Puneeth James Teaser: 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ' ಎಂದ ಡಾರ್ಲಿಂಗ್ ಪ್ರಭಾಸ್!

By Suvarna News  |  First Published Feb 12, 2022, 9:25 PM IST

ಪುನೀತ್​ ರಾಜ್​ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೆಲ್ಲೂ 'ಜೇಮ್ಸ್' ಜಪ ಶುರುವಾಗಿದೆ. ಇದೀಗ ಟಾಲಿವುಡ್​ ಸ್ಟಾರ್​ ನಟ ಡಾರ್ಲಿಂಗ್ ಪ್ರಭಾಸ್ ಚಿತ್ರದ ಟೀಸರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​  ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' (James) ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದ್ದು, ಎಲ್ಲೆಲ್ಲೂ ಇದೀಗ 'ಜೇಮ್ಸ್' ಜಪ ಶುರುವಾಗಿದೆ. ಮೊದಲ ಬಾರಿಗೆ ಚೇತನ್​ ಕುಮಾರ್ (Chetan Kumar)​ ನಿರ್ದೇಶನ ಮಾಡಿರುವ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ರಿಲೀಸ್​ ಆದ ಒಂದೇ ದಿನಕ್ಕೆ ಟೀಸರನ್ನು ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮಾತ್ರವಲ್ಲದೇ ಪರ ಭಾಷೆಯಲ್ಲೂ 'ಜೇಮ್ಸ್​' ಚಿತ್ರದ ಟೀಸರ್​ಗೆ ಅದ್ಭುತ ರೆಸ್ಪಾನ್ಸ್​ ಬರುತ್ತಿದೆ. ವಿಶೇಷವಾಗಿ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಈ ಟೀಸರ್ ಮಿಲಿಯನ್​ಗಟ್ಟಲೆ ವೀಕ್ಷಣೆಯಾಗಿದೆ.

ಪರಭಾಷೆಯ ಅನೇಕ ಸ್ಟಾರ್​ಗಳು ಪುನೀತ್​ ಅವರನ್ನು ನೆನಪಿಸಿಕೊಳ್ಳುತ್ತಿದ್ದು, ಇದೀಗ ಟಾಲಿವುಡ್​ ಸ್ಟಾರ್​ ನಟ ಡಾರ್ಲಿಂಗ್ ಪ್ರಭಾಸ್ (Prabhas) 'ಜೇಮ್ಸ್'​ ಚಿತ್ರದ ಟೀಸರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ​ಹೌದು! ಈ ಬಗ್ಗೆ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಜೇಮ್ಸ್ ಸಿನಿಮಾ ಮಾಸ್ಟರ್‌ಪೀಸ್​ ಸಿನಿಮಾವಾಗುತ್ತೆ ಎಂಬುದನ್ನು ನಾನು ಖಾತ್ರಿ ಪಡಿಸುತ್ತೇನೆ. ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರನ್ನು ಇಷ್ಟಪಡುವ ಲಕ್ಷಾಂತರ ಜನರಿಗೆ ಈ ಸಿನಿಮಾ ವಿಶೇಷವಾಗಿರುತ್ತದೆ. ವಿ ಮಿಸ್​ ಯೂ ಅಂತ' ಪ್ರಭಾಸ್​ ಬರೆದುಕೊಂಡು 'ಜೇಮ್ಸ್​' ಚಿತ್ರದ ಟೀಸರ್ ವಿಡಿಯೋ ಲಿಂಕ್ ಹಂಚಿಕೊಂಡಿದ್ದಾರೆ.

Tap to resize

Latest Videos

undefined

ಬ್ಯುಸಿನೆಸ್‌ಗಿಂತ ಭಾವನೆ ದೊಡ್ಡದ್ದು, ಪುನೀತ್ ರಾಜ್‌ಕುಮಾರ್ James Teaser ರಿಲೀಸ್!

Emotions Are Bigger Than Business ಅಂತ ಹೇಳಿ ಆರಂಭವಾಗುವ ಈ ಟೀಸರ್‌ನಲ್ಲಿ ಅಪ್ಪು ಹಾವ, ಭಾವ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಅಪ್ಪು ಎಂಟ್ರಿಗೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shivarajkumar) ಧ್ವನಿ ನೀಡಿದ್ದು, 'ನನಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ' ಎಂದು ಹೇಳಿರುವುದು ಕೇಳಬಹುದು. ಆಗ ಹೆಲಿಕಾಪ್ಟರ್ ಮತ್ತು ಕಾರುಗಳ ನಡುವೆ ಪುನೀತ್ ರಾಜ್‌ಕುಮಾರ್ ಸ್ಟೈಲಿಷ್ ಆಗಿ ನಡೆದುಕೊಂಡು ಬಂದಿದ್ದಾರೆ. ಟೀಸರ್‌ನಲ್ಲಿ ಅಪ್ಪುನ ಸಖತ್ ಕ್ಲಾಸ್ ಹಾಗೂ ಮಾಸ್ ಆಗಿ ತೋರಿಸಲಾಗಿದೆ. ಅದರಲ್ಲೂ ಮೂರು ಕುದುರೆಗಳ ಸಮಕ್ಕೆ ಅಪ್ಪು ಓಡಿರುವುದು ಎಲ್ಲರ ಗಮನ ಸೆಳೆದಿದೆ



'ಜೇಮ್ಸ್' ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. 'ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಕಾಣಿಸಿಕೊಂಡಿದ್ದು, ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ಹಾಗೂ ಮುಖೇಶ್ ರಿಷಿ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಕಿಶೋರ್ ಪತ್ತಿಕೊಂಡ (Kishore Pattikonda) 'ಜೇಮ್ಸ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ (Birthday) ದಿನ 'ಜೇಮ್ಸ್‌' ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ತೆರೆ ಕಾಣಲಿದೆ.

Puneeth Rajkumar ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು ರೋಮಾಂಚನಕಾರಿಯಾಗಿತ್ತು: ಚೇತನ್‌ ಕುಮಾರ್‌

ಇನ್ನು ಪ್ರಭಾಸ್, ರಾಧಾಕೃಷ್ಣ ಕುಮಾರ್ (Radha Krishna Kumar)​ ಅವರು ಆಕ್ಷನ್ ಕಟ್ ಹೇಳಿರುವ  'ರಾಧೆ ಶ್ಯಾಮ್​' (Radhe Shyam) ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 'ರಾಧೆ ಶ್ಯಾಮ್' ತೆರೆಕಾಣಲಿದೆ. ರೊಮ್ಯಾಂಟಿಕ್​ ಲವ್​ ಸ್ಟೋರಿ ಹೊಂದಿರುವ ಈ ಸಿನಿಮಾ ಪ್ರಭಾಸ್​ ವೃತ್ತಿಜೀವನದ ಡಿಫರೆಂಟ್ ಚಿತ್ರ ಎನ್ನಲಾಗುತ್ತಿದೆ. ಪ್ರಭಾಸ್​ಗೆ ಜತೆಯಾಗಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಕೃಷ್ಣಂರಾಜು (Krishnam Raju) ಅವರು ಋಷಿ ಪರಮಹಂಸ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ  ಡಿಜಿಟಲ್‌ ಹಕ್ಕುಗಳು (Digital Rights) 250 ಕೋಟಿ ರೂ ಗೆ ಮಾರಾಟವಾಗಿದೆ.
 

 
 
 
 
 
 
 
 
 
 
 
 
 
 
 

A post shared by Prabhas (@actorprabhas)

click me!