James 2022: ಪುನೀತ್ ರಾಜ್‌ಕುಮಾರ್ ಟ್ರೇಡ್‌ಮಾರ್ಕ್‌ ಹಾಡು ಬಿಡುಗಡೆ!

Suvarna News   | Asianet News
Published : Mar 01, 2022, 05:07 PM ISTUpdated : Mar 02, 2022, 09:33 AM IST
James 2022: ಪುನೀತ್ ರಾಜ್‌ಕುಮಾರ್ ಟ್ರೇಡ್‌ಮಾರ್ಕ್‌ ಹಾಡು ಬಿಡುಗಡೆ!

ಸಾರಾಂಶ

 ಪುನೀತ್ ರಾಜ್‌ಕುಮಾರ್ ಜೇಮ್ಸ್‌ ಹಾಡಿನಲ್ಲಿ ಕಾಣಿಸಿಕೊಂಡ ಶ್ರೀಲೀಲಾ, ರಚಿತಾ ರಾಮ್, ಚಂದನ್ ಶೆಟ್ಟಿ ಮತ್ತು ಚರಣ್ ರಾಜ್. ಅಶ್ವಿನಿ ಸ್ಪೆಷಲ್ ಎಂಟ್ರಿ.........

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾದ ಹಾಡು ಇಂದು ಶಿವರಾತ್ರಿ ಹಬ್ಬದಂದು ಬಿಡುಗಡೆಯಾಗಿದೆ. ಟ್ರೇಡ್‌ ಮಾರ್ಟ್ (Trademark) ಲಿರಿಕಲ್ ಹಾಡು ಇದಾಗಿದ್ದು, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಜಲಕ್ ಇಲ್ಲಿ ನೋಡಬಹುದು. ಪುನೀತ್ ಹುಟ್ಟುಹಬ್ಬ ಮಾರ್ಚ್ 17ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಪಿಆರ್‌ಕೆ ಆಡಿಯೋ (PRK Audio) ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿನ ಸಂಗೀತ ನಿರ್ದೇಶನ ಮತ್ತು ಸಂಯೋಜನೆ ಮಾಡಿರುವುದು ಚರಣ್ ರಾಜ್ (Charan Raj). ಲೀಡ್ ಧ್ವನಿಯಲ್ಲಿ ಎಮ್‌ಸಿ ವಿಕ್ಕಿ (MC vikki), ಆದಿತಿ ಸಾಗರ್ (Aditi Sagar), ಚಂದನ್ ಶೆಟ್ಟಿ (Chandan Shetty), ಶರ್ಮಿಳಾ, ಯುವ ರಾಜ್‌ಕುಮಾರ್ (Yuva Rajkumar) ಮತ್ತು ಚರಣ್‌ ಇದ್ದಾರೆ. ಸಂಪೂರ್ಣ ಹಾಡಿನ ಸಾಹಿತ್ಯವನ್ನು ಚೇತನ್ ಕುಮಾರ್ (Chetan Kumar) ಮಾಡಿದ್ದಾರೆ. 

ಟ್ರೇಡ್‌ಮಾರ್ಕ್‌ ಹಾಡಿನ ಆರಂಭದಲ್ಲಿ ಜೇಮ್ಸ್ ಸಿನಿಮಾ ಮುಹೂರ್ತದಲ್ಲಿ ಅಶ್ವಿನಿ (Ashwini Puneeth) ಕ್ಲಾಪ್ ಹೊಡೆದಿರುವ ವಿಡಿಯೋವನ್ನೂ ಸೇರಿಸಲಾಗಿದೆ. ಆನಂತರ ಹಾಡಿನಲ್ಲಿ ರಚಿತಾ ರಾಮ್ (Rachita Ram), ಶ್ರೀಲೀಲಾ (Shreeleela), ಚರಣ್ ರಾಜ್, ಚಂದನ್ ಶೆಟ್ಟಿ, ಯುವ ರಾಜ್‌ಕುಮಾರ್, ಆಶಿಕಾ ರಂಗನಾಥ್ (Ashika Ranganath) ಹೆಜ್ಜೆ ಹಾಕಿದ್ದಾರೆ. ಸಿನಿಮಾ ಚಿತ್ರೀಕರಣ ಸಣ್ಣ ಪುಟ್ಟ ವಿಡಿಯೋ ಕ್ಲಿಪ್‌ಗಳನ್ನು ಸಹ ಸೇರಿಸಲಾಗಿದೆ. ಈ ಮೂಲಕ ಅಪ್ಪು ಸಿನಿಮಾಗೆ ಇಡೀ ಚಿತ್ರರಂಗವೇ ಸಾಥ್ ಕೊಟ್ಟಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 8 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 

Puneeth Rajkumar: ಪುನೀತ್‌ ಹೆಸರಿನಲ್ಲಿ ಉಪಗ್ರಹ, ಆಕಾಶದಲ್ಲಿ ಅಪ್ಪು!

'ಇದು ಕೇವಲ ಹಾಡು ಮಾತ್ರವಲ್ಲ ಇಡೀ ಅಭಿಮಾನಿಗಳ ಧ್ವನಿ #PowerStarLoveSon' ಎಂದು ತೋರಿಸುವ ಮೂಲಕ ಹಾಡು ಶುರು ಮಾಡಿದ್ದಾರೆ. 'ಇವರ ಬಗ್ಗೆ ಇಂಟ್ರಡಕ್ಷನ್ ಬೇಕಾ? ಇವರ ಬಗ್ಗೆ ಇನ್ಫಾರ್ಮೇಷನ್ ಬೇಕಾ? ಎಲ್ಲಾ ಹೇಳ್ತೀನಿ ಸೌಂಡ್ ಜಾಸ್ತಿ ಮಾಡೋಲೇ' ಎಂದು ಹಾಡು ಶುರುವಾಗಿದೆ. ಈ ಹಾಡಿನಲ್ಲಿ ಪವರ್ ಸ್ಟಾರ್ ಖದರ್, ಮಾಸ್ ಮತ್ತು ಕ್ಲಾಸಿ ಗುಣಗಳ ಬಗ್ಗೆ ವಿವರಿಸಲಾಗಿದೆ. ಇದೊಂದು ರೀತಿಯ ಪಾಪ್ ಹಾಡಾಗಿದ್ದು ಅಪ್ಪು ನಗು ಮುಖ ಎಲ್ಲರ ಗಮನ ಸೆಳೆದಿದೆ. 

ಕಿಶೋರ್ ನಿರ್ಮಾಣ ಮಾಡಿರುವ ಜೇಮ್ಸ್ ಸಿನಿಮಾಗೆ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಪ್ಪು ಜೊತೆ ಡಾ.ಶಿವರಾಜ್‌ಕುಮಾರ್ (Shivarajkumar), ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar), ಪ್ರಿಯಾ ಆನಂದ್, ಶರತ್ ಕುಮಾರ್, ಶ್ರೀಕಾಂತ್, ಆದಿತ್ಯ ಮೆನನ್, ಮುಖೇಶ್ ಶಿರಿ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲ, ಚಿಕ್ಕಣ್ಣ, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್, ಕೇತನ್ ಅಭಿನಯಿಸಿದ್ದಾರೆ. ಸ್ಟಂಟ್ ಮಾಸ್ಟರ್ ಆಗಿ ರವಿ ವರ್ಮಾ, ರಾಮ ಲಕ್ಷ್ಮಣ, ಚೇತನ್ ಡಿಝೋಜಾ, ಅರ್ಜುನ್ ಮಾಸ್ಟರ್ ಮತ್ತು ವಿಜಯ್ ಮಾಸ್ಟರ್. 

ಅಭಿಮಾನಿಗಳ ಸಂತೋಷ:
ವಿಜಯನಗರ ಜಿಲ್ಲೆ ಹೊಸಪೇಟೆ ವಾಲ್ಮಿಕಿ ಸರ್ಕಲ್‌ನಲ್ಲಿ ಅಭಿಮಾನಿಗಳಿಂದ  ಜೇಮ್ಸ್ ಡ್ರೇಟ್‌ಮಾರ್ಕ್‌ ಹಾಡು ಬಿಡುಗಡೆ ಮಾಡಲಾಗಿತ್ತು. ವಿಡಿಯೋ ವೀಕ್ಷಿಸಿದ ಅಭಿಮಾನಿಗಳು ಅಪ್ಪುಗೆ ಮತ್ತು ದೊಡ್ಡ ಮನೆಗೆ ಜೈಕಾರ ಹಾಕಿದ್ದಾರೆ, ಕುಣಿದು ಕುಪ್ಪಳಿಸಿದ್ದಾರೆ.  ಪವರ್ ಸಿನಿಮಾ 150 ದಿನ ಯಶಸ್ವಿಯಾಗಲಿ ಎಂದು ಆಶಿಸಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!