Shivaji Surathkal 2 ಚಿತ್ರದಲ್ಲಿ ರಮೇಶ್‌ ಅರವಿಂದ್ ಪುತ್ರಿ ಪಾತ್ರದಲ್ಲಿ ಆರಾಧ್ಯ

Suvarna News   | Asianet News
Published : Mar 02, 2022, 07:42 AM ISTUpdated : Mar 02, 2022, 02:03 PM IST
Shivaji Surathkal 2 ಚಿತ್ರದಲ್ಲಿ ರಮೇಶ್‌ ಅರವಿಂದ್ ಪುತ್ರಿ ಪಾತ್ರದಲ್ಲಿ ಆರಾಧ್ಯ

ಸಾರಾಂಶ

ಆಕಾಶ್‌ ಶ್ರೀವತ್ಸ ನಿರ್ದೇಶನದ ‘ಶಿವಾಜಿ ಸುರತ್ಕಲ್‌ 2: ದಿ ಮಿಸ್ಟೀರಿಯಸ್‌ ಕೇಸ್‌ ಆಫ್‌ ಮಾಯಾವಿ’ ಚಿತ್ರದ ರಮೇಶ್‌ ಅರವಿಂದ್‌ ಹೊಸ ಲುಕ್‌ ರಿವೀಲ್‌ ಮಾಡುವ ವಿಶೇಷ ಪೋಸ್ಟರ್‌ ಮಹಾಶಿವರಾತ್ರಿ ಹಬ್ಬಕ್ಕೆ ರಿಲೀಸ್‌ ಆಗಿದೆ.

ಆಕಾಶ್‌ ಶ್ರೀವತ್ಸ (Akash Srivatsa) ನಿರ್ದೇಶನದ ‘ಶಿವಾಜಿ ಸುರತ್ಕಲ್‌ 2: ದಿ ಮಿಸ್ಟೀರಿಯಸ್‌ ಕೇಸ್‌ ಆಫ್‌ ಮಾಯಾವಿ’ (Shivaji Surathkal 2) ಚಿತ್ರದ ರಮೇಶ್‌ ಅರವಿಂದ್‌ (Ramesh Aravind) ಹೊಸ ಲುಕ್‌ ರಿವೀಲ್‌ ಮಾಡುವ ವಿಶೇಷ ಪೋಸ್ಟರ್‌ (Special Poster) ಮಹಾಶಿವರಾತ್ರಿ (Mahashivratri) ಹಬ್ಬಕ್ಕೆ ರಿಲೀಸ್‌ ಆಗಿದೆ. ಇದರ ಜೊತೆಗೆ ಶಿವಾಜಿ ಪುತ್ರಿಯ ಸಿರಿ ಸುರತ್ಕಲ್‌ ಪಾತ್ರದ ಲುಕ್‌ ರಿವೀಲ್‌ ಮಾಡಿದೆ. ಏಳು ವರ್ಷದ ಬಾಲ ನಟಿ ಆರಾಧ್ಯಾ (Aradhya) ಚಿತ್ರದಲ್ಲಿ ರಮೇಶ್‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಆಕಾಶ್‌ ಶ್ರೀವತ್ಸ, ‘ಶಿವಾಜಿ ಸುರತ್ಕಲ್‌ನ ಮೊದಲ ಭಾಗದಲ್ಲಿ ಇಲ್ಲದ ಕತೆ ಶಿವಾಜಿ ಅವರ ಮಗಳದ್ದು. ಈ ಭಾಗದ ಕತೆಯ ಮುಖ್ಯ ಎಳೆಯಾಗಿ ಈ ಅಪ್ಪ ಮಗಳ ಪಾತ್ರ ಬರುತ್ತದೆ.  ಈಗಾಗಲೇ ಈ ಇಬ್ಬರ ಕಾಂಬಿನೇಶನ್‌ ಹಾಡಿನ ಚಿತ್ರೀಕರಣವೂ ನಡೆದಿದೆ. ರಮೇಶ್‌ ಅರವಿಂದ್‌ ಹಾಗೂ ಆರಾಧ್ಯಾ ಲವಲವಿಕೆಯಿಂದ ನಟಿಸಿದ್ದಾರೆ. ಈ ಚಿತ್ರದಲ್ಲಿ ಜಿ ವಿ ಅಯ್ಯರ್‌ ಅವರ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿದ್ದ ಮಧು ಅಂಬಟ್‌ ಪುತ್ರ ದರ್ಶನ್‌ ಅಂಬಟ್‌ ಡಿಓಪಿ ಆಗಿದ್ದಾರೆ. ಯಲ್ಲಾಪುರದ ಕಾಡು, ಸಾತೊಡ್ಡಿ ಜಲಪಾತಗಳಲ್ಲೆಲ್ಲ ಡ್ರೋನ್‌ ಮೂಲಕ ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಸುರತ್ಕಲ್‌, ಕಾಪು, ಮಲ್ಪೆ, ಮುರುಡೇಶ್ವರ, ಹೊನ್ನಾವರ, ಮರವಂತೆಗಳಲ್ಲಿ ಮುಖ್ಯ ಭಾಗದ ಚಿತ್ರೀಕರಣ ನಡೆದಿದೆ’ ಎನ್ನುತ್ತಾರೆ.



ಸೃಷ್ಟಿಶೆಟ್ಟಿ, ಮಧುರ ಗೌಡ ಎಂಬಿಬ್ಬರು ಹೊಸ ನಟಿಯರು ಈ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಕುಲ್‌ ಅಭಯಂಕರ್‌ ಸಂಗೀತವಿದೆ. ಈಗಾಗಲೇ 21 ದಿನಗಳ ಶೂಟಿಂಗ್‌ ಮುಗಿದಿದ್ದು, ಇನ್ನೂ 30 ದಿನಗಳ ಶೂಟ್‌ ಬೆಂಗಳೂರಿನಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ಹಿರಿಯ ದಕ್ಷಿಣ ಭಾರತೀಯ ನಟ ಎಂ ನಾಸರ್‌ (Nasser M) ಅವರ ಎಂಟ್ರಿಯಾಗಿದೆ. ಅವರು ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ತಂದೆ, ನಿವೃತ್ತ ಐಜಿ ವಿಜಯೇಂದ್ರ ಸುರತ್ಕಲ್‌ ಪಾತ್ರ ನಿರ್ವಹಿಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಆಕಾಶ್‌ ಶ್ರೀವತ್ಸ ‘ರಮೇಶ್‌ ಅರವಿಂದ್‌ ಹಾಗೂ ನಾಸರ್‌ ಇಬ್ಬರೂ ಹಿರಿಯ ನಿರ್ದೇಶಕ ಕೆ ಬಾಲಚಂದರ್‌ (K.Balachander) ಗರಡಿಯಲ್ಲಿ ಬೆಳೆದವರು. 

Ramesh Aravind: ಯಲ್ಲಾಪುರದಲ್ಲಿ ಶಿವಾಜಿಯ ಚಾರಣ: ಹೊಸ ಫೋಟೋ ಹಂಚಿಕೊಂಡ ರಮೇಶ್

ಕಳೆದ 25 ವರ್ಷಗಳಿಂದ ಸ್ನೇಹಿತರು. ಅವರಿಬ್ಬರೂ ಮೊದಲ ಬಾರಿ ಈ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ನಾಸರ್‌ ಅವರ ಪಾತ್ರ ‘ಶಿವಾಜಿ ಸುರತ್ಕಲ್‌ 1’ನಲ್ಲಿ ಇರಲಿಲ್ಲ. ಜೊತೆಗೆ ಅಲ್ಲಿ ಗಂಡ ಹೆಂಡತಿಯ ಸಮಸ್ಯೆ ಮುಖ್ಯವಾಗಿತ್ತು. ಆದರೆ ಇಲ್ಲಿ ಪರಸ್ಪರ ಮಾತು ಬಿಟ್ಟಿರುವ ತಂದೆ ಮಗನ ವಿಚಾರ ಮುಖ್ಯವಾಗಲಿದೆ. ಈ ಭಾಗದ ಕಥೆ ನೈಜ ಜೀವನಕ್ಕೆ ಹತ್ತಿರವಾಗಿದೆ. ಮೂರು ಲುಕ್‌ಗಳಲ್ಲಿ ನಾಸರ್‌ ಅವರು ಕಾಣಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.  'ಶಿವಾಜಿ ಸುರತ್ಕಲ್ 2' ಚಿತ್ರದಲ್ಲೂ ರಮೇಶ್‌ ಅರವಿಂದ್‌ ಅವರೊಂದಿಗೆ ರಾಧಿಕಾ ನಾರಾಯಣ್‌ (Radhika Narayan), ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಮೊದಲ ಪಾರ್ಟ್​ನಲ್ಲಿ ಇದ್ದ ಕಲಾವಿದರೇ ಈ ಚಿತ್ರತಂಡದಲ್ಲಿದೆ. 

ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ಗಾಂವ್ಕರ್ (Meghana Gaonkar)​ ನಿಭಾಯಿಸಲಿದ್ದು, ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೂ 'ಮಗಳು ಜಾನಕಿ' ಧಾರಾವಾಹಿ ನಟ ರಾಕೇಶ್ ಮಯ್ಯ (Rakesh Mayya) ಟ್ರೇನಿಂಗ್ ಮುಗಿಸಿ ಕೆಲಸಕ್ಕೆ ಸೇರಿರುವ ಪೋಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್‌ಗಳಿದ್ದು ಚಿತ್ರದುದ್ದಕ್ಕೂ ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ. ಈ ಚಿತ್ರದಲ್ಲಿ ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಾಯಕ ಜೋಷಿ (Vinayak Joshi) ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. 

'ಶಿವಾಜಿ ಸುರತ್ಕಲ್‌'ಗೆ ಕಾಪ್ ಆಗಿ ಎಂಟ್ರಿ ಕೊಟ್ಟ ಮೇಘನಾ

ಇವರ ಪಾತ್ರ ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆಯಂತೆ. ನಕುಲ್ ಭಯಂಕರ್ (Nakul Bhayankar) ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಈ ಹಿಂದೆ 'ಕನ್ನಡ್ ಗೊತ್ತಿಲ್ಲ' , 'ಲವ್ ಮಾಕ್ಟೇಲ್ 2' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. 'ಶಿವಾಜಿ ಸುರತ್ಕಲ್' ಮೊದಲ ಪಾರ್ಟ್​ಗೆ 'ದಿ ಕೇಸ್​ ಆಫ್​ ರಣಗಿರಿ ರಹಸ್ಯ' (The Case of Ranagiri Rahasya) ಎಂಬ ಟ್ಯಾಗ್​ಲೈನ್​ ಇತ್ತು. ಈಗ ಎರಡನೇ ಪಾರ್ಟ್​ಗೆ 'ದಿ ಮಿಸ್ಟೀರಿಯಸ್​ ಕೇಸ್​ ಆಫ್​ ಮಾಯಾವಿ' (The Mysterious Case of Mayavi) ಎಂಬ ಟ್ಯಾಗ್​ಲೈನ್​ ಇದೆ. ಹಲವು ಗೆಟಪ್​ಗಳಲ್ಲಿ ರಮೇಶ್​ ಅರವಿಂದ್​ ಕಾಣಿಸಿಕೊಳ್ಳಲಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep