ರಿಷಬ್‌ಗೆ ಅಭಿಮಾನಿಯಾದೆ, ಸಪ್ತಮಿ ಮುಗ್ಧತೆ ಇಷ್ಟವಾಯಿತು; 'ಕಾಂತಾರ' ನೋಡಿ ಹೊಗಳಿದ ಧನಂಜಯ್

Published : Oct 24, 2022, 05:45 PM IST
ರಿಷಬ್‌ಗೆ ಅಭಿಮಾನಿಯಾದೆ, ಸಪ್ತಮಿ ಮುಗ್ಧತೆ ಇಷ್ಟವಾಯಿತು; 'ಕಾಂತಾರ' ನೋಡಿ ಹೊಗಳಿದ ಧನಂಜಯ್

ಸಾರಾಂಶ

ಡಾಲಿ ಧನಂಜಯ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ರಿಷಬ್ ಶೆಟ್ಟಿಗೆ ಅಭಿಮಾನಿಯಾದೆ ಎಂದು ಹೇಳಿದ್ದಾರೆ.  

ದೈವದ ಗಗ್ಗರಕ್ಕೆ ಇಡೀ ಭಾರತೀಯ ಸಿನಿಮಾರಂಗ ಸ್ತಬ್ಧವಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಎಲ್ಲಾ ಭಾಷೆಯಿಂದನೂ ಮೆಚ್ಚುಗೆ ಮಹಾಪೂರ ಬರುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಇದೀಗ ರಿಷಬ್ ಶೆಟ್ಟಿ ಕಾಂತಾರ ನೋಡಿದ ಕನ್ನಡದ ಮತ್ತೋರ್ವ ಖ್ಯಾತ ನಟ ಧನಂಜಯ್ ಕೂಡ ಮನಸೋತಿದ್ದಾರೆ. ರಿಷಬ್ ಶೆಟ್ಟಿಗೆ ಅಭಿಮಾನಿಯಾದೆ ಎಂದು ಹೇಳಿದ್ದಾರೆ. 

ನಟ ಧನಂಜಯ್ ಸದ್ಯ ಹೆಡ್ ಬುಷ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಹೆಡ್ ಬುಷ್ ಸಿನಿಮಾದ ರಿಲೀಸ್‌ನ ನಡುವೆ ಕಾಂತಾರ ನೋಡಲು ಸಾಧ್ಯವಾಗಿರಲಿಲ್ಲ ಎಂದಿರುವ ಧನಂಜಯ್ ಸದ್ಯ ಬಿಡುವು ಮಾಡಿಕೊಂಡು ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮತ್ತು ರಿಷಬ್ ಶೆಟ್ಟಿ ಧನಂಜಯ್ ಟ್ವೀಟ್ ಮಾಡಿದ್ದಾರೆ.  

Kanatara; ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ನಟ ಕಿಶೋರ್ ಪ್ರಶ್ನೆ

'ಕಾಂತಾರ ನನ್ನ ಹೆಡ್ ಬುಷ್ ಸಿನಿಮಾ ಕೆಲಸದ ನಡುವೆ ನೋಡೋದು ತಡವಾಯಿತು. ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗು ನಿರ್ದೇಶಕನಕ್ಕೆ ಅಭಿಮಾನಿಯಾದೆ. ಎಂಥ ಅದ್ಭುತವಾದ ಅನುಭವ. ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು. ಕಾಂತಾರ ಖಂಡಿತವಾಗಿಯೂ ನಮ್ಮ ಹೆಮ್ಮೆ, ಕನ್ನಡ ಚಿತ್ರರಂಗದ ಹೆಮ್ಮೆ' ಎಂದು ಹೇಳಿದ್ದಾರೆ. 

ಇನ್ನು ಇಂಥ ಅದ್ಭುತ ಸಿನಿಮಾಗಳನ್ನು ನೀಡುತ್ತಿರುವ ಹೊಂಬಾಳೆ ಫಿಲ್ಮ್ಸ್‌ಗೆ ಧನಂಜಯ್ ಧನ್ಯವಾದ ಹೇಳಿದ್ದಾರೆ. 'ಇಂತಹ ಕಥೆಗಳನ್ನು ಒಪ್ಪಿ, ಅಪ್ಪಿ ಜಗತ್ತಿಗೆ ತಲುಪಿಸುವಂತಹ ನಮ್ಮ hombalefilmsಗೆ ನನ್ನ ಪ್ರೀತಿಯ ಅಪ್ಪುಗೆ' ಎಂದು ಧನಂಜಯ್ ಹೇಳಿದ್ದಾರೆ.

ರಿಷಬ್ ಶೆಟ್ಟಿಯ ಮಾಸ್ಟರ್‌ಪೀಸ್; 'ಕಾಂತಾರ' ನೋಡಿ ಹೊಗಳಿದ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಅಗ್ನಿಹೋತ್ರಿ

ಹೆಡ್ ಬುಷ್ ಬಗ್ಗೆ

ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ಇದೇ ತಿಂಗಳು ಅಕ್ಟೋಬರ್ 21ರಂದು ರಿಲೀಸ್ ಆಗಿದೆ. ಹೆಡ್ ಬುಷ್ ಡಾನ್ ಜಯರಾಜ್ ಬಯೋಪಿಕ್. ಡಾನ್ ಜಯರಾಜ್ ಆಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ರಘು ಮುಖರ್ಜಿ, ಶ್ರುತಿ ಹರಿಹರನ್, ದೇವರಾಜ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಹೆಡ್ ಬುಷ್ ರಿಲೀಸ್ ಆಗಿ 3 ದಿನಕ್ಕೆ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹೆಡ್ ಬುಷ್ ನಡುವೆಯೂ ಕಾಂತಾರ  ಸಿನಿಮಾವನ್ನು ನೋಡಿ ಕೊಂಡಾಡಿದ ನಟ ರಾಕ್ಷಸ ಡಾಲಿ ಧನಂಜಯ್ ಅವರಿಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?