ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಸೆಟ್‌ನಲ್ಲಿ ನಾನ್‌ವೆಜ್ ಇಲ್ಲವೇ ಇಲ್ಲ; ಮಡಿವಂತಿಕೆ ಮಾಡಿದ್ದು ಯಾಕೆಂದು ಹೇಳಿದ ರವಿಶಂಕರ್

Published : Apr 17, 2023, 10:59 AM IST
ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಸೆಟ್‌ನಲ್ಲಿ ನಾನ್‌ವೆಜ್ ಇಲ್ಲವೇ ಇಲ್ಲ; ಮಡಿವಂತಿಕೆ ಮಾಡಿದ್ದು ಯಾಕೆಂದು ಹೇಳಿದ ರವಿಶಂಕರ್

ಸಾರಾಂಶ

ಏಪ್ರಿಲ 28ರಂದು ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ರಿಲೀಸ್. ಚಿತ್ರೀಕರಣ ಮುಗಿಯುವವರೆಗೂ ನಾನ್‌ವೆಜ್‌ ಮಾಡಿಲ್ಲ ಯಾಕೆ?

ಹೊಂಬಾಳೆ ಫಿಲ್ಮ್ಸ್‌ ನಿಮಾರ್ಣ ಮಾಡುತ್ತಿರುವ ರಾಘವೇಂದ್ರ ಸ್ಟೋರ್ಸ್‌ ಚಿತ್ರಕ್ಕೆ ಸಂತೋಷ್ ಆನಂದ್‌ರಾಮ್ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಕಾಮಿಡಿ ಕಿಂಗ್ ಜಗೇಶ್, ರವಿಶಂಕರ್‌ ಗೌಡ ಮತ್ತು ನಟಿ ಶ್ವೇತಾ ಶ್ರೀವಾಸ್ತವ್‌ ಅಭಿನಯಿಸುತ್ತಿದ್ದಾರೆ. ಏಪ್ರಿಲ್ 28ರಂದು ಸಿನಿಮಾ ರಿಲೀಸ್ ಆಗುತ್ತಿದ್ದು ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಈ ವೇಳೆ ಕೆಲವೊಂದು ಖುಷಿ ವಿಚಾರಗಳನ್ನು ಡಾ.ವಿಠಲ್ ರಾವ್ ಹಂಚಿಕೊಂಡಿದ್ದಾರೆ.

'ಚಿತ್ರಕ್ಕೆ ರಾಘವೇಂದ್ರ ಸ್ಟೋರ್ಸ್ ಎಂದು ಹೆಸರಿಡಲು ಕಾರಣವಿದೆ ....ಜಗಣ್ಣ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ, ನಾನು ಕೂಡ ಚಿಕ್ಕ ವಯಸ್ಸಿನಿಂದ ರಾಘವೇಂದ್ರ ಸ್ವಾಮಿಗಳ ಭಕ್ತ ಹೀಗಾಗಿ ಬಹಳ ಮಡಿವಂತಿಕೆಯಿಂದ ಮಾಡಿರುವ ಸಿನಿಮಾ ಇದು. ಸಿನಿಮಾ ಚಿತ್ರೀಕರಣ ಮುಗಿಸುವವರೆಗೂ ನಮ್ಮ ಸೆಟ್‌ನಲ್ಲಿ ನಾನ್ ವೆಚ್‌ ಮಾಡಿಲ್ಲ ಅಷ್ಟು ಭಯ ಭಕ್ತಿಯಿಂದ ಸಿನಿಮಾ ಮಾಡಿದ್ದೀವಿ. ರಾಯರ ಹೆಸರಿದೆ ಹೀಗಾಗಿ ಕಟ್ಟುನಿಟ್ಟಿನಿಂದ ಸಿನಿಮಾ ಮಾಡಿದ್ದೀವಿ' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ರವಿಶಂಕರ್ ಮಾತನಾಡಿದ್ದಾರೆ.

Tribble Riding ಪೇಮೆಂಟ್ ಹೇಳಿದ್ದಕ್ಕೆ ಕೊರೋನಾ ಕಡಿಮೆ ಮಾಡ್ಕೊಳಿ ಅಂದ್ರು ನಿರ್ಮಾಪಕರು: ರವಿಶಂಕರ್

'ನಿರ್ದೆಶಕ ಸಂತೋಷ್, ಹಿರಿಯ ನಟ ದತ್ತಣ್ಣ ಮತ್ತು ಜಗಣ್ಣ ಕಾಮಿಡಿ ತುಂಬಾ ಮಾಡುತ್ತಾರೆ. ಇಡೀ ಸೆಟ್ ಖುಷಿ ಖುಷಿಯಿಂದ ಇರುತ್ತಿತ್ತು. ಓಪನಿಂಗ್ ಡೈಲಾಗ್‌ ಜಗಣ್ಣ ಅವರದ್ದು. ಖುಷಿಯಿಂದ ಸಿನಿಮಾ ಮಾಡಿದ್ದೀವಿ ಸಿನಿಮಾ ಯಾಕೆ ಇಷ್ಟು ಬೇಗ ಮುಗಿಯಿತ್ತು ಅನಿಸುತ್ತಿತ್ತು. ಚಿತ್ರೀಕರಣ ಮಾಡುವಾಗಲೇ ಜನರು ಸಿನಿಮಾ ಉರುಳಾಡಿ ನಗುತ್ತಾರೆ ಎಂದು ಗೊತ್ತಾಗುತ್ತದೆ' ಎಂದು ರವಿಶಂಕರ್ ಹೇಳಿದ್ದಾರೆ.

'ನನಗೆ ಅಡುಗೆ ಮಾಡಲು ಬರುವುದಿಲ್ಲ ಅನ್ನ ಕೂಡ ಮಾಡಲ್ಲ. ಹೆಂಡತಿ ಮತ್ತು ಅಮ್ಮ ಅಡುಗೆ ಮಾಡುತ್ತಾರೆ ಅದರಲ್ಲಿ ಅಮ್ಮ ಮಾಡುವ ಅಡುಗೆ ತುಂಬಾ ಇಷ್ಟವಾಗುತ್ತದೆ. ನನ್ನ ಪತ್ನಿ ಸಂಗೀತ ಅಕ್ಕಿ ರೊಟ್ಟಿ ಸೂಪರ್ ಆಗಿರುತ್ತದೆ. ನನ್ನ ತಂಗಿ ಕೂಡ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಮಂಡ್ಯದಲ್ಲಿ ಸಹೋದರಿ ಇದ್ದಾಳೆ 2 ಗಂಟೆ ಪ್ರಯಾಣ ಮಾಡಿಕೊಂಡು ತಿನ್ನಲು ಹೋಗಬೇಕಿತ್ತು ಆದರೆ ಈಗ ಬೇಗ ತಲುಪಬಹುದು ಕೆಲವು ದಿನಗಳ ಹಿಂದೆ ತಿಂಡಿ ಮಾಡಿಕೊಂಡು ಬಂದೆ. ನಾನು ಊಟ ಪ್ರಿಯಾ...ಡಯಟ್‌ ಮಾಡಲು ಆಗಲ್ಲ ಏಕೆಂದರೆ ಹಸಿವು ತಡೆಯುವುದಿಲ್ಲ. ಯಾರ ಮನೆಯಲ್ಲಿ ಅಡುಗೆ ಗಮ್ ಎನ್ನುತ್ತಿದ್ದರೆ ಓಪನ್ ಆಗಿ ಊಟ ಏನು ಹಾಕಿಕೊಡುತ್ತೀರಾ ಎಂದು ಕೇಳಿಬಿಡುತ್ತೀನಿ' ಎಂದಿದ್ದಾರೆ ವಿಠಲ್ ರಾವ್.

ಪುನೀತ್‌ನ ನೋಡಬೇಕು ಎಂದು ನನ್ನ ತಾಯಿ ಎದೆ ಬಡಿದುಕೊಂಡು ಗೋಳಾಡಿಬಿಟ್ಟರು: ರವಿಶಂಕರ್ ಗೌಡ

'ದುಬೈನಿಂದ ಭಾರತಕ್ಕೆ ಹಿಂತಿರುಗಿ ಬರುವಾಗ ಇಡೀ ಫ್ಲೈಟ್‌ನಲ್ಲಿರುವ ಜನರು ಎದ್ದು ನಿಂತುಕೊಂಡರು ಗಾಬರಿಯಲ್ಲಿ ನಾನು ನೋಡಿದೆ ಎಲ್ಲರೂ ಸಾರ್‌ ನೀವು ಎಂದು ಮಾತನಾಡಿಸುತ್ತಿದ್ದಾರೆ. ಅಲ್ಲಿದ್ದವರು ದುಬೈನಲ್ಲಿ ಕೆಲಸ ಮಾಡುತ್ತಿರುವ ನಮ್ಮ ಕನ್ನಡಿಗರು..ಡ್ರೈವಿಂಗ್, ಮನೆ ಕಟ್ಟುವ ಕೆಲಸು ಮಾಡುವವರು. 50-60 ಜನ ನಿಂತುಕೊಂಡು ನನ್ನನ್ನು ವಿಚಾರಿಸುತ್ತಿದ್ದರು ಅವರ ಮಾತುಗಳನ್ನು ಕೇಳಿ ನನಗೆ ಖುಷಿ ಆಯ್ತು. ಪುಣ್ಯ ಮಾಡಿರುವ ಕಲಾವಿನಾಗಿ ಬದುಕಿರುವುದಕ್ಕೆ. ಬದುಕು ಇರುವವರೆಗೂ ಕಲಾವಿದನಾಗಿ ಜನರಿಗೆ ಮನೋರಂಜನ್ ಕೊಡಲು ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿದೆ' ಎಂದು ಹೇಳುವ ರವಿ ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ