ನಮ್ಮನ್ನು ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಅನ್ನೋದು ಮುಖ್ಯ; ಪತಿ ರಾಮ್‌ಕುಮಾರ್‌ ಬಗ್ಗೆ ಅಣ್ಣಾವ್ರ ಮಗಳ ಮಾತು ವೈರಲ್

Published : Jan 08, 2025, 10:25 AM ISTUpdated : Jan 08, 2025, 10:37 AM IST
ನಮ್ಮನ್ನು ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಅನ್ನೋದು ಮುಖ್ಯ; ಪತಿ ರಾಮ್‌ಕುಮಾರ್‌ ಬಗ್ಗೆ ಅಣ್ಣಾವ್ರ ಮಗಳ ಮಾತು ವೈರಲ್

ಸಾರಾಂಶ

ಪೂರ್ಣಿಮಾ ರಾಮ್‌ಕುಮಾರ್, ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಹಂಚಿಕೊಂಡಿದ್ದಾರೆ. ತಂದೆ ಡಾ. ರಾಜ್ ಜೊತೆಗಿನ ಬಾಂಧವ್ಯ, ಮತ್ತು ಪತಿ ರಾಮ್‌ಕುಮಾರ್ ಅವರ ಗುಣಗಳನ್ನು, ತಾಯಿಯಂತಹ ಸ್ವಭಾವವನ್ನು ವಿವರಿಸಿದ್ದಾರೆ. ಡಾ. ರಾಜ್ ಮತ್ತು ಪಾರ್ವತಮ್ಮ ರವರಿಗೂ ರಾಮ್‌ಕುಮಾರ್ ಇಷ್ಟವಾಗಿದ್ದರೆಂದು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ವರನಟ ಡಾ.ರಾಜ್‌ಕುಮಾರ್ ಮತ್ತು ಡಾ. ಪಾರ್ವತಮ್ಮ ರಾಜ್‌ಕುಮಾರ್ ಮುದ್ದಿನ ದ್ವಿತಿಯ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಇದೀಗ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಭಾಗಿಯಾಗಿದ್ದರು. ತಂದೆ ಜೊತೆಗಿನ ಒಡನಾಟ, ದೊಡ್ಡ ಮನೆಯಲ್ಲಿ ಬೆಳೆದ ವಾತಾವರಣ, ಮದುವೆ ನಂತರದ ಜೀವನ ಹೀಗೆ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ. ಇದುವರೆಗೂ ಪತಿ ರಾಮ್‌ಕುಮಾರ್‌ ಬಗ್ಗೆ ಪೂರ್ಣಿಮಾರವರು ಮಾತನಾಡಿರುವುದು ತುಂಬಾನೇ ಕಡಿಮೆ. ರಾಮ್‌ಕುಮಾರ್‌ ವ್ಯಕ್ತಿತ್ವ ಎಂಥದ್ದು ಎಂದು ವಿವರಿಸಿದ್ದಾರೆ.

'ಮೊದಲು ಇಂಪ್ರೆಸ್ ಆಗುವುದು ನಮಗೆ ತೋರಿಸುವ ಪ್ರೀತಿ ನಮ್ಮನ್ನು ಯಾವ ರೀತಿ ಇಟ್ಟಿರುತ್ತಾರೆ ಯಾವ ಜಾಗದಲ್ಲಿ ಇಟ್ಟಿರುತ್ತಾರೆ ಎಂದು. ರಾಜ್‌ಕುಮಾರ್ ಮಗಳು ಅಂದ್ರೆ ಹೇಗೋ ಇರ್ತಾರೆ ಅನ್ನೋ ಯೋಚನೆಗಳು ಇರುತ್ತದೆ ಆದರೆ ನನ್ನನ್ನು ಜೊತೆ ಇದ್ದಾಗ ಎಷ್ಟು ಗ್ರೌಂಡೆಡ್‌ ಅಂತ ತಿಳಿದುಕೊಂಡರು. ಇಡೀ ಮನೆ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದ ಕಾರಣ ನನ್ನ ಮೇಲೆ ಇಷ್ಟ ಆಗಿರಬಹುದು. ರಾಮ್‌ಕುಮಾರ್‌ರವರು ನನ್ನ ತಾಯಿ ತರ. ಅಪ್ಪಾಜಿ ರೀತಿ ಇರುವ ಹುಡುಗ ಬೇಕು ಅಂತ ಅಂದುಕೊಂಡಿದ್ದೆ ಆದರೆ ಅವರು ಸ್ವಲ್ಪ ಅಮ್ಮನ ತರ. ಕೆಲವೊಂದು ವಿಚಾರಗಳಿಗೆ ಅವರದ್ದೇ ಯೋಚನೆಗಳು ಇರುತ್ತದೆ. ಈ ಕೆಲಸ ಈ ರೀತಿ ಆಗಬೇಕು, ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸಬೇಕು...ಇದೆಲ್ಲಾ ನನ್ನ ತಾಯಿ ತರ. ಕೆಲವೊಮ್ಮೆ ನನ್ನನ್ನು ಮಗು ತರ ನೋಡಿಕೊಳ್ಳುತ್ತಾರೆ ನನಗೆ ಏನೂ ಅರ್ಥ ಆಗುವುದಿಲ್ಲ ಎಂದು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಪೂರ್ಣಿಮಾ ಮಾತನಾಡಿದ್ದಾರೆ. 

ಮಲ್ಲೇಶ್ವರಂನ ಪ್ರತಿಷ್ಠಿತ ದೇವಸ್ಥಾನದಲ್ಲಿ ಚಿನ್ನದ ಸರ ಕಳೆದುಕೊಂಡ ವರುಣ್ ಆರಾಧ್ಯ; ವಿಡಿಯೋ ವೈರಲ್

'ತಂದೆ ಮತ್ತು ತಾಯಿ ಇಬ್ಬರಿಗೂ ರಾಮ್‌ಕುಮಾರ್‌ನ ಇಷ್ಟ ಪಟ್ಟರು. ನನ್ನ ತಾಯಿ ಬಳಿ ಅಪ್ಪಾಜಿ ಒಮ್ಮೆ ಹೇಳಿದ್ದರು 'ನಾವೇ ಹುಡುಕಿದ್ದರೂ ಕೂಡ ಇಂತಹ ಹುಡುಗ ಸಿಗುತ್ತಿರಲಿಲ್ಲ' ಅಂತ. ನಾನು ಹೇಗೆ ಅನ್ನೋದು ಅಮ್ಮ ಅಪ್ಪಗೆ ಗೊತ್ತಿತ್ತು, ರಾಮ್‌ಕುಮಾರ್‌ ನನಗೆ ಅಜೆಸ್ಟ್‌ ಮಾಡಿಕೊಳ್ಳುತ್ತಿದ್ದಾರೆ ಅಂತ. ರಾಮ್‌ಕುಮಾರ್‌ಗೆ ತುಂಬಾ ತಾಳ್ಮೆ ಇದೆ' ಎಂದು ಪೂರ್ಣಿಮಾ ಹೇಳಿದ್ದಾರೆ. ಈ ಹಿಂದೆ ಪುತ್ರಿ ಧನ್ಯಾ ರಾಮ್‌ಕುಮಾರ್ ಮತ್ತು ಪುತ್ರಿ ಧಿರೇನ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೂ ತಾತ ಡಾ.ರಾಜ್‌ಕುಮಾರ್, ಅಜ್ಜಿ ಡಾ.ಪಾರ್ವತಮ್ಮ ರಾಜ್‌ಕುಮಾರ್ ಮತ್ತು ತಂದೆ ತಾಯಿ ರಾಮ್‌ಕುಮಾರ್ ಹಾಗೂ ಪೂರ್ಣಿಮಾ ಬಗ್ಗೆ ಮಾತನಾಡಿದ್ದಾರೆ. 

ರಾಮ್‌ಕುಮಾರ್ ಸರ್‌ ತಂದೆ ಪಾತ್ರಕ್ಕಾದರೂ ಕಮ್‌ಬ್ಯಾಕ್ ಮಾಡಲೇಬೇಕು; ನೆಟ್ಟಿಗರಿಂದ ಶುರುವಾಯ್ತು ಡಿಮ್ಯಾಂಡ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ