ವಾರೆ ವಾವ್! ಅದ್ಭುತವಾಗಿದೆ ಆಶಿಕಾ ರಂಗನಾಥ್ ಅಕ್ಕನ ಕೈಯಲ್ಲರಳಿದ ತಂಜಾವೂರು ಪೈಂಟಿಂಗ್

Published : Jan 07, 2025, 09:37 PM ISTUpdated : Apr 30, 2025, 04:36 PM IST
ವಾರೆ ವಾವ್! ಅದ್ಭುತವಾಗಿದೆ ಆಶಿಕಾ ರಂಗನಾಥ್ ಅಕ್ಕನ ಕೈಯಲ್ಲರಳಿದ ತಂಜಾವೂರು ಪೈಂಟಿಂಗ್

ಸಾರಾಂಶ

ನಟಿ ಆಶಿಕಾ ರಂಗನಾಥ್ ಅವರ ಸಹೋದರಿ ಅನುಷಾ ರಂಗನಾಥ್, ಚಿತ್ರರಂಗದಲ್ಲಿ ಹೆಚ್ಚು ಯಶಸ್ಸು ಗಳಿಸದಿದ್ದರೂ, ತಮ್ಮ ಕಲಾವಂತಿಕೆಯನ್ನು ತಂಜಾವೂರು ವರ್ಣಚಿತ್ರಕಲೆಯ ಮೂಲಕ ಪ್ರದರ್ಶಿಸಿದ್ದಾರೆ. ದೇವ-ದೇವತೆಗಳ ಚಿತ್ರಗಳನ್ನು ಒಳಗೊಂಡ ಈ ಕಲಾಕೃತಿಗೆ ಮೆಚ್ಚುಗೆ ವ್ಯಕ್ತವಾಗಿದೆ.  

ಚಂದನವನದ ಚುಟುಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅವರ ಸಹೋದರಿ ಅನುಷಾ ರಂಗನಾಥ್ ನಟಿಯಾಗಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ ಸಿನಿಮಾದಲ್ಲಿ ತಂಗಿ ಆಶಿಕಾರಂತೆ ಯಶಸ್ಸು ಪಡೆಯೋಕೆ ಸಾಧ್ಯವಾಗಲೇ ಇಲ್ಲ. ಹಾಗಾಗಿ ಸಿನಿಮಾದಿಂದ ದೂರಾನೆ ಉಳಿದು ಬಿಟ್ಟರು ಅನುಷಾ. ಆಮೇಲೆ ಮದುವೆಯಾಗಿ ಗಂಡನ ಜೊತೆ ದೇಶ ವಿದೇಶ ಸುತ್ತುತ್ತಾ, ತಂಗಿ ಹಾಗೂ ಸ್ನೇಹಿತರ ಜೊತೆ ಹೊಸ ಹೊಸ ಅಡ್ವೆಂಚರಸ್ ಪ್ರಯತ್ನಿಸುತ್ತಲ್ಲೇ ಇದ್ದರು ನಟಿ. ಇದೀಗ ತಮ್ಮ ಹೊಸ ಟ್ಯಾಲೆಂಟ್ ಒಂದನ್ನು ತೋರಿಸಿದ್ದಾರೆ ಅನುಷಾ. 

ನಟಿಯಾಗಿ ಗುರುತಿಸಿಕೊಂಡಿದ್ದ ಅನುಷಾ ರಂಗನಾಥ್ (Anusha Ranganath) ತಾನು ಒಬ್ಬ ಚಿತ್ರ ಕಲಾವಿದೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಅನುಷಾ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಾವು ಮಾಡಿರುವ ಪೈಂಟಿಂಗ್ ಫೋಟೊ ಪೋಸ್ಟ್ ಮಾಡಿದ್ದು, ಇದನ್ನು ನೋಡಿದ್ರೆ, ಅವರೊಬ್ಬ ಅದ್ಭುತವಾದ ಕಲಾವಿದೆ ಅನ್ನೋದು ಖಂಡಿತವಾಗಿಯೂ ಗೊತ್ತಾಗುತ್ತೆ. ಅಷ್ಟಕ್ಕೂ ಅನುಷಾ ಮಾಡಿದ್ದು, ಅಂತಿಂಥ ಪೈಂಟಿಂಗ್ ಅಲ್ಲ ತಾಂಜಾವೂರು ಪೈಂಟಿಂಗ್ (Thanjavur Painting). ತಂಜಾವೂರು ವರ್ಣಚಿತ್ರಗಳು ಶ್ರೀಮಂತ ಮತ್ತು ಎದ್ದುಕಾಣುವ ಬಣ್ಣಗಳು, ಸರಳವಾದ ಸಾಂಪ್ರದಾಯಿಕ ಸಂಯೋಜನೆ, ಸೂಕ್ಷ್ಮವಾದ ವರ್ಕ್ ಮತ್ತು ಗಾಜಿನ ಮಣಿಗಳು ಮತ್ತು ತುಂಡುಗಳ ಹೊದಿಕೆ, ರತ್ನಗಳ ಹೊದಿಕೆ, ಚಿನ್ನದ ಹಾಳೆಗಳಿಂದ ಮಾಡಿದಂತಹ ಚಿತ್ರಗಳಾಗಿವೆ.  ತಂಜಾವೂರು ವರ್ಣಚಿತ್ರಗಳಲ್ಲಿ ಡೆಕ್ಕಾನಿ, ವಿಜಯನಗರ, ಮರಾಠಾ ಚಿತ್ರಕಲೆಯ ಪ್ರಭಾವವನ್ನು ನೋಡಬಹುದು. ತಂಜಾವೂರ್ ಪೈಂಟಿಂಗ್ ನಲ್ಲಿ ಮುಖ್ಯವಾಗಿ ದೇವರು, ದೇವತೆಗಳ ಚಿತ್ರವನ್ನು (painting of god) ಕೆತ್ತಲಾಗುತ್ತೆ. ಈ ವಿಶೇಷ ಕಲೆಯನ್ನು ಇದೀಗ ಅನುಷ ರಂಗನಾಥ್ ಸಿದ್ಧಿಸಿಕೊಂಡಿತ್ತಾರೆ. ಈ ಕುರಿತು ಫೋಟೊಗಳ ಜೊತೆಗೆ ಪೋಸ್ಟ್ ಹಂಚಿಕೊಂಡಿದ್ದಾರೆ. 

ತಂಜಾವೂರ್ ಪೈಂಟಿಂಗ್ "ಹೊಸ ಕಲೆಯನ್ನು ನಾನು 2024 ರಲ್ಲಿ ಕಲಿತ್ತಿದ್ದೇನೆ. ಈ ಅಸಾಧಾರಣ ಅನುಭವವನ್ನು ಆಯ್ಕೆ ಮಾಡಿಕೊಂದಿದ್ದಕ್ಕೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಈ ಹೊಸ ಕಲಿಕೆ ನನ್ನ ಪರಿವರ್ತನೆಗೆ ಸಹಾಯಕವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಮತ್ತು ನನ್ನನ್ನು ನಾನು ಅನುಮಾನಿಸಿದಾಗಲೂ ಈ ಹೆಜ್ಜೆ ಇಡಲು ಪ್ರೋತ್ಸಾಹಿಸಿದ ಅಮ್ಮನಿಗೆ, ನನ್ನ ಹೃತ್ಪೂರ್ವಕ ಧನ್ಯವಾದಗಳು. ಮೈಸೂರು ಈಗ ನನ್ನ ಜೀವನದ ಸುಂದರ ಅಧ್ಯಾಯವಾಗಿ ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.  ಅಲ್ಲಿ ನಾನು ಮನೆ, ಕುಟುಂಬ ಮತ್ತು ಬೆಳವಣಿಗೆಯ ಪ್ರಜ್ಞೆಯನ್ನು ಕಂಡುಕೊಂಡೆ. ಅನುರಾಧ ಕುಂಬ್ಳೆ ಈ ಜರ್ನಿಯಲ್ಲಿ ನನ್ನ ಜೊತೆಗಿದ್ದು, ಗೈಡ್ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ. 
 

ಅನುಷಾ ರಂಗನಾಥ್ ಬಿಡಿಸಿದಂತಹ ತಂಜವೂರ್ ಪೈಂಟಿಂಗ್ ನಿಜಕ್ಕೂ ಅದ್ಭುತವಾಗಿದ್ದು, ಈ ಚಿತ್ರದಲ್ಲಿ ಹಲವಾರು ದೇವರುಗಳ ಫೋಟೊಗಳನ್ನು ಚಿತ್ರಿಸಿದ್ದಾರೆ. ಶಿವ-ಪಾರ್ವತಿ, ಗಣೇಶ, ಲಕ್ಷ್ಮೀ ದೇವಿ, ಸರಸ್ವತಿ, ದುರ್ಗಾ ದೇವಿ, ವೆಂಕಟರಮಣನ ಅದ್ಭುತವಾದ ಸ್ವರ್ಣ ಲೇಪಿತವಾದ ವರ್ಣಚಿತ್ರಗಳನ್ನು ಕಾಣಬಹುದು. ಈ ಕಲೆಗೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು ಮೆಚ್ಚುಗೆ ಸೂಚಿಸಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ