ಡೇರ್‌ ಡೆವಿಲ್‌ ಮುಸ್ತಾಫಾ ಚಿತ್ರದ ಗೆಲುವಿಗೆ ಸಂಭ್ರಮ; ಧನಂಜಯ್ ಸಂಭ್ರಮ

Published : Jun 08, 2023, 10:33 AM IST
ಡೇರ್‌ ಡೆವಿಲ್‌ ಮುಸ್ತಾಫಾ ಚಿತ್ರದ ಗೆಲುವಿಗೆ ಸಂಭ್ರಮ; ಧನಂಜಯ್ ಸಂಭ್ರಮ

ಸಾರಾಂಶ

ಸಂಭ್ರಮಾಚರಣೆ ಸಂದರ್ಭ ಕಲಾವಿದರಾದ ನಾಗಭೂಷಣ, ಶೋಭರಾಜ್ ಪಾವೂರು, ಚೈತ್ರಾ ಶೆಟ್ಟಿ, ಪೂರ್ಣಚಂದ್ರ ಮೈಸೂರು ಮತ್ತಿತರರು ಇದ್ದರು.

ಕನ್ನಡಪ್ರಭ ಸಿನಿವಾರ್ತೆ

ಶಶಾಂಕ್ ಸೋಗಾಲ್ ನಿರ್ದೇಶನದ, ಪೂರ್ಣಚಂದ್ರ ತೇಜಸ್ವಿಯವರ ಕತೆ ಆಧರಿತ ‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ಗೆದ್ದಿದೆ. ಅಪಾರ ಸಂಖ್ಯೆಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹೀಗಾಗಿ ಚಿತ್ರತಂಡ ಖುಷಿಯಲ್ಲಿದೆ. ಹೌಸ್ ಕೇಕ್ ಕತ್ತರಿಸಿಕೊಂಡು ಸಂಭ್ರಮಿಸಿದೆ.

Daredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್‌ ಕಥನDaredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್‌ ಕಥನ

ಸಂಭ್ರಮಾಚರಣೆ ಕಾರ್ಯಕ್ರದಲ್ಲಿ ಈ ಸಿನಿಮಾ ಅರ್ಪಿಸಿದ ಡಾಲಿ ಧನಂಜಯ ಮಾತನಾಡಿ, ‘ಪೂರ್ಣಚಂದ್ರ ತೇಜಸ್ವಿಯವರನ್ನು ಸೆಲೆಬ್ರೇಟ್ ಮಾಡಲು ಸಿಕ್ಕ ಅವಕಾಶ ಇದು. ನನ್ನ ಕಟೌಟ್ ಮುಂದೆ ಕುಣಿದಾಗ ಇಷ್ಟು ಸಂತೋಷ ಆಗಿರಲಿಲ್ಲ. ತೇಜಸ್ವಿಯವರ ಕಟೌಟ್ ಮುಂದೆ ಕುಣಿದಾಗ ಅಪಾರ ಖುಷಿ ಸಿಕ್ಕಿತು. ಕೆಲವು ತಂಡಗಳು ಕಷ್ಟಪಟ್ಟು ಸಿನಿಮಾ ಮಾಡುತ್ತಾರೆ. ಆದರೆ ರಿಲೀಸ್ ಮಾಡಲು ಅವರಿಗೆ ಕಷ್ಟವಾಗುತ್ತದೆ. ಯಾರೋ ಏನೋ ಒಳ್ಳೆಯದು ಮಾಡುತ್ತಿದ್ದಾರೆ ಎಂದಾಗ ನಾವು ಅದರ ಭಾಗವಾಗುವುದು ಮುಖ್ಯ. ಈ ಸಂಭ್ರಮ ನೋಡುವುದೇ ಸಂತೋಷ’ ಎಂದರು.ನಿರ್ದೇಶಕ ಶಶಾಂಕ್ ಸೋಗಾಲ್, ‘ಒಳ್ಳೆಯ ಸಿನಿಮಾ ಮಾಡುವ ಆಸೆ ಇತ್ತು. ಈಗ ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆಯ ಕೃತಿಯಾಗಿದೆ ಎಂದೇ ಭಾವಿಸುತ್ತೇನೆ. ಉದ್ದೇಶ ಒಳ್ಳೆಯದಿದ್ದಾಗ ಒಳ್ಳೆಯ ಸ್ನೇಹಿತರೇ ಸಿಗುತ್ತಾರೆ. ಧನಂಜಯ್ ಸರ್ ಸಪೋರ್ಟ್ ಮಾಡಿದರು. ಸಿನಿಮಾ ಗೆದ್ದಿದೆ. ಖುಷಿಯಾಗಿದೆ’ ಎಂದರು.

ನೋಡಲೇಬೇಕಿರುವ ಕತೆ ಡೇರ್‌ ಡೆವಿಲ್‌ ಮುಸ್ತಾಫಾ: ಧನಂಜಯನೋಡಲೇಬೇಕಿರುವ ಕತೆ ಡೇರ್‌ ಡೆವಿಲ್‌ ಮುಸ್ತಾಫಾ: ಧನಂಜಯ

ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರೀ, ‘18 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಅವಮಾನ, ಕಾಯುವಿಕೆ ಬಳಿಕ ಈಗ ಜನರ ಪ್ರೀತಿ ಸಿಕ್ಕಿದೆ’ ಎಂದರು. ಮುಸ್ತಾಫಾ ಪಾತ್ರಧಾರಿ ಶಿಶಿರ್‌ ಬೈಕಾಡಿ, ‘ಮೊದಲ ಚಿತ್ರಕ್ಕೆ ಇಷ್ಟು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿರುವುದು ಖುಷಿಯಾಗಿದೆ’ ಎಂದರು.

ಸಂಭ್ರಮಾಚರಣೆ ಸಂದರ್ಭ ಕಲಾವಿದರಾದ ನಾಗಭೂಷಣ, ಶೋಭರಾಜ್ ಪಾವೂರು, ಚೈತ್ರಾ ಶೆಟ್ಟಿ, ಪೂರ್ಣಚಂದ್ರ ಮೈಸೂರು ಮತ್ತಿತರರು ಇದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?