ಯಾರ ಜೊತೆಗೋ ಹೋಗಿ ಇರುವವಳು ನಾನಲ್ಲ; ಲಾಯರ್ ಜಗದೀಶ್ ಕೊಂಕು ಮಾತಿಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್

By Vaishnavi Chandrashekar  |  First Published Jan 8, 2025, 10:48 AM IST

ರಚಿತಾ ರಾಮ್‌ ಬಗ್ಗೆ ಹರಿದಾಡುತ್ತಿರುವ ಗಾಸಿಪ್‌ಗಳಿಗೆ ಇಲ್ಲಿದೆ ಕ್ಲಾರಿಟಿ. ಲಾಯರ್ ಜಗದೀಶ್ ಹೇಳಿರುವುದು ಸುಳ್ಳಾ ಸತ್ಯನಾ ಎಂದು ರಚ್ಚುನೇ ಉತ್ತರಿಸಿದ್ದಾರೆ. 


ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಸಂಜು ವೆಡ್ಸ್ ಗೀತಾ 2 ಸಿನಿಮಾ ಜನವರಿ 10ರಂದು ರಿಲೀಸ್‌ಗೆ ಸಜ್ಜಾಗಿದೆ. ಪ್ರೆಸ್‌ಮೀಟ್‌ನಲ್ಲಿ ಭಾಗಿಯಾಗುತ್ತಿರುವ ರಚ್ಚು ಸಿನಿಮಾ ತಂಡಕ್ಕೆ ಫುಲ್ ಸಪೋರ್ಟ್ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಈ ಸಮಯದಲ್ಲಿ ರಚಿತಾ ರಾಮ್‌ ಬಗ್ಗೆ ಬಿಗ್ ಬಾಸ್ ಲಾಯರ್ ಜಗದೀಶ್ ನೀಡಿರುವ ಹೇಳಿಕೆಗಳು ವೈರಲ್ ಆಗುತ್ತಿದೆ. ಯಾಲೆ ರಚಿತಾ ರಾಮ್‌ನ ಟಾರ್ಗೆಟ್ ಮಾಡಿದ್ದಾರೆ ಜಗದೀಶ್? ಯಾಕೆ ಪದೇ ಪದೇ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ? ಅದಕ್ಕೆ ಡಿಂಪಲ್ ಕ್ವೀನ್ ಕೊಟ್ಟ ಉತ್ತರವಿದು.

'ತಂದೆ ತಾಯಿ ಒಡಹುಟ್ಟಿದವರು ಹೊರತು ಪಡಿಸಿದರೆ ಸಂಬಂಧಿಕರೇ ಒಂದಿಷ್ಟು ಮಾತನಾಡುತ್ತಾರೆ. ಇನ್ನು ಲಾಯರ್ ಜಗದೀಶ್ ಬಗ್ಗೆ ಏನು ಹೇಳಬೇಕು? ನಾನು ನನ್ನ ಕೆಲಸ ಮಾಡುತ್ತಿದ್ದೀನಿ. ಸುಮಾರು 12 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೀನಿ ಅದಕ್ಕೆ ಪಡೆಯಬೇಕಾಗಿರುವ ಸಂಭಾವನೆ ಪಡೆಯುತ್ತಿದ್ದೀನಿ. ಅವಶ್ಯಕತೆ ಇರುವ ಕಡೆ ಮಾತ್ರ ಮಾತನಾಡುತ್ತೀನಿ. ಶೂಟಿಂಗ್‌ನಲ್ಲಿ ಬ್ಯೂಸಿಯಾಗಿರುತ್ತೀನಿ ಇಲ್ಲವಾದರೆ ಮನೆಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತೀನಿ. ನೀವು ಹೇಳಿದ ವ್ಯಕ್ತಿ ವಯಸ್ಸಿನಲ್ಲಿ ದೊಡ್ಡವರು ಜೀವನದಲ್ಲಿ ಅನುಭವ ಆಗಿರುವವರು ಅದಕ್ಕೆ ಮರ್ಯಾದೆ ಕೊಟ್ಟು ಅಗೌರವಿಸಲು ನನಗೆ ಇಷ್ಟವಿಲ್ಲ. ಅವರು ಮಾತನಾಡುತ್ತಿರುವ ಅಂತೆ ಕಂತೆಗಳ ಬಗ್ಗೆ ಯಾಕೆ ಮಾತನಾಡಬೇಕು. ಕೆಟ್ಟ ಚಟುವಟಿಕೆಗಳಲ್ಲಿ ನಾನು ತೊಡಗಿಸಿಕೊಂಡಿದ್ದರೆ ನನ್ನ ಜೀವನ ನನ್ನ ಇಷ್ಟ ಎಂದು ಹೇಳುತ್ತಿದ್ದೆ ಇದ್ಯಾವುದು ನಾನು ಮಾಡಿಲ್ಲ ಅಂದಾಗ ಯಾಕೆ ಯೋಚನೆ ಮಾಡಬೇಕು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಚಿತಾ ರಾಮ್ ಉತ್ತರಿಸಿದ್ದಾರೆ.

Tap to resize

Latest Videos

ಸೀರೆನೇ ಬೇಕು ಅನ್ನೋದು ಈ ಕಾರಣ; ರಚಿತಾ ರಾಮ್ ಸೀಕ್ರೆಟ್ ಲೀಕ್ ಮಾಡಿದ ಡಿಸೈನರ್

'ತಪ್ಪು ಮಾಡಿದರೆ ಒಪ್ಪಿಕೊಳ್ಳುತ್ತೀನಿ ಇಲ್ಲವಾದರೆ ಒಪ್ಪಿಕೊಳ್ಳುವುದಿಲ್ಲ. ನನ್ನ ಬಗ್ಗೆ ಟಿವಿಯಲ್ಲಿ ಹೀಗೆ ತೋರಿಸಿ  ನೆಗೆಟಿವ್ ಬಂದಿದೆ ಅಂದ್ರೆ ತೆಗೆದುಬಿಡಿ ಎಂದು ನಾನು ಯಾವತ್ತೂ ಯಾರಿಗೂ ಕಾಲ್ ಮಾಡಿ ಕೇಳಿದವಲ್ಲ. ಕೆಲಸ ಮಾಡುವವರು ಯಾವುದಕ್ಕೂ ಟ್ರಿಗರ್ ಆಗುವುದಿಲ್ಲ. ಜೀವನದಲ್ಲಿ ಕಮಿಟ್ಮೆಂಟ್‌ಗಳು ಜಾಸ್ತಿ ಇದೆ ಹೀಗಾಗಿ ಕೆಲಸ ನನಗೆ ಮುಖ್ಯ ನಾನು ಕೆಲಸ ಮಾಡುತ್ತಿದ್ದೀನಿ. ಜನರು ಸುಮ್ಮನೆ ಪ್ರೀತಿ ಕೊಡುವುದಿಲ್ಲ ಅದನ್ನು ಉಳಿಸಿಕೊಳ್ಳಬೇಕು. ನನಗೆ ಸ್ಪಾನ್ಸರ್ ಮಾಡುವವರು ಇದ್ದರೆ 12 ವರ್ಷಗಳ ಕಾಲ ಯಾಕೆ ಕಷ್ಟ ಪಡಬೇಕು. ರಚಿತಾ ರಾಮ್‌ಗೆ ಜೀವನದಲ್ಲಿ ಕಷ್ಟ ಬಂತು, ಜೀವನದಲ್ಲಿ ಎಲ್ಲಾ ಕಳೆದುಕೊಂಡೆ ಅನ್ನೋ ದಿನ ಬಂದರೆ ಒಂದು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಅಲ್ಲಿ ಕೊಟ್ಟ ಪ್ರಸಾದ ತಿನ್ನುಕೊಂಡು ಇರುತ್ತೀನಿ ಹೊರತು ಯಾರ ಜೊತೆಗೂ ಹೋಗಿ ಇರುವವಳು ನಾನಲ್ಲ. ಕೈ ತುಂಬಾ ಕೆಲಸ ಕೊಟ್ಟಿದ್ದಾನೆ ಭಗವಂತ ಇದಕ್ಕೂ ಮೀರಿ ನಾನು ಏನೂ ಬೇಡಲು ಆಗಲ್ಲ' ಎಂದು ರಚಿತಾ ರಾಮ್ ಹೇಳಿದ್ದಾರೆ. 

ಮತ್ತೆ ಕೂದಲಿಗೆ ಕತ್ತರಿ ಹಾಕಿದ ರಚಿತಾ ರಾಮ್; ಸಿಕ್ಕಾಪಟ್ಟೆ ಶಾರ್ಟ್ ಹೇರ್ ಯಾಕೆ ಬುಲ್ ಬುಲ್ ಎಂದ ನೆಟ್ಟಿಗರು

click me!