ಗೌರಿ ಲಂಕೇಶ್ ಹತ್ಯೆಯ ಮಾದರಿಯಲ್ಲೇ ಇಲ್ಲೂ ನ್ಯೂಸ್ ಚಾನೆಲ್ ಮುಖ್ಯಸ್ಥೆ ಜಾನಕಿ ಗೌಡ ಹತ್ಯೆಯ ಸಂಚು ನಡೆಯುತ್ತೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ತೆರೆದುಕೊಳ್ಳುತ್ತೆ. ಒಬ್ಬ ಶ್ರೀಮಂತ ವ್ಯಾಪಾರಿ, ಆತನ ಮಗಳ ಜೊತೆಗೆ ಲವ್ವಲ್ಲಿ ಬೀಳೋ ಹೀರೋ ಮೊದಲರ್ಧದ ಕತೆಯನ್ನು ಆವರಿಸಿದರೆ, ಸೆಕೆಂಡ್ ಹಾಫ್‌ನ ಬಹುಭಾಗ ಹೊಡೆದಾಟಕ್ಕೆ ಮೀಸಲು.
ಪ್ರಿಯಾ ಕೆರ್ವಾಶೆ
‘ಗೌಡ ಅಂದ್ರೆ ಲಿಟಿಗೇಶನ್, ಗೌಡ್ರೇ ಅಂದ್ರೆ ರಿಲೇಶನ್’ - ಚಿತ್ರದ ಹೀರೋ ಅರ್ಜುನ್ ಗೌಡ (Arjun Gowda) ಹೀಗೆ ಡೈಲಾಗ್ ಮೇಲೆ ಡೈಲಾಗ್ ಹೊಡೀತಿದ್ರೆ ಕೈ ಯಾಂತ್ರಿಕವಾಗಿ ಕೈ ಶಿಳ್ಳೆ ಹೊಡಿಯೋಕೆ ರೆಡಿಯಾಗುತ್ತೆ. ಹೀರೋನ ಕಾರು ಗೋಡೆಯ ಇಟ್ಟಿಗೆ ಹಾರಿಸಿ ಧೂಳೆಬ್ಬಿಸುತ್ತಾ ವಿಲನ್‌ಗಳ ಅಡ್ಡಾದೊಳಗೆ ನುಗ್ಗುತ್ತಿದ್ದರೆ ಸಿನಿಮಾ ನೋಡುವವ ಆಟೋಮ್ಯಾಟಿಕ್ ಆಗಿ ಕುರ್ಚಿಯ ತುದಿಗೆ ಬಂದು ಕೂರುತ್ತಾನೆ. ಭಾವೀ ಮಾವನೇ ವಿಲನ್ನು, ಮಾವನ ಮಗಳೇ ಹೀರೋಯಿನ್ನು.
Arjun Gowda: ರಾಮು ನಿರ್ಮಾಣದ ಕೊನೆ ಚಿತ್ರಕ್ಕೆ ಸ್ಟಾರ್ ಸಪೋರ್ಟ್
ಈ ಡೀಟೈಲ್‌ನಲ್ಲೇ ಕತೆಯ ಹಿಂಟ್ ಪತ್ತೆ ಹಚ್ಚಿದರೆ ನಿಮ್ಮನ್ನು ಜಾಣರೆಂದು ಕರೆಯದೇ ವಿಧಿಯಿಲ್ಲ. ಗೌರಿ ಲಂಕೇಶ್ ಹತ್ಯೆಯ ಮಾದರಿಯಲ್ಲೇ ಇಲ್ಲೂ ನ್ಯೂಸ್ ಚಾನೆಲ್ ಮುಖ್ಯಸ್ಥೆ ಜಾನಕಿ ಗೌಡ ಹತ್ಯೆಯ ಸಂಚು ನಡೆಯುತ್ತೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಕಥೆ ತೆರೆದುಕೊಳ್ಳುತ್ತೆ. ಒಬ್ಬ ಶ್ರೀಮಂತ ವ್ಯಾಪಾರಿ, ಆತನ ಮಗಳ ಜೊತೆಗೆ ಲವ್ವಲ್ಲಿ ಬೀಳೋ ಹೀರೋ ಮೊದಲರ್ಧದ ಕತೆಯನ್ನು ಆವರಿಸಿದರೆ, ಸೆಕೆಂಡ್ ಹಾಫ್‌ನ ಬಹುಭಾಗ ಹೊಡೆದಾಟಕ್ಕೆ ಮೀಸಲು.
ಚಿತ್ರ: ಅರ್ಜುನ ಗೌಡ
ತಾರಾಗಣ: ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್, ರಾಹುಲ್ ದೇವ್, ದೀಪಕ್ ಶೆಟ್ಟಿ, ಸಾಧು ಕೋಕಿಲ
ನಿರ್ದೇಶನ: ಶಂಕರ್
ನಿರ್ಮಾಣ: ರಾಮು
ನೇಟಿವಿಟಿಯ ಟಚ್ ಕೊಡಲು ಮಂಗಳೂರು ಕನ್ನಡವನ್ನೂ, ಯಕ್ಷಗಾನ ವೇಷವನ್ನೂ ಸಾಂದರ್ಭಿಕವಾಗಿ ತರಲಾಗಿದೆ. ಎಲ್ಲಿಂದಲೋ ಓಪನ್ ಆಗುವ ಮುಖ್ಯ ಕತೆ, ಮತ್ತೆಲ್ಲೋ ಅದರ ಜೊತೆ ಸೇರಿಕೊಳ್ಳುವ ಫ್ಯಾಶ್‌ಬ್ಯಾಕ್, ಇನ್ನೊಂದು ಕಡೆ ಟೆಸ್ಟ್ ಡ್ರೈವ್ ನೆವದಲ್ಲಿ ಲಕ್ಸುರಿ ಕಾರ್‌ನಲ್ಲಿ ಎಡೆಬಿಡಂಗಿಗಳನ್ನಿಟ್ಟು ಸುತ್ತುವ ಸಾಧು ಕೋಕಿಲ (Sadhu Kokila), ಮಗದೊಂದು ಕಡೆ ಅರೆಬರೆ ತುಳು ಮಾತಾಡುವ ಬೊಲೆಂಜರ್ ಬಾಬು, ವಿಲನ್ ಶೆಟ್ಟಿ, ಮತ್ತೆಲ್ಲಿಂದಲೋ ಭೋರ್ಗರೆಯುವ ಹಿನ್ನೆಲೆ ಸಂಗೀತ.. ಇವೆಲ್ಲದರ ನಡುವೆ ಕಂಗಾಲಾಗುವ ಪ್ರೇಕ್ಷಕ ಕೊಂಚ ರಿಲೀಫು ಪಡೆದು ಮುಗುಳ್ನಗುವುದು ಸಿನಿಮಾದ ಕೊನೆಯಲ್ಲೇ.
Arjun Gowda: ಪ್ರಿಯಾಂಕ ತಿಮ್ಮೇಶ್ 'ಕನವರಿಕೆ'ಯಲ್ಲಿ ಏಕಾಂಗಿಯಾದ ಪ್ರಜ್ವಲ್ ದೇವರಾಜ್
ಹೀಗೆ ಮನಸ್ಸಿಗೆ ಒಂದೊಳ್ಳೆ ಎಕ್ಸರ್‌ಸೈಸ್ ಕೊಟ್ಟು ಕೊನೆಗೂ ನಿರಾಳತೆ ತರಿಸುತ್ತೆ ಅರ್ಜುನ್ ಗೌಡ. ಮಂಗಳೂರಿನ ಹಗಲು ಹಾಗೂ ಇರುಳುಗಳನ್ನು ಸಿನಿಮಾಟೋಗ್ರಾಫರ್ ಜೈ ಆನಂದ್ ಆಕಾಶದಿಂದಲೇ ಪದೇ ಪದೇ ಕಾಣಿಸಿ ಸಂತೋಷ ಪಡಿಸುತ್ತಾರೆ. ಹಾಡುಗಳು ನಿದ್ದೆಯಿಂದ ಬಡಿದೆಬ್ಬಿಸುವಂತಿವೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಪ್ರಜ್ವಲ್ (Prajwal Devaraj) ಮಾಡಿದ್ದಾರೆ. ಪ್ರಿಯಾಂಕಾ (Priyanka Thimmesh) ನಟನೆ ಕೊಂಚ ಮಾಗಬೇಕಿದೆ. ವಿಲನ್‌ಗಳದು ಉತ್ತಮ ಅಭಿನಯ. ನಿರ್ದೇಶಕರಿಗೆ ಕತೆ ಹೇಳುವಲ್ಲಿ ಕೊಂಚ ಸ್ಪಷ್ಟತೆ, ಕ್ರಮಬದ್ಧತೆ, ಹಿಡಿತ ಇದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಕೊನೆಯಲ್ಲಿ ಎದ್ದುಬರುವ ಪ್ರೇಕ್ಷಕನ ಅಭಿಪ್ರಾಯ.