಂದು ಹೇಳಿದ್ದಾರೆ.

ಈ ಮಟ್ಟದಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಾಧನೆ ಮಾಡಲು ಸಹಾಯ ಮಾಡಿದ ಪ್ರೊಡಕ್ಷನ್ ಸಂಸ್ಥೆ ಹೆಸರು ಹೇಳಬೇಕಿತ್ತು ಅಲ್ಲದೆ ಕೈ ಸನ್ನಿ ಮಾಡಿರುವುದು ಸರಿ ಅಲ್ಲ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

 

click me!