ಬಟ್ಟೆ ಚೇಂಜ್‌ ಮಾಡೋ ಹಾಗಿಲ್ಲ, ವಾಷ್‌ರೂಮ್‌ಗೆ ಹೋಗೋದೂ ಕಷ್ಟ: ನೋವು ತೋಡಿಕೊಂಡ ರಾಗಿಣಿ

By Suchethana D  |  First Published Aug 24, 2024, 2:31 PM IST

ಶೂಟಿಂಗ್‌ ಸೆಟ್‌ಗಳಲ್ಲಿ ಸಿನಿಮಾ ತಂಡವವರು ಸೌಕರ್ಯ ನೀಡದೇ ನಟಿಯರು ಅನುಭವಿಸುವ ಚಿತ್ರಹಿಂಸೆಗಳ ಬಗ್ಗೆ ನಟಿ ರಾಗಿಣಿ ದ್ವಿವೇದಿ ಹೇಳಿದ್ದೇನು?   
 


ಚಿತ್ರತಾರೆಯರು ಅದರಲ್ಲಿಯೂ ನಟಿಯರು ಎಂದರೆ ಅವರಿಗೆ ಎಲ್ಲಾ ಸೌಕರ್ಯ ಇರುತ್ತದೆ, ಹೋದಲ್ಲಿ, ಬಂದಲ್ಲಿ, ಕಾಲಿಗೊಂದು, ಕೈಗೊಂದು ಆಳು ಇರುತ್ತಾರೆ ಎನ್ನುವುದು ಮಾಮೂಲು. ಇನ್ನು ಸ್ಟಾರ್‌ ನಟರಾದರಂತೂ ಮುಗಿದೇ ಹೋಯ್ತು. ಅವರಿಗೆ ಇರುವಷ್ಟು ಸೌಲಭ್ಯ ಯಾರಿಗೂ ಇಲ್ಲ ಎಂದೇ ಬಹುತೇಕ ಎಲ್ಲರೂ ಅಂದುಕೊಳ್ಳುವುದು ಸಹಜ. ಆದರೆ ಶೂಟಿಂಗ್‌ ಸೆಟ್‌ನಲ್ಲಿ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಇದಾಗಲೇ ಕೆಲವು ನಟಿಯರು ಮನದಾಳದ ಮಾತು ತೆರೆದಿಟ್ಟಿದ್ದಾರೆ. ಇದೀಗ ತುಪ್ಪದ ಬೆಡಗಿ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಇದೇ ನೋವಿನ ಮಾತುಗಳನ್ನಾಡಿದ್ದಾರೆ. ಶೂಟಿಂಗ್‌ ಸ್ಪಾಟ್‌ನಲ್ಲಿ ಹಲವು ಸಂದರ್ಭಗಳಲ್ಲಿ ತಾವು ಅನುಭವಿಸಬೇಕಾದ ನೋವಿನ ಬಗ್ಗೆ ಅವರು ಮಾತನಾಡಿದ್ದಾರೆ.

ನಿರೂಪಕಿ ರ್‍ಯಾಪಿಡ್‌ ರಶ್ಮಿ ಅವರ ಷೋನಲ್ಲಿ ನಟಿ ತಮ್ಮ ಜೀವನದ ಹಲವು ವಿಷಯಗಳನ್ನು ತೆರೆದಿಟ್ಟಿದ್ದು, ಅದರಲ್ಲಿ ಶೂಟಿಂಗ್‌ ಸ್ಪಾಟ್‌ ಕುರಿತು ಮಾತನಾಡಿದ್ದಾರೆ. ಸಾಮಾನ್ಯವಾಗಿ ನಟ-ನಟಿಯರಿಗೆ ವ್ಯಾನೆಟಿ ವ್ಯಾನ್‌ ಎಂದು ನೀಡಲಾಗುತ್ತದೆ. ಹಲವು ಚಿತ್ರ ತಾರೆಯರ ವ್ಯಾನೆಟಿ ವ್ಯಾನ್‌ ಸ್ಟಾರ್‌ ಹೋಟೆಲ್‌ಗಳಂತೆಯೇ ಐಷಾರಾಮಿ ಆಗಿ ಇರುತ್ತದೆ. ಇಲ್ಲಿ ಎಲ್ಲಾ ಸೌಲಭ್ಯಗಳೂ ಇರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಅವರು ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಮೂಲ ಸೌಕರ್ಯದಿಂದ ಹಿಡಿದು ಮನೆಯಲ್ಲಿ ಇರುವ ಎಲ್ಲಾ ಸೌಲಭ್ಯಗಳೂ ಇರುತ್ತವೆ.

Tap to resize

Latest Videos

ಮದುವೆಯಾದ ಹೊಸತರಲ್ಲಿ ಗಂಡನಿಂದಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಆ ದಿನಗಳ ನೆನೆದು ಮಾಧುರಿ ಕಣ್ಣೀರು

ಆದರೆ ಹಲವು ಸಂದರ್ಭಗಳಲ್ಲಿ ಕೆಲವು ಚಿತ್ರಗಳವರು ಮೂಲ ಸೌಕರ್ಯವನ್ನೂ ಕಲ್ಪಿಸುವುದಿಲ್ಲ. ಕೊನೆಯ ಪಕ್ಷ ಬಟ್ಟೆ ಬದಲಿಸಲು, ವಾಷ್‌ ರೂಮ್‌ಗೆ ಹೋಗುವುದಕ್ಕಾದರೂ ವ್ಯಾನೆಟಿ ವ್ಯಾನ್‌ ವ್ಯವಸ್ಥೆ ಮಾಡಿ ಎಂದರೆ ಅದನ್ನೂ ಮಾಡುವುದಿಲ್ಲ ಎಂಬ ಬಗ್ಗೆ ರಾಗಿಣಿ ಮಾತನಾಡಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಶೂಟಿಂಗ್‌ ನಡೆಯುವ ಜಾಗ ಹೊರಭಾಗಗಳಲ್ಲಿ ಇರುತ್ತದೆ. ಒಂದು ವೇಳೆ ಅದು ಬಯಲು ಪ್ರದೇಶವಾಗಿದ್ದರಂತೂ ಮುಗಿದೇ ಹೋಯ್ತು. ನಟರು ಹೇಗೋ ಬಟ್ಟೆ ಬದಲಿಸಿಕೊಳ್ಳಬಹುದು, ವಾಷ್‌ರೂಮ್‌ಗೂ ಹೋಗಬಹುದು. ಆದರೆ ನಟಿಯರು? ಅದಕ್ಕಾಗಿಯೇ ವ್ಯಾನೆಟಿ ವ್ಯಾನ್‌ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ತಮಗೆ ವ್ಯಾನೆಟಿ ವ್ಯಾನ್‌ ನೀಡದೆ ಸಮಸ್ಯೆ ತಂದೊಡ್ಡಲಾಗುತ್ತದೆ. ಇದರಿಂದ ಹಲವು ನಟಿಯರು ಪಡಬಾರದ ಕಷ್ಟ ಪಡಬೇಕಾಗುತ್ತದೆ ಎಂದಿದ್ದಾರೆ ನಟಿ.

ನಾವೇನು ಎಸಿಯಲ್ಲಿ ಕುಳಿತುಕೊಳ್ಳಬೇಕು ಅಂತ ಕೇಳ್ತಿಲ್ಲಾ, ವ್ಯಾನೆಟಿ ವ್ಯಾನ್‌ ಕೇಳ್ತಾ ಇರೋದು. ಆದರೆ ಇದನ್ನೂ ಕೇಳುವ ಹಾಗಿಲ್ಲ. ಹುಡುಗರು ಎಲ್ಲಿ ಬೇಕಾದ್ರೂ ಚೇಂಜ್‌ ಮಾಡ್ತಾರೆ. ಆದರೆ ನಟಿಯರು ಇದನ್ನು ಕೇಳಿದರೆ ಸ್ಟಾರ್‌ಡಂ ಅಂತಾರೆ, ಇನ್ನೂ ಏನೇನೋ ಹೇಳ್ತಾರೆ. ಬಟ್ಟೆ ಚೇಂಜ್‌ ಮಾಡುವುದಾದರೂ ಎಲ್ಲಿ? ಇಂಥ ಸನ್ನಿವೇಶಗಳು ನಡೆದೇ ಇರುತ್ತವೆ. ಇದರಿಂದ ನಟಿಯರಿಗೆ ಆಗುವ ಮುಜುಗರ ಅಷ್ಟಿಷ್ಟಲ್ಲ ಎಂಬ ವಿಷಯವನ್ನು ರಾಗಿಣಿ ತೆರೆದಿಟ್ಟಿದ್ದಾರೆ.  

ಅತ್ಯಾಚಾರ ತಡೆಗೆ ಗಂಡಸರಿಗೆ ಹೀಗೆ ಸಲಹೆ ಕೊಟ್ಟ ನಟಿ ಶೆರ್ಲಿನ್‌ ಚೋಪ್ರಾ! ನೆಟ್ಟಿಗರು ಕೆಂಡಾಮಂಡಲ

click me!