ಲವ್ ಮಾಕ್ಟೇಲ್- 2 ಬಗ್ಗೆಇಷ್ಟು ದಿನ ಸುಳ್ಳು ಹೇಳ್ತಿದ್ದೆ ಈಗ ಸತ್ಯ ಹೊರ ಬಂದಿದೆ: Milana Nagaraj

By Suvarna News  |  First Published Feb 12, 2022, 2:59 PM IST

ದೊಡ್ಡ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ ಲವ್ ಮಾಕ್ಟೇಲ್ 2 ಸಿನಿಮಾ ಇದೀಗ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದೆ. ಮಿಲನಾ ಚಿತ್ರದ ಬಗ್ಗೆ ಮಾತನಾಡಿದ್ದಾರೆ.


2022ರ ಪ್ರೇಮಿಗಳ ದಿನಾಚರಣೆಯನ್ನು (Valentine's Day) ಸ್ಪೆಷಲ್ ಮಾಡುವುದಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ಮಿಲನಾ ನಾಗರಾಜ್‌ (Milana Nagaraj) ಲವ್ ಮಾಕ್ಟೇಲ್ 2 (Love Mocktail 2) ಸಿನಿಮಾ ಬಿಡುಗಡೆ ಮಾಡಿದ್ದಾರೆ. ಸ್ವತಃ ಕೃಷ್ಣ ನಟಿಸಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಯಾವ ಪಾತ್ರದ ಬಗ್ಗೆನೂ ಮಾಹಿತಿ ಹೊರ ಬಿಟ್ಟಿರಲಿಲ್ಲ ಆದರೆ ಸಿನಿಮಾ ವೀಕ್ಷಿಸಿದವರಿಗೆ ಮಾತ್ರ ಗೊತ್ತು ಪ್ರತಿಯೊಂದು ಪಾತ್ರಕ್ಕೂ ನೀಡಿರುವ ಪ್ರಾಮುಖ್ಯತೆ ಎಷ್ಟಿದೆ ಎಂದು. ಲವ್ ಮಾಕ್ಟೇಲ್ ಮೊದಲನೇ ಭಾಗ ನೋಡಿದವರಿಗೆ ಇದ್ದ ಒಂದೇ ಪ್ರಶ್ನೆ, ಎರಡನೇ ಭಾಗದಲ್ಲಿ ನಿಧಿ ನಟಿಸಿದ್ದಾರಾ ಎಂದು? ಇಲ್ಲಿದೆ ಉತ್ತರ

ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾ ಬಗ್ಗೆ ಎಲ್ಲಿ ನೋಡಿದರೂ ಪಾಸಿಟಿವ್ ಕಾಮೆಂಟ್. ಯಶಸ್ಸಿಗೆ ಕಾರಣವಾದ ಮಿಲನಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ನಾನು ಕೃಷ್ಣ ಅವರು ಜೊತೆಗೆ ಕಥೆ ಬರೆಯುವಾಗ ಯಾವತ್ತೂ ಅವರನ್ನು ಹೈಲೈಟ್ ಮಾಡಬೇಕು ಇವರನ್ನು ಹೈಲೈಟ್ ಮಾಡಬೇಕು ಅಂತ ಕಥೆ ಮಾಡುವುದಿಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರದೆ ಪ್ರಾಮುಖ್ಯತೆ ಇದೆ. ನನ್ನ ಪಾತ್ರಕ್ಕೂ ಎಷ್ಟು ಬೇಕು ಅಷ್ಟೆ ಎಲ್ಲಿ ಬರಬೇಕು ಎಲ್ಲಿ ಹೋಗಬೇಕು ಅಂತ ನೋಡಿಕೊಂಡು ಮಾಡಿರುವುದು. ಆದಿ (Adi) ಪಾತ್ರನೂ ಯಾವತ್ತೂ ಹೈಲೈಟ್ ಮಾಡಬೇಕು ಎಂದು ಬರೆದಿಲ್ಲ. ಸ್ಕ್ರೀನ್‌ ಪ್ಲೇನಲ್ಲಿ ಯಾರು ಎಷ್ಟು ಮಜಾ ಕೊಡ್ತಾರೆ ಅನ್ನೋದು ಇರೋದು' ಎಂದು ಮಿಲನಾ ಮಾತನಾಡಿದ್ದಾರೆ.

Tap to resize

Latest Videos

'ಎಲ್ಲರೂ ಕೇಳುತ್ತಿದ್ದರು ಎರಡನೇ ಭಾಗದಲ್ಲಿ ನಿಧಿ (Nidhi) ಇರ್ತಾರಾ ಇಲ್ವಾ ಅಂತ. ಸಿನಿಮಾ ಕಥೆ ಬಿಟ್ಟುಕೊಡುವುದಕ್ಕೆ ಕಷ್ಟ ಆಗ್ತಿತ್ತು. ಸುಳ್ಳು ಹೇಳುವುದಕ್ಕೂ ಬೇಜಾರ್ ಆಗ್ತಿತ್ತು ನಿಧಿ ಇಲ್ಲ ಅಂತ. ಈಗ ಸಿನಿಮಾ ಹೊರ ಬಂದಿದೆ. ಸುಳ್ಳು ಹೇಳುವುದಕ್ಕೆ ಇಷ್ಟು ದಿನ ನನಗೆ ಮುಜುಗರ ಆಗ್ತಿತ್ತು' ಎಂದು ನಿಧಿ ತಮ್ಮ ಎಂಟ್ರಿ ಬಗ್ಗೆ ಹೇಳಿದ್ದಾರೆ. 

Film Review: ಲವ್ ಮಾಕ್ಟೇಲ್ 2

'ಲವ್ ಮಾಕ್ಟೇಲ್ 3 ಮಾಡುವುದು ನನ್ನ ತಲೆಯಲ್ಲಿ ಇಲ್ಲ. ಕೃಷ್ಣ ಅವರು ಮಾಡ್ಬೇಕು ಅಂದ್ರೆ ಮಾತ್ರ ಬರೆಯುವುದಕ್ಕೆ ಕೂರ್ತಿವಿ ಏಕೆಂದರೆ ನಿನ್ನೆ ಪ್ರೀಮಿಯರ್ ಶೋನಲ್ಲಿ ಲವ್ ಮಾಕ್ಟೇಲ್ 3 ಮಾಡಿ ಎಂದು ಎಲ್ಲರೂ ಡಿಮ್ಯಾಂಡ್ ಮಾಡುತ್ತಿದ್ದರು. ಕೃಷ್ಣ ಅವರು ಯೋಚನೆ ಮಾಡಿರಬಹುದು ,ಮಾಡಿದ್ದರೆ ಅದು ಅವರ ನಿರ್ಧಾರ ಆಗಿರುತ್ತದೆ. ಈಗ ಡೈರೆಕ್ಟರ್ (Director) ಬಗ್ಗೆ ನಾವು ಏನು ಮಾತನಾಡುವಂತಿಲ್ಲ ಬಿಡಿ ಎರಡನೇ ಸಿನಿಮಾನೂ ಹಿಟ್ ಆದ್ಮೇಲೆ. ನಾನು ಅವರು ಒಟ್ಟಿಗೆ ಕೆಲಸ ಮಾಡುವುದಕ್ಕೆ ಒಂದು Rapo ಸೆಟ್ ಆಗಿದೆ. ಬೇರೆ ಅವರಿಗೆ ನಿರ್ಮಾಣ ಮಾಡುವುದಕ್ಕೆ ನನಗೆ ಧೈರ್ಯ ಬರುವುದಿಲ್ಲ ಅದಕ್ಕೆ ಕೃಷ್ಣ ಅವರಿಗೆ ಮಾತ್ರ ಮಾಡ್ತೀನಿ' ಎಂದು ಮಿಲನಾ ಹೇಳಿದ್ದಾರೆ.

Love Mocktail ಚಿತ್ರದಲ್ಲಿ ಮಲಯಾಳಂ ನಟಿ, ಕನ್ನಡದ ಮಾತುಗಳನ್ನು ಕೇಳಿ ಫಿದಾ ಆದ ಫ್ಯಾನ್ಸ್‌!

'ಚಿತ್ರದಲ್ಲಿರುವ ಎಲ್ಲಾ ಪಾತ್ರಗಳನ್ನು ವೀಕ್ಷಕರು ಇಷ್ಟಪಡ್ತಿದ್ದಾರೆ. ಓವರ್ ಆಲ್ ಸಿನಿಮಾ ನೋಡಿ ನನಗೆ ಖುಷಿ ಆಗುತ್ತಿದೆ. ಎಷ್ಟೋ ವರ್ಷಗಳ ಪ್ರತಿಫಲ ಇದು. ಈ ಸಿನಿಮಾ ಅಂತಲ್ಲ ಈ ಪಾತ್ರ ಅಂತಲ್ಲ ನಮ್ದು ಎಷ್ಟೋ ವರ್ಷದ ಸ್ಟ್ರಗಲ್ ಇದೆ ಇದರ ಹಿಂದೆ. ಸಿನಿಮಾದಲ್ಲಿ ಇದೆ ಪ್ರೀತಿ ಅಂದ್ರೆ ಏನು ಅಂತ ಹೇಳುವುದಕ್ಕೆ ಆಗೋಲ್ಲ. ಸಿನಿಮಾ ಬರೆಯುವುದರಿಂದ ಹಿಡಿದು ತೆರೆ ಮೇಲೆ ತಂದು ಅದನ್ನು ಜನರಿಗೆ ತಲುಪಿಸುವವರೆಗೂ ಕಷ್ಟ ಇದೆ. ಲವ್ ಮಾಕ್ಟೇಲ್ 2 ಚಿತ್ರೀಕರಣ ಸಮಯದಲ್ಲಿ ಕೋವಿಡ್‌ (Covid19) ಇತ್ತು. ಎಲ್ಲಾ ಕಷ್ಟ ಎದುರಾಯ್ತು. ಈ ನಡುವೆ ಗೆಲುವು ನೋಡುವುದಕ್ಕೆ ಒಂದು ರೀತಿ ಖುಷಿ' ಎಂದಿದ್ದಾರೆ ಮಿಲನಾ.

click me!