Abhishek Ambareesh Reception: ಅದ್ದೂರಿ ಆರತಕ್ಷತೆಗೆ ಸಿದ್ಧವಾಗಿದೆ ವೇದಿಕೆ, ಯಾರೆಲ್ಲಾ ಗಣ್ಯರು ಭಾಗಿಯಾಗ್ತಾರೆ?

Published : Jun 07, 2023, 06:19 PM IST
Abhishek Ambareesh Reception: ಅದ್ದೂರಿ ಆರತಕ್ಷತೆಗೆ ಸಿದ್ಧವಾಗಿದೆ ವೇದಿಕೆ, ಯಾರೆಲ್ಲಾ ಗಣ್ಯರು ಭಾಗಿಯಾಗ್ತಾರೆ?

ಸಾರಾಂಶ

ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ ಅದ್ದೂರಿ ಆರತಕ್ಷತೆಗೆ ವೇದಿಕೆ ಸಿದ್ಧವಾಗಿದೆ. ಸಂಜೆ 7ಗಂಟೆಯಿಂದ ಸಮಾರಂಭ ಪ್ರಾರಂಭವಾಗಲಿದೆ. 


ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಜೂನ್ 5ರಂದು ಬಹುಕಾಲದ ಗೆಳತಿ ಅವಿವಾ ಬಿಡಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿಡಪ ಮತ್ತು ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಪತಿ ಪತ್ನಿಯರಾಗಿದ್ದಾರೆ. ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಕನ್ನಡ ಸಿನಿಮಾ ಗಣ್ಯರು ಮಾತ್ರವಲ್ಲದೇ ಪರಭಾಷೆಯ ತಾರೆಯರು ಆಗಮಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇದೀಗ ಅಭಿ ಮತ್ತು ಅವಿವಾ ಜೋಡಿಯ ಅದ್ದೂರಿ ಆರತಕ್ಷತೆ ಸಮಾರಂಭ ನಡೆಯುತ್ತಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಸಂಜೆ 7 ಗಂಟೆಗೆ  ಅಭಿ ಮತ್ತು ಅವಿವಾ ರಿಸೆಪ್ಷನ್ ನಡೆಯಲಿದೆ. ಇಂದು (ಜೂನ್ 7) ನಡೆಯುತ್ತಿರುವ ಆರತಕ್ಷತೆ ಕಾರ್ಯಕ್ರಕ್ಕೆ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. 

ಸುಮಾರು 3 ಸಾವಿರಕ್ಕು ಆಧಿಕ ಜನರಿಗೆ ಆಸನದ ವ್ಯವಸ್ಥೆ ಮಾಡಿಸಲಾಗಿದೆ. 25 ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಸಿದ್ಧವಾಗುತ್ತಿದೆ. VVIPs and VIP ಅವರಿಗೆ ಸೆಪರೇಟ್ ಊಟದ ವ್ಯವಸ್ಥೆ ಮಾಡಿಸಲಾಗಿದೆ. ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರು ಇಂದು ಬೆಂಗಳೂರಿನ ಅರಮನೆ ಮೈದಾನಕ್ಕೆ ಆಗಮಿಸಿ ನವ ಜೋಡಿಗೆ ಶುಭಹಾರೈಸಲಿದ್ದಾರೆ.  

ಗಣ್ಯರ ಲಿಸ್ಟ್

ಅಂಬಿ ಮತ್ತು ಅವಿವಾ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಭಾಗಿಯಾಗುತ್ತಿದ್ದಾರೆ. ಕನ್ನಡ ಸ್ಟಾರ್ಸ್ ಜೊತೆಗೆ ಪರಭಾಷೆಯ ಅನೇಕ ಗಣ್ಯರು ಹೆಸರು ಕೇಳಿಬರುತ್ತಿದೆ. ನಟ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿಫಾರೂಕ್ ಅಬ್ದುಲ್ಲಾ, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ಗುಲಾಮ್ ನಬಿ ಆಜಾದ್,ಶತ್ರು ಜ್ಞಾನ ಸಿನ್ಹಾ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗುತ್ತಿದ್ದಾರೆ. 

Abhishek Ambareesh Wedding: ಅಭಿಷೇಕ್‌ ಮದ್ವೆಲಿ ಕಿಚ್ಚ ದಂಪತಿ, ದುಬಾರಿ ಉಡುಗೊರೆ ನೀಡಿದ ಸುದೀಪ್

ಅದ್ದೂರಿ ವೇದಿಕೆ 

ಅಭಿ ಮತ್ತು ಅವಿವಾ ಮದುವೆ ಆರತಕ್ಷತೆಗೆ ರೋಮನ್ ಶೈಲಿಯ ಥೀಮ್‌ನಲ್ಲಿ ವೇದಿಕೆ ಸಿದ್ಧವಾಗಿದೆ. ಜಗಮಗಿಸೋ ವೇದಿಕೆಯ ಫೋಟೋಗಳು ಅಭಿಮಾನಿಗಳ ಗಮನಸೆಳೆಯುತ್ತಿದೆ. ದೊಡ್ಡ ಗಣ್ಯರ ಮದುವೆಗೆ ವೇದಿಕೆ ಸಿದ್ಧಮಾಡಿದ್ದ ಡಿಸೈನರ್ಸ್ ಅಭಿಷೇಕ್ ಮತ್ತು ಅವಿವಾ ಮದುವೆಗೂ ವೇದಿಕೆ ಸಿದ್ಧಮಾಡಿದ್ದಾರೆ.

 Abhishek Ambareesh Wedding: ಅಂಬಿ ಫೋಟೊಗೆ ನಮನ ಸಲ್ಲಿಸಿ ಅಭಿಷೇಕ್‌-ಅವಿವಾಗೆ ಶುಭಹಾರೈಸಿದ ಯಶ್-ರಾಧಿಕಾ

10 ಬಗೆಯ ಸಿಹಿ ತಿನಿಸು ಸಿದ್ಧ

ಅದ್ದೂರಿ ಮದುವೆ ಅಂದ್ಮೇಲೆ ಊಟದ ವ್ಯವಸ್ಥೆ ಕೂಡ ಅಷ್ಟೆ ಅದ್ದೂರಿಯಾಗಿ ಇರುತ್ತದೆ. ಅಭಿ ಮದುವೆಗೂ ಬಗೆಬಗೆಯ ತಿನಿಸುಗಳನ್ನು ಮಾಡಲಾಗಿದೆ. ವಿಶೇಷದವಾದ ಖಾದ್ಯಗಳು ತಯಾರಾಗುತ್ತಿವೆ. 10 ಬಗೆಯ ಸಿಹಿ ತಿನಿಸು ಸಿದ್ಧ ಪಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?