
ಚೆನ್ನೈ(ಮಾ.17) ಕರ್ನಾಟಕ ಮಾತ್ರವಲ್ಲ ದೇಶವೇ ಕೊಂಡಾಡುವ, ಗೌರವ, ಪ್ರೀತಿಯಿಂದ ಕಾಣುವ ಸ್ಟಾರ್ ಪುನೀತ್ ರಾಜ್‌ಕುಮಾರ್. ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಸರಿಸುಮಾರು 4 ವರ್ಷಗಳಾಗುತ್ತಿದೆ. ಆದರೆ ಅಪ್ಪು ನೆನಪು, ನಗು ಹಾಗೇ ಜೀವಂತವಾಗಿದೆ. ಇಂದು ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟು ಹಬ್ಬ. ಅಪ್ಪು ಕುಟುಂಬಸ್ಥರು ಸಮಾಧಿ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಹುತೇಕ ಎಲ್ಲಾ ನಟ ನಟಿಯರು ಅಪ್ಪು ನೆನೆದಿದ್ದಾರೆ. ಅತ್ತ ಟೀಂ ಇಂಡಿಯಾ ಮಾಜಿ ಕ್ರಿಟಿಗ, ಆರ್‌ಸಿಬಿ ತಂಡದಲ್ಲಿ ಸಂಚಲನ ಸೃಷ್ಟಿಸಿದ ಆಟಗಾರ ದಿನೇಶ್ ಕಾರ್ತಿಕ್ ಕೂಡ ಪುನೀತ್ ರಾಜ್‌ಕುಮಾರ್ ನೆನೆದಿದ್ದಾರೆ. ದಿನೇಶ್ ಕಾರ್ತಿಕ್ ಆಡಿದ ಒಂದೊಂದು ಮಾತುಗಳು ಭಾವುಕರನ್ನಾಗಿ ಮಾಡುತ್ತೆ. ಪ್ರತಿಯೊಬ್ಬರು ಪ್ರೀತಿಸುವ ಏಕೈಕ ಸ್ಟಾರ್ ಅಂದರೆ ಎಂದು ಪುನೀತ್ ರಾಜ್‌ಕುಮಾರ್ ಎಂದಿದ್ದಾರೆ.
ಪುನೀತ್ ರಾಜ್‌ಕುಮಾರ್ ಕುರಿತು ದಿನೇಶ್ ಕಾರ್ತಿಕ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಆರಂಭದಲ್ಲೇ ದಿನೇಶ್ ಕಾರ್ತಿಕ್ ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡಿಗರು ಎಷ್ಟು ಪ್ರೀತಿಸುತ್ತಾರೆ ಅನ್ನೋದನ್ನು ಹೇಳಿದ್ದಾರೆ. ಜೊತೆಗೆ ಪುನೀತ್ ಬಗ್ಗೆ ಜನರಿಗೆ ಇರುವ ಗೌರವ, ಅಭಿಮಾನ, ಅವರ ನೆನಪುಗಳ ಕುರಿತು ಹೇಳಿಕೊಂಡಿದ್ದಾರೆ. ನಾನು ಚೆನ್ನೈನಿಂದ ಬಂದಿದ್ದೇನೆ. ಹೀಗಾಗಿ ಇಲ್ಲಿ ಸಿನಿಮಾಗೆ ಹೆಚ್ಚಿನ ಆದ್ಯತೆಯೂ ಇದೆ. ನಮ್ಮಲ್ಲಿ ಸಿನಿಮಾ ಸ್ಟಾರ್‌ಗಳ ದೊಡ್ಡ ಪಟ್ಟಿಯೇ ಇದೆ. ರಜನಿಕಾಂತ್, ಕಮಲ್ ಹಸನ್, ವಿಜಯ್, ಅಜಿತ್, ಧನುಷ್, ವಿಜಯ್ ಸೇತುಪತಿ ಸೇರಿದಂತೆ ಹಲವರಿದ್ದಾರೆ. ಆದರೆ ಆರ್‌ಸಿಬಿ ತಂಡಕ್ಕೆ 3 ವರ್ಷ ಆಡುವಾಗ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ ಎಂದು ದಿನೇಶ್ ಕಾರ್ತಿಕ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.
ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?
ಆದರೆ ಬೆಂಗಳೂರಿನ ಎಲ್ಲೇ ಹೋದರೂ, ಯಾವುದೇ ರಸ್ತೆ ಸೇರಿದಂತೆ ಎಲ್ಲೇ ಹೋದರು, ಬೆಂಗಳೂರು ನಗರ ಅತೀ ಹೆಚ್ಚು ಇಷ್ಟುಪಡುವ ಒಂದು ಹೆಸರಿದೆ, ಅದು ಡಾ.ಪುನೀತ್ ರಾಜ್‌ಕುಮಾರ್. ಬಹುಬೇಗನೆ ನಮ್ಮನ್ನು ಅಗಲಿದ್ದಾರೆ. ಆದರೆ ಪುನೀತ್ ರಾಜ್‌ಕುಮಾರ್ ನೆನಪು ಎಲ್ಲೆಡೆ ಪಸರಿಸಿದೆ. ಎಲ್ಲೇ ಹೋದರು ಅತೀ ದೊಡ್ಡ ಕಟೌಟ್, ಪೋಸ್ಟರ್ ನೋಡಲು ಸಿಗುತ್ತೆ. ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು ಇಡಲಾಗಿದೆ. ಅದೆಷ್ಟೇ ಶಾಪ್‌ಗಳು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿದೆ. ಇದು ಅಭಿಮಾನಿಗಳು ಅತ್ಯಂತ ಪ್ರೀತಿ ಹಾಗೂ ಅಭಿಮಾನದಿಂದ ಈ ನಟನ ಹೆಸರನ್ನು ಇಟ್ಟಿದ್ದಾರೆ. ಬೆಂಗಳೂರು ನಗರದ ಮೂಲೆ ಮೂಲೆಯಲ್ಲಿ ಪುನೀತ್ ರಾಜ್‌ಕುಮಾರ್ ಲೆಗಸಿ ಈಗಲೂ ಜೀವಂತವಾಗಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಪುನೀತ್ ರಾಜ್‌ಕಮಾರ್ ಜಯಂತಿ ದಿನವಾದ ಇಂದು ನಾನು ಈ ದಿಗ್ಗಜನಿಗೆ ಸಲ್ಯೂಟ್ ಮಾಡುತ್ತೇನೆ. ಪುನೀತ್ ರಾಜ್‌ಕುಮಾರ್ ಸ್ಪೂರ್ತಿದಾಯಕ ಬದುಕು ಈಗಲೂ ಮಾದರಿಯಾಗಿದೆ. ಇದೀಗ ನಾನು ಪುನೀತ್ ರಾಜ್‌ಕುಮಾರ್ ಅವರ ಸ್ಕ್ರೀನ್ ಮೇಲಿನ ಮ್ಯಾಜಿಕ್ ನೋಡಲು ಬಯಸುತ್ತಿದ್ದೇನೆ. ಹೀಗಾಗಿ ಪುನೀತ್ ರಾಜ್‌ಕಮಾರ್ ಅವರ ಯಾವ ಸಿನಿಮಾದಿಂದ ನಾನು ಆರಂಭಿಸಬೇಕು ಅನ್ನೋದು ಕಮೆಂಟ್ ಮಾಡಿ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದಿನೇಶ್ ಕಾರ್ತಿಕ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್‌ಗೆ ಅಪ್ಪು ಅಭಿಮಾನಿಗಳು ಸಿನಿಮಾಗಳ ಹೆಸರನ್ನು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಅಪ್ಪು ಕುರಿತ ಪ್ರೀತಿಯ ಮಾತನಾಡಿದ ದಿನೇಶ್ ಕಾರ್ತಿಕ್‌ಗೆ ಧನ್ಯವಾದ ಹೇಳಿದ್ದಾರೆ. ಹಲವರು ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮಾತುಗಳಿಂದ ಭಾವುಕರಾಗಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.