'ಇಷ್ಟರಲ್ಲೇ ಮದುವೆ ಆಗ್ತೀನಿ': ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಕೊಟ್ಟ ನಟ ಡಾಲಿ ಧನಂಜಯ್!

By Govindaraj S  |  First Published Aug 23, 2024, 10:18 PM IST

ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ಡಾಲಿ ಧನಂಜಯ್. ನಾಯಕನಾಗಿ, ನಿರ್ಮಾಪಕರಾಗಿ, ಬರಹಗಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ  ಬ್ಯುಸಿಯಾಗಿರುವ ನಟ ರಾಕ್ಷಸ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. 
 


ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ಡಾಲಿ ಧನಂಜಯ್. ನಾಯಕನಾಗಿ, ನಿರ್ಮಾಪಕರಾಗಿ, ಬರಹಗಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ  ಬ್ಯುಸಿಯಾಗಿರುವ ನಟ ರಾಕ್ಷಸ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಇಷ್ಟರಲ್ಲೇ ಮದುವೆ ಆಗ್ತೀನಿ ಎಂದು ಮದುವೆ ವಿಚಾರವಾಗಿ ಡಾಲಿ ಧನಂಜಯ್ ಹೇಳಿದ್ದಾರೆ. ನಾನು ಮದುವೆ ಆಗ್ಬೇಕು ಅನ್ನೋದು ನಮ್ಮ ಅಜ್ಜಿಯ ಆಸೆ. ಆದಷ್ಟು ಬೇಗ ನಾನೂ ಮದುವೆ ಆಗ್ತೀನಿ ಎಂದು ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ

ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತಾಡೋದು ಬಿಡಿ: ನಾವೇ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ನೆಗಟಿವ್ ಆಗಿ ಮಾತಾಡಬಾರದು. ನಿರಂತರವಾಗಿ ಕೆಲಸ ಮಾಡ್ಬೇಕು. ಅದರಿಂದಷ್ಟೇ ಇಂಡಸ್ಟ್ರಿ ಉಳಿಯೋದು ಎಂದು ಜಿಂಗೋ ಟೀಸರ್ ವೇಳೆ ಡಾಲಿ ಧನಂಜಯ್ ಪ್ರತಿಕ್ರಿಯಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮ ಹಂಚಿಕೊಂಡ ಡಾಲಿ, ಈ ವರ್ಷ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಿದ್ರಿಂದ ಅಭಿಮಾನಿಗಳ ಜೊತೆಗೆ ಬರ್ತಡೇ ಆಚರಿಸೋಕೆ ಆಗ್ಲಿಲ್ಲ. ಜಿಂಗೋ ಟೀಸರ್‌ಗೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ಜಿಂಗೋ ಪೊಲಿಟಿಕಲ್ ಥ್ರಿಲ್ಲರ್ ಕಥೆಯನ್ನೊಳಗೊಂಡಿದೆ. ಭಾರತ್ ಜೋಡೋ ಯಾತ್ರೆಯ ರಾಹುಲ್‌ ಗಾಂಧಿ ಘಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಜಿಂಗೋ ಕಂಟೆಂಟ್ ತುಂಬಾ ಅದ್ಭುತವಾಗಿದೆ ಎಂದು ಡಾಲಿ ಧನಂಜಯ್ ಹೇಳಿದರು. 

Tap to resize

Latest Videos

ಡಾಲಿ ಈಗ ಜಿಂಗೋ: ಉದ್ದ ಕೂದಲು ಬಿಟ್ಟು ರಾಜಕಾರಣಿಯಾದ ನಟ ರಾಕ್ಷಸ ಧನಂಜಯ್

ಧನಂಜಯ್ ಹುಟ್ಟುಹಬ್ಬದ ಅಂಗವಾಗಿ ಜಿಂಗೋ ಫಸ್ಟ್ ಜಲಕ್ ಬಿಡುಗಡೆ ಮಾಡಲಾಗಿದೆ. ರಾಜಕಾರಣಿಯಾಗಿ ಡಾಲಿ ಕಾಣಿಸಿಕೊಂಡಿದ್ದು, ಉದ್ದ ಕೂದಲು ಬಿಟ್ಟು ಖಡಕ್ ಡೈಲಾಗ್ ಹೊಡೆಯುತ್ತಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿಂಗೋ ಅಸಲಿಗೆ ರಾಜಕಾರಣಿನಾ ಅಥವಾ ಕ್ರಾಂತಿಕಾರಿನ ಎಂಬ ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರಕ್ಕೆ ಹಾರಿಸ್ ಅಹಮದ್ ಕಥೆ ಚಿತ್ರಕಥೆ ಬರೆದಿದ್ದು, ಶಶಾಂಕ್ ಸೋಗಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ತ್ರಿಷೂಲ್ ವಿಷನರಿ ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ಬ್ಯಾನರ್‌ನಡಿ ಬಿ ನರೇಂದ್ರ ರೆಡ್ಡಿ ಹಾಗೂ ಡಾಲಿ ಧನಂಜಯ್ ಜಿಂಗೋ ಚಿತ್ರ ನಿರ್ಮಿಸುತ್ತಿದ್ದು, ರಾಘವೇಂದ್ರ ಮಾಯಕೊಂಡ ಸಂಭಾಷಣೆ ಚಿತ್ರಕ್ಕಿದೆ. ಇನ್ನು ಜಿಂಗೋ ಎಂದರೆ ವ್ಯಕ್ತಿಯೋರ್ವನ ನಿಕ್ ನೇಮ್ ಎನ್ನುತ್ತದೆ ಚಿತ್ರತಂಡ. ಹಾಗಿದ್ರೆ ಯಾರು ಈ ಜಿಂಗೋ ಎಂಬುದೇ ಸದ್ಯಕ್ಕಿರುವ ಕುತೂಹಲ.

click me!