James 2022: ಪುನೀತ್ ನಟನೆಯ 'ಜೇಮ್ಸ್' ಮತ್ತಷ್ಟು ಅಪ್‌ಡೇಟ್ಸ್

By Kannadaprabha News  |  First Published Mar 2, 2022, 9:55 AM IST

ಪುನೀತ್ ರಾಜ್‌ಕುಮಾರ್ ನಟನೆಯ, ಚೇತನ್ ನಿರ್ದೇಶನದ ‘ಜೇಮ್ಸ್’ ಚಿತ್ರದ ಬಿಡುಗಡೆಗೆ ರಾಜ್ಯದಾದ್ಯಂತ ಕಾತರ ಹೆಚ್ಚಾಗಿದೆ. ಆಯಾಯ ಪ್ರದೇಶಗಳ ಪುನೀತ್ ಅಭಿಮಾನಿಗಳು ಮಾ.17ರಂದು ದೊಡ್ಡ ಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ಸಜ್ಜಾಗಿದ್ದಾರೆ.  


ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ, ಚೇತನ್ ಕುಮಾರ್ (Chetan Kumar) ನಿರ್ದೇಶನದ ‘ಜೇಮ್ಸ್’ (James) ಚಿತ್ರದ ಬಿಡುಗಡೆಗೆ ರಾಜ್ಯದಾದ್ಯಂತ ಕಾತರ ಹೆಚ್ಚಾಗಿದೆ. ಆಯಾಯ ಪ್ರದೇಶಗಳ ಪುನೀತ್ ಅಭಿಮಾನಿಗಳು (Fans) ಮಾ.17ರಂದು ದೊಡ್ಡ ಮಟ್ಟದಲ್ಲಿ ಸಿನಿಮಾ ಸ್ವಾಗತಿಸಲು ಸಜ್ಜಾಗಿದ್ದಾರೆ.  ಮಧ್ಯೆ ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಪಟ್ಟಿ (Theatres List) ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರಮಂದಿರಗಳ ಪಟ್ಟಿ ಕೈಸೇರದ ಹೊರತು ಕಟೌಟ್ ಹಾಕಲು, ಮಿಕ್ಕ ಸಂಭ್ರಮಗಳ ಸಿದ್ಧತೆ ಮಾಡಲು ಸಾಧ್ಯವಿಲ್ಲ. 

ಹೀಗಾಗಿ ಆದಷ್ಟು ಬೇಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಯಾವ ಚಿತ್ರ ಮಂದಿರಗಳಲ್ಲಿ 'ಜೇಮ್ಸ್' ಬಿಡುಗಡೆ ಆಗುತ್ತದೆಂದು ತಿಳಿಸಬೇಕೆಂಬುದು ಅಭಿಮಾನಿಗಳ ಒತ್ತಾಯ. ಸಿನಿಮಾ ಬಿಡುಗಡೆಗೆ ಇನ್ನು ಕೇವಲ ಎರಡು ವಾರ ಮಾತ್ರ ಬಾಕಿ ಇದೆ. ಚಿತ್ರಮಂದಿರಗಳ ಪಟ್ಟಿ ಬಿಡುಗಡೆ ಆಗದೇ ಇರುವುದರಿಂದ ಅಭಿಮಾನಿಗಳಿಗೆ ಯಾವ ಚಿತ್ರಮಂದಿರದಲ್ಲಿ ಸಿನಿಮಾ ಬರಲಿದೆ ಎಂಬ ಐಡಿಯಾ ಸಿಗುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಜೇಮ್ಸ್ ಸಿನಿಮಾ ತಮ್ಮ ಸಮೀಪದ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಯೇ ಆಗುತ್ತದೆ ಎಂಬ ನಂಬಿಕೆಯಿಂದ ಅಭಿಮಾನಿಗಳು ತಯಾರಿ ಶುರು ಮಾಡಿಕೊಂಡಿದ್ದಾರೆ. 

Tap to resize

Latest Videos

undefined

Making of James Movie 2022: ಚಿತ್ರದ ಎಲ್ಲಾ ಫೈಟ್​ ಸೀನ್‌ಗಳು ಅಪ್ಪು ಸರ್ ಮೊಬೈಲ್​ನಲ್ಲಿತ್ತು: ಚೇತನ್‌ಕುಮಾರ್

ಅನ್ನದಾನ, ರಕ್ತದಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಕುರಿತು ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda), ‘ನರ್ತಕಿ (Nartaki Theatre) ಅಥವಾ ಸಂತೋಷ್ (Santhosh Theatre) ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ. ವಾರಾಂತ್ಯಕ್ಕೆ ಫೈನಲ್ ಆಗಲಿದೆ. ಕೆಲವು ಚಿತ್ರಮಂದಿದವರು ಹಿಂದಿನ ರಾತ್ರಿಯೇ ಸಿನಿಮಾ ಬಿಡುಗಡೆಗಾಗಿ ಕೇಳಿಕೊಂಡರು. ರಾತ್ರಿ ಬೇಡ, ಬೆಳಿಗ್ಗೆಯಿಂದ ಶೋ (Morning Show) ಶುರು ಮಾಡೋಣ ಎಂದು ಹೇಳಿದ್ದೇನೆ. ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. ಎಲ್ಲಾ ಕಡೆ ಸಂಭ್ರಮಾಚರಣೆ ನಡೆಯಲಿದೆ’ ಎನ್ನುತ್ತಾರೆ.



ಹೊಸಪೇಟೆಯಲ್ಲಿ ಟ್ರೇಡ್‌ಮಾರ್ಕ್ ಹಾಡು ರಿಲೀಸ್:
‘ಜೇಮ್ಸ್’ ಚಿತ್ರದ ಟ್ರೇಡ್‌ಮಾರ್ಕ್ ಹಾಡು (Trademark Song) ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಸ್ವಾಗತ ದೊರಕಿದೆ. ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯ (Hosapete) ವಾಲ್ಮೀಕಿ ವೃತ್ತದಲ್ಲಿ ಲಿರಿಕಲ್ ಟ್ರೆಂಡ್ ಮಾರ್ಕ್ ವಿಡಿಯೋ ಅದ್ದೂರಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ವಿಡಿಯೋ ವೀಕ್ಷಿಸಿ ಜಯಘೋಷ ಮೊಳಗಿಸಿದರು. ಪರದೆಯ ಮೇಲೆ ಅಪ್ಪು ಅವರನ್ನು ನೋಡಿ ಭಾವುಕರಾದ ಘಟನೆಯೂ ನಡೆಯಿತು. ಕಿಚಿಡಿ ವಿಶ್ವ, ಜೋಗಿ ತಾಯಪ್ಪ ಈ ಕಾರ್ಯಕ್ರಮ ಆಯೋಜಿಸಿದ್ದರು.

'ಇದು ಕೇವಲ ಹಾಡು ಮಾತ್ರವಲ್ಲ ಇಡೀ ಅಭಿಮಾನಿಗಳ ಧ್ವನಿ #PowerStarLoveSon' ಎಂದು ತೋರಿಸುವ ಮೂಲಕ ಹಾಡು ಶುರು ಮಾಡಿದ್ದಾರೆ. 'ಇವರ ಬಗ್ಗೆ ಇಂಟ್ರಡಕ್ಷನ್ ಬೇಕಾ? ಇವರ ಬಗ್ಗೆ ಇನ್ಫಾರ್ಮೇಷನ್ ಬೇಕಾ? ಎಲ್ಲಾ ಹೇಳ್ತೀನಿ ಸೌಂಡ್ ಜಾಸ್ತಿ ಮಾಡೋಲೇ' ಎಂದು ಹಾಡು ಶುರುವಾಗಿದೆ. ಈ ಹಾಡಿನಲ್ಲಿ ಪವರ್ ಸ್ಟಾರ್ ಖದರ್, ಮಾಸ್ ಮತ್ತು ಕ್ಲಾಸಿ ಗುಣಗಳ ಬಗ್ಗೆ ವಿವರಿಸಲಾಗಿದೆ. ಇದೊಂದು ರೀತಿಯ ಪಾಪ್ ಹಾಡಾಗಿದ್ದು ಅಪ್ಪು ನಗು ಮುಖ ಎಲ್ಲರ ಗಮನ ಸೆಳೆದಿದೆ. 

James 2022: ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಹವಾ ಶುರು!

ಭಾನುವಾರದ ಹೊತ್ತಿಗೆ ಥಿಯೇಟರ್ ಲಿಸ್ಟ್ ಫೈನಲ್ ಆಗಲಿದೆ. ಎಲ್ಲಾ ಕಡೆಗಳಲ್ಲೂ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಎಲ್ಲಾ ಕಡೆ ಸಂಭ್ರಮಾಚರಣೆ ಜೋರಾಗಿದೆ.
-ಕಿಶೋರ್ ಪತ್ತಿಕೊಂಡ ಜೇಮ್ಸ್ ನಿರ್ಮಾಪಕರು

ಭಿಮಾನಿಗಳ ಉತ್ಸಾಹ ಜೋರಾಗಿದೆ. ಆದಷ್ಟು ಬೇಗ ಚಿತ್ರಮಂದಿರಗಳ ಲಿಸ್ಟ್  ಬಿಡುಗಡೆಯಾದರೆ ಒಳ್ಳೆಯದು.
-ಕೆ.ವಿ. ಚಂದ್ರಶೇಖರ್, ವಿತರಕರ ಸಂಘದ ಅಧ್ಯ

ನಮ್ಮ ಚಿತ್ರಮಂದಿರದಲ್ಲಿ 54 ಅಡಿ ಎತ್ತರದ ಕಟೌಟ್ ಹಾಕಿಸುತ್ತಿದ್ದೇವೆ.  ಪುನೀತ್ ಸಮಾಧಿಯಿಂದ ಜೆ.ಪಿ.  ನಗರದ ನಮ್ಮ ಚಿತ್ರಮಂದಿರದವರೆಗೆ  ಮೆರವಣಿಗೆ ನಡೆಯಲಿದೆ. 31 ಚಿತ್ರಗಳ ಪೋಸ್ಟರ್‌ಗಳುಳ್ಳ ಹಾಲ್ ಆಫ್ ಫೇಮ್ ಚಿತ್ರಮಂದಿರದ  ಆವರಣದಲ್ಲಿ ಇರುತ್ತದೆ. ಅನ್ನದಾನ ದಿನವಿಡೀ ನಡೆಯಲಿದೆ.
-ರವಿಕುಮಾರ್, ಸಿದ್ದೇಶ್ವರ ಚಿತ್ರಮಂದಿರ ಮಾಲೀಕರು

click me!