ಯಶ್ 'KGF-2' ಹಿಂದಿಕ್ಕಿದ ರಿಷಬ್ 'ಕಾಂತಾರ'; ಅತೀ ಹೆಚ್ಚು ರೇಟಿಂಗ್ ಪಡೆದ ಭಾರತದ ಚಿತ್ರ

By Shruiti G Krishna  |  First Published Oct 15, 2022, 11:41 AM IST

ರಿಷಬ್ ಕಾಂತಾರ ಮತ್ತೊಂದು ದಾಖಲೆ ಮಾಡಿದೆ. ರೇಟಿಂಗ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾವನ್ನು ಹಿಂದಿಕ್ಕಿದೆ.


ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಭಾರತದಾದ್ಯಂತ ಕಾಂತಾರ ಸಿನಿಮಾದೇ ಹವಾ. ಬೇರೆ ಬೇರೆ ಪರಭಾಷೆಯಿಂದ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಬಂದ ಸಿನಿಮಾ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿಗೆ ಮೆಚ್ಚುಗೆಯ ಮಹಾಪೂರ ಬರುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತರಾ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. 

ರಿಷಬ್ ಕಾಂತಾರ ಮತ್ತೊಂದು ದಾಖಲೆ ಮಾಡಿದೆ. ರೇಟಿಂಗ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾವನ್ನು ಹಿಂದಿಕ್ಕಿದೆ. ಹೌದು, ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ ಕಾಂತಾರ.  IMDb ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದೆ.  IMDbಯಲ್ಲಿ ಕಾಂತಾರ ಸಿನಿಮಾಗೆ 9.6 ರೇಟಿಂಗ್ ನೀಡಲಾಗಿದೆ. ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಇದಾಗಿದೆ. ಅಂದಹಾಗೆ ಕೆಜಿಎಫ್-2 ಸಿನಿಮಾಗೆ 10ಕ್ಕೆ 8.4 ನೀಡಲಾಗಿತ್ತು. ಇನ್ನು ಆರ್ ಆರ್ ಆರ್ ಸಿನಿಮಾಗೆ 10ಕ್ಕೆ 8 ರೇಟಿಂಗ್ ನೀಡಲಾಗಿತ್ತು. ಇದೀಗ ಕಾಂತಾರ ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. 

Tap to resize

Latest Videos

ಕಾಂತಾರ ಹೊಗಳಿದ ಧನುಷ್ 

ಕಾಂತಾರ ಸಿನಿಮಾ ನೋಡಿ ತಮಿಳು ನಟ ಧನುಷ್ ಹಾಡಿಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧನುಷ್, 'ಕಾಂತಾರ ಮೈಂಡ್ ಬ್ಲೋಯಿಂಗ್. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಗ್ಗೆ ನೀವು ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲ್ಮ್‌ಗೆ ಅಭಿನಂದನೆಗಳು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರಿಗೆ ದೊಡ್ಡ ಹಗ್. ದೇವರು ಒಳ್ಳೆದು ಮಾಡಲಿ' ಎಂದು ಹೇಳಿದರು. 

ರಿಷಬ್ ನೀವು ತುಂಬಾ ಹೆಮ್ಮೆ ಪಡಬೇಕು; 'ಕಾಂತಾರ' ನೋಡಿ ಹೊಗಳಿದ ನಟ ಧನುಷ್

ಪ್ರಭಾಸ್ ಹೇಳಿದ್ದೇನು?

ರಿಷಬ್ ಶೆಟ್ಟಿ ಸಿನಿಮಾವನ್ನು ವೀಕ್ಷಿಸಿದ ಪ್ರಭಾಸ್ ಹಾಡಿ ಹೊಗಳಿದ್ದರು. ಶೆಟ್ರ ನಟನೆಗೆ ಫಿದಾ ಪ್ರಭಾಸ್ ಫಿದಾ ಆಗಿದ್ದಾರೆ. 'ಕಾಂತಾರ ಸಿನಿಮಾವನ್ನ ನಾನು ತುಂಬಾ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್' ಎಂದು ಬರೆದುಕೊಂಡಿದ್ದಾರೆ. ಇನ್ನು ಇಡೀ ತಂಡಕ್ಕೆ ನನ್ನ ಅಭಿನಂದನೆ, ಒಳ್ಳೆಯದಾಗಲಿ' ಎಂದು ಹೇಳಿದ್ದರು.

Kantara; ರಿಷಬ್ ಪಾತ್ರ ಬೇರೆ ಯಾವ ನಟ ಮಾಡಬಹುದು? ಅಭಿಮಾನಿಗಳ ಆಯ್ಕೆ ಹೀಗಿದೆ

ರಾಣಾ ದಗ್ಗುಬಾಟಿ 

'ಕನ್ನಡದ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಅವರ ಕಾಂತಾರ ಎಷ್ಟು ಅದ್ಭುತವಾದ ಸಿನಿಮಾ. ಈ ಸಿನಿಮಾದ ಪ್ರತಿಯೊಬ್ಬರಿಗೂ ನನ್ನ ಅಭಿನಂದನೆಗಳು. ರಿಷಬ್ ಶೆಟ್ಟಿ ನಿಜಕ್ಕೂ ಸ್ಫೂರ್ತಿ' ಎಂದು ಹಾಡಿ ಹೊಗಳಿದ್ದರು. ಇನ್ನು ಅನೇಕ ಸ್ಟಾರ್ಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನಟ ನಾನಿ ಕೂಡ ಕಾಂತಾರ ಚಿತ್ರವನ್ನು ಹೊಗಳಿದ್ದರು. 

ಕಾಂತಾರ ಬಗ್ಗೆ

ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರವನ್ನು ಕಾಂತಾರ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ರಿಷಬ್. ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ, ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟದ ಬಗ್ಗೆ ರಿಷಬ್ ಶೆಟ್ಟಿ ಕಾಂತಾರ ಮೂಲಕ ಜನರ ಮುಂದಿಟ್ಟಿದ್ದಾರೆ. ಜೊತೆಗೆ ದೈವಾರಾಧನೆ, ಭೂತಕೋಲ ಆಚರಣೆ ಕಾಂತಾರದ ಹೈಲೆಟ್. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದರು. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
   
ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಸಹ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. 

click me!