ನಾವಿಬ್ಬರೂ ಮಿಡಲ್ ಕ್ಲಾಸ್ ಕುಟುಂಬದಿಂದ ಬೆಳೆದು ಬಂದವರು: ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂಣ್ಣ

Published : Mar 17, 2025, 01:02 PM ISTUpdated : Mar 17, 2025, 01:30 PM IST
ನಾವಿಬ್ಬರೂ ಮಿಡಲ್ ಕ್ಲಾಸ್ ಕುಟುಂಬದಿಂದ ಬೆಳೆದು ಬಂದವರು: ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂಣ್ಣ

ಸಾರಾಂಶ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪ್ರೀತಿಯಲ್ಲಿರುವ ಬಗ್ಗೆ ವದಂತಿಗಳಿವೆ. ಇಬ್ಬರೂ ಸ್ನೇಹಿತರೆಂದು ಹೇಳಿಕೊಂಡರೂ, ರಶ್ಮಿಕಾ ಇತ್ತೀಚೆಗೆ ವಿಜಯ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ವಿಜಯ್ ಸೀರಿಯಸ್ ಆಗಿರುವುದು ಮತ್ತು ಕೆಲಸದಲ್ಲಿ ಮಗ್ನರಾಗಿರುವುದು ಅವರ ಕೆಟ್ಟ ಗುಣವೆಂದು ಹೇಳಿದ್ದಾರೆ. ಪುಷ್ಪ 2 ಚಿತ್ರೀಕರಣದ ವೇಳೆ ವಿಜಯ್ ಸಹಾಯ ಮಾಡಿದ್ದನ್ನು ರಶ್ಮಿಕಾ ನೆನಪಿಸಿಕೊಂಡಿದ್ದಾರೆ. ಗೀತಾ ಗೋವಿಂದಂ ಚಿತ್ರದ ನಂತರ ಇಬ್ಬರೂ ಸ್ನೇಹಿತರಾದರು.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಪ್ರೀತಿ ಅರಳುತ್ತಿದೆ ಎಂದು ಹಲವು ವರ್ಷಗಳಿಂದ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಜಸ್ಟ್‌ ಫ್ರೆಂಡ್ಸ್‌ ಎಂದು ಹೇಳಿಕೊಂಡು ಓಡಾಡುತ್ತಿರುವುದು ಸತ್ಯ ಆದರೆ ಕದ್ದು ಮುಚ್ಚಿ ಓಡಾಡಿ ಸಿಗಾಕೊಂಡಿರುವ ಸುದ್ದಿ ಜಾಸ್ತಿ ಇದೆ. ಹಾಗಿದ್ರೆ ಲವ್ ಮಾಡುವುತ್ತಿದ್ದಾರಾ ಇಲ್ವಾ ಎಂದು ಅದೆಷ್ಟೋ ಸಂದರ್ಶನಗಳಲ್ಲಿ ನೇರವಾಗಿ ಪ್ರಶ್ನೆ ಮಾಡಲಾಗಿತ್ತು. ಸತ್ಯ ಒಪ್ಪಿಕೊಳ್ಳದೆ ಇಲ್ಲ ನಾವು ಸ್ನೇಹಿತರು ಎಂದು ಇಬ್ಬರೂ ಆಗಾಗ ಸ್ಪಷ್ಟನೆ ಕೊಡುತ್ತಾರೆ. ಇತ್ತೀಚಿನ ನಡೆದ ಸಂದರ್ಶನಲ್ಲಿ ವಿಜಯ್‌ರಲ್ಲಿ ಇರುವ ಒಳ್ಳೆಯ ಮತ್ತು ಕೆಟ್ಟ ಗುಣದ ಬಗ್ಗೆ ಹಂಚಿಕೊಂಡಿದ್ದಾರೆ.  

'ವಿಜಯ್ ದೇವರಕೊಂಡ ಜೊತೆಗಿನ ಸ್ನೇಹದ ಒಳ್ಳೆಯ ವಿಚಾರ ಏನೆಂದರೆ ನಾವಿಬ್ಬರೂ ಮಿಡಲ್ ಕ್ಲಾಸ್‌ ಫ್ಯಾಮಿಲಿಯಿಂದ ಬಂದವರು. ನಮ್ಮ ಯೋಚನೆಗಳು ನಮ್ಮ ದೃಷ್ಟಿಕೋನ ಒಂದೇ ಇದೆ. ನನಗೆ ಇದು ಇಷ್ಟವಾಗುತ್ತದೆ ಏಕೆಂದರೆ ನಾವಿಬ್ಬರೂ ರಿಯಲ್ ಆಗಿರುತ್ತೀವಿ ಅದು ಅತಿ ಸುಲಭ. ವರ್ಸ್ಟ್‌ ವಿಚಾರ ಏನೆಂದರೆ ವಿಜಯ್ ಸದಾ ಸೀರಿಯಸ್‌ ಅಗಿ ಇರುತ್ತಾನೆ. ಸದಾ ಕೆಲಸ ಕೆಲಸ ಕೆಲಸ ಅಂತ ಹೇಳುತ್ತಿರುತ್ತಾನೆ. ಅವನು ರಾಕೆಟ್ ರೀತಿ ಕೆಲಸ ಮಾಡುತ್ತಾನೆ' ಎಂದು ನೇಹಾ ದೂಪಿಯಾ ಸಂದರ್ಶನದಲ್ಲಿ ರಶ್ಮಿಕಾ ಮಾತನಾಡಿದ್ದಾರೆ. 

ದುಡ್ಡು ಬಂದ್ರೆ ಇವತ್ತಿನ ಖರ್ಚು ನೋಡ್ಕೋಬೇಕು, ಈಗಲೂ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಿರೋದು: ನವೀನ್ ಶಂಕರ್

ಅಷ್ಟೇ ಅಲ್ಲ ಪುಷ್ಪ 2 ಸಿನಿಮಾ ಶೂಟಿಂಗ್ ಸಮಯದಲ್ಲಿ ಕಷ್ಟ ಆದಾಗ ಕೂಡ ವಿಜಯ್ ಸಹಾಯ ಮಾಡಿದ್ದಾರೆ. ' ನನ್ನ ಕೈಗೆ ಸೀನ್ ಪತ್ರ ಕೊಟ್ಟಾಗ ಏನ್ ಮಾಡಬೇಕು? ಹೇಗ್ ಮುಂದುವರೆಯಬೇಕು ಎಂದು ಗೊತ್ತಿರಲಿಲ್ಲ. ಹೀಗಾಗಿ ವಿಜಯ್‌ರನ್ನು ನಾನೇ ಸಂಪರ್ಕ ಮಾಡಿದೆ. ಚಿತ್ರದ ಬಗ್ಗೆ ಅದೊಂದೇ ದೃಶ್ಯ ಅವರೊಟ್ಟಿಗೆ ಚರ್ಚೆ ಮಾಡಿದ್ದು. ಹೇಗೆ ಶುರು ಮಾಡಬೇಕು ಗೊತ್ತಾಗುತ್ತಿಲ್ಲ ಎಂದು ಹೇಳಿದಾಗ ಅವರ ದೃಷ್ಟಿಕೋನದಿಂದ ನನಗೆ ಅರ್ಥ ಮಾಡಿಸಿದರು. ಕೇಳಿದ ತಕ್ಷಣ ಇಂಟ್ರೆಸ್ಟಿಂಗ್ ಅನಿಸುತ್ತಿತ್ತು. ಸಿನಿಮಾ ಸೆಟ್‌ನಲ್ಲಿ ಸುಕುಮಾರ್ ಸರ್ ಮತ್ತು ಅಲ್ಲು ಸರ್ಜು ಸರ್ ಹೇಳಿದಂತೆ ನಡೆಯುತ್ತಿತ್ತು. ಆದರೆ ವಿಜಯ್  ಒಂದಲ್ಲ ಒಂದು ರೀತಿಯಲ್ಲಿ ನನಗೆ ಬಿಗ್ ಸಪೋರ್ಟ್ ಆಗಿದ್ದಾರೆ' ಎಂದು ರಶ್ಮಿಕಾ ಹೇಳಿದ್ದಾರೆ. 

ನಾನು ಸೂಸೈಡ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆ ಸ್ನೇಹಿತೆ ಕಾಲ್ ಮಾಡಿದ್ದಳು: ಮಜಾ ಟಾಕೀಸ್ ರೆಮೋ

ಪರಿಚಯ ಆಗಿದ್ದು ಹೇಗೆ?

ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆಯುತ್ತದೆ. ಅಯ್ಯೋ ಒಂದು ಸಿನಿಮಾ ಮಾಡ್ಕೊಂಡು ಆಗಲೇ ಫ್ಯಾಮಿಲಿ ಕಡೆ ವಾಲುತ್ತಿದ್ದಾರೆ ಅಂತ ಜನರಿಗೆ ಟೆನ್ಶನ್ ಶುರುವಾಗಿತ್ತು. ಆದರೆ ಸಣ್ಣ ಮನಸ್ಥಾಪದಿಂದ ಮದುವೆ ಮುರಿದು ಬಿತ್ತು. ಈ ಬ್ರೇಕಪ್‌ಗೆ ಕಾರಣವೇ ಗೀತಾ ಗೋವಿಂದಮ್ ಸಿನಿಮಾ ಎಂದು ಎಲ್ಲರೂ ಹೇಳಲು ಶುರು ಮಾಡಿದ್ದರು ಏಕೆಂದರೆ ಇಲ್ಲಿ ರಶ್ಮಿಕಾ ಮತ್ತು ನಟ ವಿಜಯ್ ದೇವರಕೊಂಡ ಲಿಪ್‌ಲಾಕ್ ಮಾಡಿದ್ದಾರೆ. ಈ ಚಿತ್ರದಿಂದ ಇಬ್ಬರೂ ಫ್ರೆಂಡ್ಸ್ ಅಗಿದ್ದು ಅಲ್ಲಿಂದ ಪ್ರತಿ ಸಿನಿಮಾ ಸಮಯದಲ್ಲಿ ಸ್ನೇಹಿತರಾದರು. ಆಗಾಗ ಭೇಟಿ ಮಾಡುವುದು ಒಟ್ಟಿಗೆ ವಿದೇಶ ಪ್ರಯಾಣ ಮಾಡುವುದು ಕಾಮನ್ ಆಗಿಬಿಟ್ಟಿತ್ತು.

ನಿಜಕ್ಕೂ ಈ ಪ್ರಪಂಚದ ಸುಂದರಿ ನೀನಾ? ಅನುಷ್ಕಾ ಶರ್ಮಾ ಪ್ರಶ್ನೆಗೆ ಅತಿ ಸ್ಮಾರ್ಟ್ ಉತ್ತರ ಕೊಟ್ಟ ಐಶ್ವರ್ಯ ರೈ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ