2ನೇ ಬಾರಿ ಕಾಂತಾರ ವೀಕ್ಷಿಸಿ ಪ್ರಭಾಸ್; ಎಲ್ಲರೂ ನೋಡಲೇ ಬೇಕಾದ ಸಿನಿಮಾ ಎಂದ 'ಸಲಾರ್' ಸ್ಟಾರ್

By Shruiti G Krishna  |  First Published Oct 15, 2022, 2:36 PM IST

ತೆಲುಗು ಸ್ಟಾರ್ ಪ್ರಭಾಸ್ 2ನೇ ಬಾರಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಈ ಬಗ್ಗೆ ಪ್ರಭಾಸ್ ಮತ್ತೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.  


ಎಲ್ಲಿ ನೋಡಿದ್ರೂ ಕಾಂತಾರ ಸಿನಿಮಾದ್ದೇ ಹವಾ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಕಾಂತಾರ ಸಿನಿಮಾದೇ ಸದ್ದು. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಸೆಲೆಬ್ರಿಟಿಗಳು ಸಹ ಕಾಂತಾರ ಸಿನಿಮಾಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತೆಲುಗು ಸ್ಟಾರ್ ನಾನಿ, ರಾಣಾ ದಗ್ಗುಬಾಟಿ, ಮಲಯಾಳಂ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಧನುಷ್, ಕಾರ್ತಿ ಸೇರಿದಂತೆ ಸೇರಿದಂತೆ ಅನೇಕರು ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ವಿಶೇಷ ಎಂದರೆ ತೆಲುಗು ಸ್ಟಾರ್ ಪ್ರಭಾಸ್ ಎರಡು ಬಾರಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಕಾಂತಾರ ರಿಲೀಸ್ ಆಗುತ್ತಿದ್ದಂತೆ ವೀಕ್ಷಿಸಿ ವಿಮರ್ಶೆ ಮಾಡಿದ್ದ ಪ್ರಭಾಸ್ ಇದಾಗ ತೆಲುಗು ಭಾಷೆಯಲ್ಲಿ ಕಾಂತಾರ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.  

2ನೇ ಬಾರಿ ಕಾಂತಾರ ವೀಕ್ಷಿಸಿದ ಬಗ್ಗೆ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ಪ್ರಭಾಸ್ ಮೊದಲು ಕನ್ನಡದಲ್ಲೇ ಸಿನಿಮಾ ನೋಡಿದ್ದರು. ಇದೀಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದ್ದಂತೆ ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗಿದೆ. ಇದೀಗ ತೆಲುಗಿನಲ್ಲಿ ರಿಲೀಸ್ ಆಗಿರುವ ಕಾಂತಾರ ಸಿನಿಮಾವನ್ನು ಪ್ರಭಾಸ್ ಮತ್ತೊಮ್ಮೆ ವೀಕ್ಷಿಸಿ  ಅದ್ಭುತವಾದ ಅನುಭವ ಎಂದಿದ್ದಾರೆ. 

Tap to resize

Latest Videos

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಭಾಸ್, 'ಕಾಂತಾರ ಎರಡನೇ ಬಾರಿ ವೀಕ್ಷಿಸಿದೆ. ಎಂತಹ ಅಸಾಧಾರಣ ಅನುಭವ. ಅದ್ಭುತವಾದ ಕಾನ್ಸೆಪ್ಟ್ ಮತ್ತು ಕ್ಲೈಮ್ಯಾಕ್ಸ್ ಥ್ರಿಲ್ಲಿಂಗ್ ಆಗಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡಲೇ ಬೇಕಾದ ಸಿನಿಮಾವಾಗಿದೆ' ಎಂದು ಹೇಳಿದ್ದಾರೆ. 

ಈ ಮೊದಲು ಕಾಂತಾರ ವೀಕ್ಷಿಸಿದ್ದ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದರು. 'ಕಾಂತಾರ ಸಿನಿಮಾವನ್ನ ನಾನು ತುಂಬಾ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತ. ಇಡೀ ತಂಡಕ್ಕೆ ನನ್ನ ಅಭಿನಂದನೆ, ಒಳ್ಳೆಯದಾಗಲಿ' ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಸಿನಿಮಾ ನೋಡಿ ಹಾಡಿಹೊಗಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Prabhas (@actorprabhas)


ಯಶ್ 'KGF-2' ಹಿಂದಿಕ್ಕಿದ ರಿಷಬ್ 'ಕಾಂತಾರ'; ಅತೀ ಹೆಚ್ಚು ರೇಟಿಂಗ್ ಪಡೆದ ಭಾರತದ ಚಿತ್ರ

ಕಾಂತಾರ ನೋಡಿ ರಿಷಬ್ ತಬ್ಬಿಕೊಂಡ ಕಾರ್ತಿ

ಕಾಂತಾರ ಚಿತ್ರವನ್ನು ವೀಕ್ಷಿಸಿದ ನಟ ಕಾರ್ತಿ ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಇತ್ತೀಚಿಗಷ್ಟೆ ತಮಿಳು ನಟ ಕಾರ್ತಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ಭೇಟಿಯಾಗಿದ್ದರು. ನಟ ಕಾರ್ತಿ ಕಾಂತಾರ ಅದ್ಭತವಾದ ಸಿನಿಮಾ, ತುಂಬಾ ಚೆನ್ನಾಗಿದೆ ಎಂದು ತಮಿಳಿನಲ್ಲೇ ಹೇಳಿದರು. ಕೈಯಲ್ಲಾ ತುಂಬಾ ನಡುಗುತ್ತಿತ್ತು ಎಂದು ಕಾರ್ತಿ ಹೇಳಿದರು. ಇನ್ನು ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಕಾರ್ತಿಗೆ ಕನ್ನಡದಲ್ಲೇ ವಿವರಿಸಿದರು.  

ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್

ಕಾಂತಾರ ಹೊಗಳಿದ ಧನುಷ್ 

ಕಾಂತಾರ ಸಿನಿಮಾ ನೋಡಿ ತಮಿಳು ನಟ ಧನುಷ್ ಹಾಡಿಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, 'ಕಾಂತಾರ ಮೈಂಡ್ ಬ್ಲೋಯಿಂಗ್. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲ್ಮ್‌ಗೆ ಅಭಿನಂದನೆಗಳು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ದೊಡ್ಡ ಹಗ್. ದೇವರು ಒಳ್ಳೆದು ಮಾಡಲಿ' ಎಂದು ಹೇಳಿದರು. 

   

click me!