
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ತಿಂಗಳುಗಳು ಕಳೆದರೂ ಅವರ ನೆನಪು ಅಭಿಮಾನಗಳ ಮನದಲ್ಲಿ ಕಡಿಮೆಯಾಗುತ್ತಿಲ್ಲ. ಅಪ್ಪು ನಿಧನದ ಸುದ್ದಿಯನ್ನು ಇಂದಿಗೂ ಯಾರೂ ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅವರನ್ನು ನೋಡಲು ಇಂದಿಗೂ ಸಮಾಧಿ ಬಳಿ ಪ್ರತಿ ದಿನ ಸಾವಿರ ಸಾವಿರ ಮಂದಿ ಬರುತ್ತಲೇ ಇದ್ದಾರೆ. ಈ ನಡುವೆ ಅಪ್ಪು ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಕೊನೆಯ ಚಿತ್ರ 'ಜೇಮ್ಸ್' (James). ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿರುವ ನಡುವೆಯೆ ಪುನೀತ್ ನಿಧನ ಬೇಸರ ತರಿಸಿತ್ತು. ಇದೀಗ 'ಜೇಮ್ಸ್' ಸಿನಿಮಾದ ಶೂಟಿಂಗ್ ಸಂಪೂರ್ಣ ಮುಗಿದಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ.
ಹೌದು! ಖಾಸಗಿ ರೆಸಾರ್ಟ್‌ವೊಂದರಲ್ಲಿ 'ಜೇಮ್ಸ್' ಸಿನಿಮಾದ ಶೂಟಿಂಗ್ ನಡೆದಿದೆ. ಕೊನೆಯ ದಿನದ ಶೂಟಿಂಗ್ ಸೆಟ್‌ನಲ್ಲಿ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕೂಡ ಇದ್ದರು. ರಾಘಣ್ಣ ಪುತ್ರ ಯುವ ರಾಜ್‌ಕುಮಾರ್, ರಾಮ್‌ಕುಮಾರ್ ಪುತ್ರ ಧೀರೇನ್ ಹಾಗೂ ಡಾ. ರಾಜ್ ಕುಟುಂಬದ ಕೆಲ ಆಪ್ತರು ಕೊನೆಯ ದಿನದ ಶೂಟಿಂಗ್ ಸೆಟ್‌ನಲ್ಲಿ ಇದ್ದರು. ಮುಖ್ಯವಾಗಿ ಅಪ್ಪು ವಾಯ್ಸ್ ಡಬ್ಬಿಂಗ್ (Dubbing) ಮಾತ್ರ ಬಾಕಿ ಉಳಿದಿದೆ. ಶೂಟಿಂಗ್ ಸಮಯದಲ್ಲಿ ಅಪ್ಪು ಮಾತನಾಡಿರುವ ಧ್ವನಿಯನ್ನೇ ಇಟ್ಟುಕೊಂಡು ಸಿನಿಮಾದಲ್ಲಿ ಬಳಸಿಕೊಳ್ಳಲು ನಿರ್ದೇಶಕ ಚೇತನ್ ಕುಮಾರ್ (Chetan Kumar) ಪ್ಲಾನ್ ಮಾಡಿದ್ದಾರೆ. ಒಂದು ವೇಳೆ ಈ ಪ್ಲಾನ್ ವರ್ಕೌಟ್ ಆಗದೇ ಇದ್ದರೆ ಸಹೋದರ ಮತ್ತು ನಟ ಡಾ. ಶಿವಣ್ಣ (Shivarajkumar) ಅವರಿಂದ ಅಪ್ಪುಗೆ ಕಂಠದಾನ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ. ಈ ವಿಚಾರಗಳು ತುಂಬಾ ದಿನಗಳಿಂದ ಅಭಿಮಾನಿಗಳಿಗೆ ಗೊಂದಲಗಳಾಗೇ ಉಳಿದಿದೆ.
Puneeth Rajkumar: ಜೇಮ್ಸ್ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್
ಈ ನಡುವೆ 'ಜೇಮ್ಸ್' ಚಿತ್ರದ ಬಗ್ಗೆ ಮತ್ತೊಂದು ಸುದ್ದಿಯೊಂದು ವೈರಲ್ ಆಗ್ತಿದೆ. ಬಹಳ ವರ್ಷಗಳಿಂದಲೂ ಡಾ.ರಾಜ್‌ಕುಮಾರ್ ಮಕ್ಕಳಾದ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಮೂರು ಜನ ಸೇರಿ ಸಿನಿಮಾ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ ಈ ಆಸೆ ಈಡೇರುವ ಮುನ್ನವೇ ಪುನೀತ್ ನಮ್ಮನ್ನೆಲ್ಲ ಅಗಲಿ ಇಹಲೋಕ ತ್ಯಜಿಸಿದರು. ಇದೀಗ ಈ ಆಸೆಗೆ ಮತ್ತೆ ಜೀವ ಬಂದಿದ್ದು, 'ಜೇಮ್ಸ್' ಚಿತ್ರದಲ್ಲಿ ಅಪ್ಪು ಜೊತೆ ರಾಘಣ್ಣ ಮತ್ತು ಶಿವಣ್ಣ ಇಬ್ಬರೂ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದಲ್ಲಿ, ಅಭಿಮಾನಿಗಳ ಆಸೆ ಜೊತೆಗೆ ಶಿವಣ್ಣ ಮತ್ತು ರಾಘಣ್ಣ ಅವರ ಆಸೆ ಕೂಡ ಈಡೇರಲಿದೆ.
'ಜೇಮ್ಸ್' ಸಿನಿಮಾ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದ್ದು, ಅಪ್ಪು ಹುಟ್ಟುಹಬ್ಬದಂದು ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ. ಮಾತ್ರವಲ್ಲದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್‌ನ್ನು(Poster) ರಿಲೀಸ್ ಮಾಡಿತ್ತು. ಇದರಲ್ಲಿ ಪುನೀತ್ ಬೈಕ್ ಮೇಲೆ ಆಸೀನರಾಗಿ ಟಾಪ್ ಟು ಬಾಟಂ ಬ್ಲಾಕ್ ಔಟ್‌ಫಿಟ್‌ನಲ್ಲಿ ಮಸ್ತ್ ಲುಕ್ ನೀಡಿದ್ದರು. ನಿರ್ದೇಶಕ ಚೇತನ್ 'ಜೇಮ್ಸ್' ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಪುನೀತ್ ವಿಶೇಷ ಸ್ಟಂಟ್ಸ್, ಹೈವೋಲ್ಟೇಜ್ ಆ್ಯಕ್ಷನ್ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Puneeth Rajkumar: ಅಪ್ಪು ಇಲ್ಲದೆ 'ಜೇಮ್ಸ್' ಸಿನಿಮಾದ ಶೂಟಿಂಗ್ ಮತ್ತೆ ಆರಂಭ
ಇನ್ನು ಅಪ್ಪು ಸರ್ ನೆನಪುಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಅವರ ಕೊನೆಯ ಸಿನಿಮಾವನ್ನು ನಾನು ನಿರ್ದೇಶನ ಮಾಡುವಂತಾಯಿತು. ಸದ್ಯಕ್ಕೆ ಚಿತ್ರದ ಡಿಐ ಕೆಲಸಗಳು ನಡೆಯುತ್ತಿದ್ದು, ಪ್ರತಿದಿನವೂ ಅವರ ನಟನೆಯ ಫುಟೇಜ್‌ಗಳನ್ನು ನೋಡುತ್ತಿರುತ್ತೇನೆ. ಅದನ್ನು ನೋಡುತ್ತಾ, ನೋಡುತ್ತಾ ನನ್ನ ಕಣ್ಣುಗಳಲ್ಲಿ ನೀರು ಬರುತ್ತದೆ. ಅವರಿಗೆ ಅಂತಹ ಶಕ್ತಿ ಇದೆ. ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ ಅವರನ್ನು ತೆರೆಯ ಮೇಲೆ ನೋಡಿದ ತಕ್ಷಣ ಭಾವುಕನಾಗುತ್ತೇನೆ. ಕೆಲವು ದೃಶ್ಯಗಳಲ್ಲಂತೂ ಅವರು ನಿಜಕ್ಕೂ ಅದ್ಭುತವಾಗಿ ನಟಿಸಿದ್ದಾರೆ ಎಂದು ಚೇತನ್ ಕುಮಾರ್ ಇತ್ತೀಚೆಗಷ್ಟೇ ತಿಳಿಸಿದ್ದರು. 'ಜೇಮ್ಸ್'ನಲ್ಲಿ ನಾಯಕಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.