ನಟ ಗಣೇಶ್, ದುನಿಯಾ ವಿಜಯ್‌ಗೋಸ್ಕರ ಕಿರಣ್‌ರಾಜ್‌ ನಟನೆಯ ರಾನಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

By Govindaraj S  |  First Published Aug 23, 2024, 7:23 PM IST

ಕಿರಣ್‌ರಾಜ್‌ ನಟನೆಯ ‘ರಾನಿ’ ಚಿತ್ರ ಆಗಸ್ಟ್‌ 30ಕ್ಕೆ ತೆರೆ ಕಾಣಬೇಕಿತ್ತು. ಆದರೆ, ಚಿತ್ರತಂಡ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದ್ದು, ಸೆ.12ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಮೂಲಕ ಚಿತ್ರತಂಡ ಉತ್ತಮ ನಿರ್ಧಾರ ತೆಗೆದುಕೊಂಡಿದೆ.
 


ಕಿರಣ್‌ರಾಜ್‌ ನಟನೆಯ ‘ರಾನಿ’ ಚಿತ್ರ ಆಗಸ್ಟ್‌ 30ಕ್ಕೆ ತೆರೆ ಕಾಣಬೇಕಿತ್ತು. ಆದರೆ, ಚಿತ್ರತಂಡ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದ್ದು, ಸೆ.12ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಮೂಲಕ ಚಿತ್ರತಂಡ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಸದ್ಯ ‘ಕೃಷ್ಣಂ ಪ್ರಣಯ ಸಖಿ’ ಹಾಗೂ ‘ಭೀಮ’ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಅಲ್ಲದೇ ಜೂ.30ರಂದು ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ತಮ್ಮ ತಮ್ಮ ಮಧ್ಯೆ ಸ್ಪರ್ಧೆ ಬೇಡ ಎಂಬ ಉದಾತ್ತ ಕಾರಣದಿಂದ ಚಿತ್ರತಂಡ ಉತ್ತಮ ನಿರ್ಧಾರಕ್ಕೆ ಬಂದಿದೆ. 

ನಿರ್ದೇಶಕ ಗುರುತೇಜ್‌ ಶೆಟ್ಟಿ, ‘ಯಾವ ಚಿತ್ರಗಳಿಗೂ ತೊಂದರೆ ಆಗಬಾರದು. ಜೊತೆಗೆ ನಮ್ಮದು ದೊಡ್ಡ ಬಜೆಟ್‌ನ ಒಳ್ಳೆಯ ಸಿನಿಮಾ. ಆ ಚಿತ್ರಕ್ಕೂ ಥಿಯೇಟರ್‌ಗಳ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿದ್ದೇವೆ. ನಮ್ಮ ಸಿನಿಮಾ ಕನಸುಗಳನ್ನು ಬೆನ್ನಟ್ಟಿ ಹೋಗುವ ತರುಣನ ಕತೆ ಹೊಂದಿದೆ’ ಎಂದರು. ನಾಯಕ ನಟ ಕಿರಣ್‌ ರಾಜ್‌, ನಿರ್ಮಾಪಕರಾದ ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್ ಹೆಗ್ಡೆ, ವಿತರಕರಾದ ಚಂದನ್ ಸುರೇಶ್ ಇದ್ದರು.

Tap to resize

Latest Videos

ಕಿರಣ್‌ ರಾಜ್‌, ‘ಈ ಚಿತ್ರದ ಕತೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ಹತ್ತಿರವಾಗುತ್ತದೆ‌. ತುಂಬಾ ದೊಡ್ಡ ಕನಸು ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಅದ್ದೂರಿಯಾಗಿ ಮೇಕಿಂಗ್‌ ಮಾಡಲಾಗಿದೆ’ ಎಂದರು. ನಿರ್ದೇಶಕ ಗುರುತೇಜ್ ಶೆಟ್ಟಿ, ‘ಸಾಹಸ ಹಾಗೂ ಕೌಟುಂಬಿಕ ಪ್ರಧಾನ ಸಿನಿಮಾ. ಈ ಹಿಂದೆ ನೀವು ನೋಡಿರದ ಕಿರಣ್‌ ರಾಜ್‌ ಅವರನ್ನು ಈ ಚಿತ್ರದಲ್ಲಿ ನೋಡುತ್ತೀರಿ’ ಎಂದರು. ಈ ಚಿತ್ರದಲ್ಲಿ ಸಮೀಕ್ಷಾ, ರಾಧ್ಯ, ಅಪೂರ್ವ ಮೂವರು ನಾಯಕಿಯರಿದ್ದಾರೆ. ರವಿಶಂಕರ, ಮೈಕೋ ನಾಗರಾಜ್, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್, ಧರ್ಮೇಂದ್ರ ಅರಸ್, ಉಗ್ರಂ ಮಂಜು, ಯಶ್ ಶೆಟ್ಟಿ ನಟಿಸಿದ್ದಾರೆ.

ಡಾಲಿ ಈಗ ಜಿಂಗೋ: ಉದ್ದ ಕೂದಲು ಬಿಟ್ಟು ರಾಜಕಾರಣಿಯಾದ ನಟ ರಾಕ್ಷಸ ಧನಂಜಯ್

ಆಡಿಯೋ ಹಕ್ಕು ಖರೀದಿಸಿದ ಟಿ-ಸೀರೀಸ್‌: ‘ರಾನಿ’ ತಂಡ ಸಂಭ್ರಮಾಚರಣೆಯಲ್ಲಿದೆ. ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಟಿ-ಸೀರೀಸ್‌ ಸಂಸ್ಥೆ ಖರೀದಿಸಿದೆ. ದೊಡ್ಡ ಮೊತ್ತಕ್ಕೆ ಆಡಿಯೋ ಮಾರಾಟವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಗುರುತೇಜ್ ಶೆಟ್ಟಿ ನಿರ್ದೇಶನದ ‘ರಾನಿ’ ಚಿತ್ರದ ಟೀಸರ್‌ ಬಿಡುಗಡೆಯಾದ ಬಳಿಕ ಭಾರಿ ಮೆಚ್ಚುಗೆ ಗಳಿಸಿದೆ. ‘ಕಿರಣ್‌ರಾಜ್‌ ಅವರನ್ನು ಮಾಸ್‌ ಲುಕ್‌ನಲ್ಲಿ ತೋರಿಸಿರುವುದನ್ನು ಜನ ಇಷ್ಟಪಟ್ಟಿದ್ದಾರೆ. ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದು ಉತ್ಸಾಹ ಹೆಚ್ಚಿಸಿದೆ’ ಎನ್ನುತ್ತಾರೆ ಗುರುತೇಜ್‌ ಶೆಟ್ಟಿ. ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು. ‘ಟೀಸರ್, ಪೋಸ್ಟರ್‌ನಿಂದ ಜನಮೆಚ್ಚುಗೆಗೆ ಪಾತ್ರವಾಗಿರುವ ಚಿತ್ರಕ್ಕೆ ಟಿ-ಸೀರೀಸ್ ಜೊತೆಯಾಗಿರೋದು ಹುಮ್ಮಸು ತಂದಿದೆ’ ಎನ್ನುತ್ತಾರೆ ಅವರು.

click me!