
ಕನ್ನಡ ಸಿನಿಮಾ ಉದ್ಯಮದಲ್ಲಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಸ್ಟಾರ್ಸ್ ಆಗಿಹೋಗಿದ್ದಾರೆ. ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ. ಆದರೆ, ಕೆಲವರು ಸ್ಯಾಂಡಲ್‌ವುಡ್ ಉದ್ಯಮಕ್ಕೆ ಯಾವಾಗ ಕಾಲಿಟ್ಟಿದ್ದು, ಯಾವಾಗ ಹೀರೋ ಆಗಿದ್ದು ಎಂಬ ಕುತೂಹಲ ಕೆಲವರಲ್ಲಿರಬಹುದು. ಅದಕ್ಕೆ ಇಲ್ಲಿದೆ ಉತ್ತರ, ಈ ಎಲ್ಲದರ ಕಿರುಪರಿಚಯ ಇಲ್ಲಿದೆ ನೋಡಿ..
ರಿಷಬ್ ಶೆಟ್ಟಿ: ವಿಭಿನ್ನ ಚಿತ್ರಗಳು ಹಾಗೂ ಭಿನ್ನ ಶೈಲಿಯ ನಿರೂಪಣೆಯಿಂದ ನ್ಯಾಷನಲ್ ಲೆವಲ್‌ನಲ್ಲಿ ಜನಪ್ರಿಯತೆ ಗಳಿಸಿದ್ದಾರೆ ನಟ-ನಿರ್ದೇಶಕ ರಿಷಬ್ ಶೆಟ್ಟಿ. ಕಾಂತಾರ ಚಿತ್ರಕ್ಕೂ ಮೊದಲು ಕನ್ನಡದ ನಟರಾಗಿದ್ದ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಭಾರೀ ಯಶಸ್ಸಿನ ಬಳಿಕ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ 'ಜೈ ಹನುಮಾನ್' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ ರಿಷಬ್ ಶೆಟ್ಟಿ. ಜೊತೆಗೆ, ಕಾಂತಾರ ಪ್ರೀಕ್ವೆಲ್ ಚಿತ್ರವನ್ನೂ ನಟಿಸುತ್ತ ನಿರ್ದೇಶನವನ್ನೂ ಮಾಡುತ್ತಿದ್ದಾರೆ ರಿಷಬ್ ಶೆಟ್ಟಿ.
ಮೊದಮೊದಲಿಗೆ ಸೈಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿಯವರು ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಗೆ ಬಂದ 'ಬೆಲ್ ಬಾಟಂ' ಚಿತ್ರದ ಮೂಲಕ. ಆಗ ಅವರಿಗೆ 36 ವರ್ಷ ವಯಸ್ಸು.
ಪುನೀತ್ ರಾಜ್‌ಕುಮಾರ್: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು 'ಅಪ್ಪು' ಚಿತ್ರದ ಮೂಲಕ. 2002ರ ಏಪ್ರಿಲ್ 26ರಂದು ಈ ಚಿತ್ರವು ತೆರೆಗೆ ಬಂದಿತ್ತು. ಅದಕ್ಕೂ ಮೊದಲು ಬಾಲನಟರಾಗಿ ಪುನೀತ್ ನಟಿಸುತ್ತಿದ್ದರು. ಅಪ್ಪು ಚಿತ್ರವು 200 ದಿನಗಳು ಥಿಯೇಟರ್‌ನಲ್ಲಿ ಓಡಿ ಸೂಪರ್ ಹಿಟ್ ಆಗಿತ್ತು. ಆಗ ನಟ ಪುನೀತ್ ರಾಜ್‌ಕುಮಾರ್ ವಯಸ್ಸು 27. ಬಳಿಕ ಅವರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಉಪೇಂದ್ರ: ಕನ್ನಡದ ರಿಯಲ್ ಸ್ಟಾರ್ ಖ್ಯಾತಿಯ ನಟ-ನಿರ್ದೇಶಕ ಉಪೇಂದ್ರ ಅವರು ನಾಯಕರಾಗಿ ನಟಿಸಿದ ಮೊಟ್ಟಮೊದಲ ಚಿತ್ರ 'ಎ'. ಅದಕ್ಕೂ ಮೊದಲು ಅವರು ಸಹಯಾಕ ನಿರ್ದೇಶಕರಾಗಿ, ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದರು. ನಾಯಕರಾದಾಗ ಅವರ ವಯಸ್ಸು 30. ಸದ್ಯ ಅವರು ಸಿನಿಮಾ ನಿರ್ದೇಶನ ಹಾಗೂ ನಟನೆ ಎರಡನ್ನೂ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ನಟನೆ-ನಿರ್ದೇಶನದ 'ಯುಐ' ಚಿತ್ರ ತೆರೆಗೆ ಬಂದಿತ್ತು.
ಯಶ್: ಅಭಿಮಾನಿಗಳಿಂದ ರಾಕಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಯಶ್ ಅವರು ಕೆಜಿಎಫ್ ಚಿತ್ರದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್. ಯಶ್ ಮೊಟ್ಟಮೊದಲು ನಟಿಸಿದ್ದು 'ಜಂಭದ ಹುಡುಗಿ'. ಆದರೆ, ಅವರಿಗೆ ಖ್ಯಾತಿ ತಂದುಕೊಟ್ಟಿದ್ದು ರಾಧಿಕಾ ಪಂಡಿತ್ ನಟನೆಯ 'ಮೊಗ್ಗಿನ ಮನಸ್ಸು'. ಸದ್ಯ ಅವರು ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಹಾಗೂ ಬಾಲಿವುಡ್‌ನ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಶಿವರಾಜ್‌ಕುಮಾರ್: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು 1986ರಲ್ಲಿ ತೆರೆಗೆ ಬಂದ 'ಆನಂದ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ಈ ಚಿತ್ರವು 38 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡು ನಟ ಶಿವರಾಜ್‌ಕುಮಾರ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತು. ಬಳಿಕ ಅವರ ನಟನೆಯ 'ಮನ ಮೆಚ್ಚಿದ ಹುಡುಗಿ' ಹಾಗೂ 'ರಥಸಪ್ತಮಿ' ಚಿತ್ರಗಳೂ ಕೂಡ ಸೂಪರ್ ಹಿಟ್ ಆಗಿ ಅವರಿಗೆ 'ಹ್ಯಾಟ್ರಿಕ್ ಹೀರೋ' ಪಟ್ಟ ತಂದುಕೊಟ್ಟವು. ಮೊದಲ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಯಸ್ಸು 24.
ದರ್ಶನ್: ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ದರ್ಶನ್ ಅವರು 'ಮೆಜೆಸ್ಟಿಕ್' ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಟ್ಟರು. ಸತ್ಯ ನಿರ್ದೇಶನದ ಈ ಚಿತ್ರವು 2001ರಲ್ಲಿ ತೆರೆಗೆ ಬಂದಾಗ ನಟ ದರ್ಶನ್‌ಗೆ 24 ವರ್ಷ ವಯಸ್ಸು. ಬಳಿಕ ಅವರು 25ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡದ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ.
ರಕ್ಷಿತ್ ಶೆಟ್ಟಿ: 2010 ರಲ್ಲಿ ತೆರೆಕಂಡ 'ನಮ್ ಏರಿಯಾದಲ್ ಒಂದಿನ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದರು. ಆದರೆ, ಅವರು ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿದ್ದು 'ತುಗ್ಲಕ್' ಚಿತ್ರದಲ್ಲಿ. ಆಗ ಅವರಿಗೆ 29 ವರ್ಷ. ಸದ್ಯ ಅವರು ನಟ ಹಾಗೂ ನಿರ್ದೇಶಕರಾಗಿ ಮುಂದುವರಿದಿದ್ದಾರೆ.
ಗಣೇಶ್: ಗೋಲ್ಡನ್ ಸ್ಟಾರ್ ಖ್ಯಾತಿಯ ನಟ ಗಣೇಶ್ ಅವರು 2006ರಲ್ಲಿ ತೆರೆಗೆ ಬಂದ 'ಚೆಲ್ಲಾಟ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದೇ ವರ್ಷ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರವು ನಟ ಗಣೇಶ್ ಅವರಿಗೆ ಭರ್ಜರಿ ಗೆಲುವು ತಂದುಕೊಟ್ಟಿತು. 2006ರಲ್ಲಿ ಗಣೇಶ್ ಅವರು ಸ್ಟಾರ್ ನಟ ಆದಾಗ ಅವರಿಗೆ 28 ವರ್ಷ ವಯಸ್ಸು.
ಸುದೀಪ್: ಕಿಚ್ಚ ಸುದೀಪ್ ಎಂದೇ ಕರೆಸಿಕೊಳ್ಳುವ ನಟ ಸುದೀಪ್ ಅವರು 2000ದಲ್ಲಿ ಸುನಿಲ್ ಕುಮಾರ್ ದೇಸಾಯಿಯವರ 'ಸ್ಪರ್ಶ' ಚಿತ್ರದ ಮೂಲಕ ನಾಯಕನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆಗ ಅವರಿಗೆ ವಯಸ್ಸು 27 ವರ್ಷ. ಬಳಿಕ ಅವರು ರಂಗ ಎಸ್‌ಎಸ್‌ಎಲ್‌ಸಿ ಹಾಗೂ ಹುಚ್ಚ ಚಿತ್ರಗಳ ಮೂಲಕ ಸ್ಟಾರ್ ನಟ ಪಟ್ಟಕ್ಕೇರಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.