
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ರೆಸ್ಟೋರೆಂಟ್, ರೆಸಾರ್ಟ್‌ಗಳಿಗೆ ಹೋಗೋದು ಜಾಸ್ತಿ. ಸಿನಿಮಾ ರಂಗದವರ ಜೊತೆ ಆತ್ಮೀಯತೆಯಿಂದಿರೋ ವಿಜಯಲಕ್ಷ್ಮೀ ಅವರು ಆಗಾಗ ಟ್ರಾವೆಲ್ ಮಾಡ್ತಾರೆ, ಮದುವೆ, ಸಭೆ-ಸಮಾರಂಭಗಳಿಗೂ ಹೋಗ್ತಾರೆ. ಈಗ ಅವರು ಶಿಲ್ಪಾ ಶೆಟ್ಟಿ ಒಡೆತನದ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಆಹಾರದ ಬೆಲೆ ಮಾತ್ರ ಕೇಳ್ಬೇಡಿ!
ಶಿಲ್ಪಾ ಶೆಟ್ಟಿಯ ವೈಭವದ ರೆಸ್ಟೋರೆಂಟ್!
ಶಿಲ್ಪಾ ಶೆಟ್ಟಿ ಅವರು ಬೆಂಗಳೂರಿನಲ್ಲಿ Bastian Garden City ಎಂಬ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಅರವತ್ತು ವರ್ಷದ ಬಂಗಲೆಯಲ್ಲಿ ವಿವಿಧ ರೀತಿಯ ಆಹಾರವಿದೆ. ಅದರಲ್ಲೂ ಸಮುದ್ರದ ಆಹಾರಗಳಿಗೆ ಈ ರೆಸ್ಟೋರೆಂಟ್ ತುಂಬ ಫೇಮಸ್. ಇನ್ನು ಇಲ್ಲಿ ಓರ್ವ ವ್ಯಕ್ತಿಯ ಸಾಮಾನ್ಯ ಪ್ಲೇಟ್‌ಗೆ ಮಿನಿಮಮ್ ಎರಡು ಸಾವಿರ ರೂಪಾಯಿ ಬೆಲೆ ಇದ್ಯಂತೆ. ಈ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟರೆ, ಬೇರೆ ದೇಶಕ್ಕೆ ಹೋದ ಅನುಭವ ಸಿಗೋದಂತೂ ಫಿಕ್ಸ್. ಏಕಕಾಲಕ್ಕೆ 400 ಜನರು ಕೂರಬಹುದಾದ ಈ ರೆಸ್ಟೋರೆಂಟ್ ಪ್ರತಿ ತಿಂಗಳು ಹತ್ತು ಕೋಟಿ ರೂಪಾಯಿ ಕಮಾಯಿ ಮಾಡುತ್ತದೆಯಂತೆ. ಅಂದಹಾಗೆ ಶಿಲ್ಪಾ ಶೆಟ್ಟಿ ಅವರು ಈ ರೆಸ್ಟೋರೆಂಟ್‌ಗೆ 50% ಹಣ ಹೂಡಿದ್ದಾರಷ್ಟೇ.
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರ, 'ಮದರ್ ಇಂಡಿಯಾ' ಮನೆ ಫಂಕ್ಷನ್‌ಗೆ ಜೋಡೆತ್ತು ಬರಲಿಲ್ಲ..!
ಆಕ್ಟಿವ್ ಆಗಿರೋ ವಿಜಯಲಕ್ಷ್ಮೀ
ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಧನ್ವೀರ್ ನಟನೆಯ ʼವಾಮನʼ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿ ಶುಭಾಶಯ ತಿಳಿಸಿದ್ದರು. ಇನ್ನು ನಟ ದರ್ಶನ್ ಅವರ ಕಷ್ಟದ ಸಮಯದಲ್ಲಿ ಧನ್ವೀರ್ ಬೆನ್ನೆಲುಬಾಗಿ ನಿಂತಿದ್ದರು. ಈಗ ಅವರ ಸಿನಿಮಾಕ್ಕೆ ವಿಜಯಲಕ್ಷ್ಮೀ ಬೆಂಬಲ ಕೊಟ್ಟಿದ್ದಾರೆ. ಅಷ್ಟಾಗಿ ಕ್ಯಾಮರಾ ಮುಂದೆ ಬರದ ವಿಜಯಲಕ್ಷ್ಮೀ ಅವರು ʼವಾಮನʼ ಸಿನಿಮಾಕ್ಕೆ ವಿಡಿಯೋ ಬೈಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ, ಭಾಷಣ ಮಾಡಿದ್ದಲ್ಲದೆ ತಾಳಿಯನ್ನು ಕೂಡ ನೀಡಿದ್ದರು. ಇತ್ತೀಚೆಗೆ ಅವರು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಂದಹಾಗೆ ದರ್ಶನ್ ಅವರು ಮೈಸೂರಿನ ಲಲಿತ್ ಮಹಲ್‌ನಲ್ಲಿ ʼದಿ ಡೆವಿಲ್ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದಾರೆ.
ದರ್ಶನ್ 'ದಿ ಡೆವಿಲ್' ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ಮೈಸೂರಿನಲ್ಲಿ ಶೂಟಿಂಗ್.. ರೋಲ್ ಏನು...!?
ಕಾಸ್ಟ್ಯೂಮ್‌ನಿಂದ ಗಮನಸೆಳೆಯುವ ವಿಜಯಲಕ್ಷ್ಮೀ!
ಸೀರೆಯಿರಲೀ, ವೆಸ್ಟರ್ನ್ ಡ್ರೆಸ್ ಇರಲೀ ಸಖತ್ ಸ್ಟೈಲಿಶ್ ಆಗಿ ಕಾಣುವ ವಿಜಯಲಕ್ಷ್ಮೀ ಈ ಬಾರಿ ಬ್ಲ್ಯಾಕ್ ಡ್ರೆಸ್ ಧರಿಸಿ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ಅಲ್ಲಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವರು ಬ್ರಂಚ್‌ಗೆ ಹೋಗಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಬಟ್ಟೆಗಳಿಂದ ಗಮನಸೆಳೆಯುತ್ತಿದ್ದಾರೆ. ನಟ ದರ್ಶನ್ ಅವರ ಕಷ್ಟದ ಸಮಯದಲ್ಲಿ ವಿಜಯಲಕ್ಷ್ಮೀ ಗಟ್ಟಿಯಾಗಿ ನಿಂತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.