'ಧೂಮಂ' ಫಸ್ಟ್ ಲುಕ್ ರಿಲೀಸ್‌ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ: 'ಸಲಾರ್' ಅಪ್‌ಡೇಟ್‌ ಎಲ್ಲಿ ಎಂದ ಫ್ಯಾನ್ಸ್

Published : Apr 16, 2023, 04:25 PM ISTUpdated : Apr 19, 2023, 05:02 PM IST
'ಧೂಮಂ' ಫಸ್ಟ್ ಲುಕ್ ರಿಲೀಸ್‌ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ: 'ಸಲಾರ್' ಅಪ್‌ಡೇಟ್‌ ಎಲ್ಲಿ ಎಂದ ಫ್ಯಾನ್ಸ್

ಸಾರಾಂಶ

'ಧೂಮಂ' ಸಿನಿಮಾದ ಫಸ್ಟ್ ಲುಕ್ ರಿಲೀಸ್‌ ಡೇಟ್ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ. ಅಭಿಮಾನಿಗಳು 'ಸಲಾರ್' ಅಪ್‌ಡೇಟ್‌ ಎಲ್ಲಿ ಎಂದು ಕೇಳುತ್ತಿದ್ದಾರೆ.  

ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಧೂಮಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ನಿರ್ದೇಶಕ ಪವನ್ ಕುಮಾರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬಂದಿದೆ.  ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್  ಬಂಡವಾಳ ಹೂಡಿದೆ. ಮೊದಲ ಬಾರಿಗೆ ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಿದ್ದಾರೆ ಮಲಯಾಳಂ ಸ್ಟಾರ್ ಫಹಾದ್. ಸದ್ಯ ಈ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದೆ ಹೊಂಬಾಳೆ ಫಿಲ್ಮ್ಸ್. ಧೂಮಂ ಸಿನಿಮಾ ಫಸ್ಟ್ ಲುಕ್ ರಿಲೀಸ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಬಹಿರಂಗ ಪಡಿಸಿದೆ. 

ಈಗಾಗಲೇ ಧೂಮಂ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಧೂಮಂ ಇದೀಗ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಮುಂದೆ ಬರ್ತಿದೆ. ಫಹಾದ್ ಫಾಸಿಲ್ ಸಿನಿಮಾ ಅಂದರೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿ ಇರುತ್ತೆ. ಯಾವಾಗ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಹಾಗೆ ನಿರ್ದೇಶಕ ಪವನ್ ಕುಮಾರ್ ಕೂಡ ಹೊಸ ಸಬ್ಜೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ. ಇಬ್ಬರೂ ಒಟ್ಟಿಗೆ ಸೇರಿ ಮಾಡಿರುವ ಧೂಮಂ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿಯೆ ಇದೆ.

ಅಂದಹಾಗೆ ಧೂಮಂ ಸಿನಿಮಾದ ಫಸ್ಟ್ ಲುಕ್ ಏಪ್ರಿಲ್ 17ರಂದು ರಿಲೀಸ್ ಮಾಡುವುದಾಗಿ ಸಿನಿಮಾತಂಡ ಬಹಿರಂಗ ಪಡಿಸಿದೆ. ನಾಳೆ (ಏಪ್ರಿಲ್ 17) ಬೆಳಗ್ಗೆ 10.45ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಬಹಿರಂಗ ಪಡಿಸಿದೆ. ಹೊಂಬಾಳೆ ಫಿಲ್ಮ್ಸ್ ಪೋಸ್ಟರ್ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಲಾರ್ ಸಿನಿಮಾದ ಅಪ್‌ಡೇಟ್ ಎಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಮೊದಲ ಸಲಾರ್ ಸಿನಿಮಾದ ಅಪ್‌ಡೇಟ್ ನೀಡಿ ಬಳಿಕ ಧೂಮಂ ಲುಕ್ ರಿಲೀಸ್ ಮಾಡಿ ಹೇಳುತ್ತಿದ್ದಾರೆ. 

ಹೊಂಬಾಳೆ ಫಿಲ್ಮ್ಸ್ ಜೊತೆ ಫಹಾದ್ ಸಿನಿಮಾ; ಪುನೀತ್ ಮಾಡಬೇಕಿದ್ದ ದ್ವಿತ್ವಗೆ ಹೀರೋ ಆಗ್ತಾರಾ ಮಲಯಾಳಂ ಸ್ಟಾರ್?

ಸಲಾರ್ ಸಿನಿಮಾ ಪ್ರಾರಂಭವಾಗಿ ವರ್ಷವಾಗಿದೆ. ಆದರೂ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಹಾಗಾಗಿ ಸಿನಿಮಾದ ಅಪ್‌ಡೇಟ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಯಾವುದೇ ಮಾಹಿತಿ ಶೇರ್ ಮಾಡಿದರೂ ಪ್ರಭಾಸ್ ಫ್ಯಾನ್ಸ್ ಸಲಾರ್ ಅಪ್‌ಡೇಟ್ ಎಂದು ಹಿಂದೆ ಬಿದ್ದಿದ್ದಾರೆ.

ಧೂಮಂ ಬಗ್ಗೆ 

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಧೂಮಂ ಸಿನಿಮಾದಲ್ಲಿ ಫಹಾದ್ ಫಾಸಿಲ್ ಜೊತೆ ಸೂರರೈ ಪೊಟ್ರು ಖ್ಯಾತಿಯ ನಟಿ ಅಪರ್ಣಾ ಬಾಲಮುರಳಿ ನಾಯಕಿಯಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ಫಹಾದ್ ಮತ್ತು ಅಪರ್ಣಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಾರಿ ನಿರೀಕ್ಷೆ ಮೂಡಿಸಿರುವ ಧೂಮಂ ಫಸ್ಟ್ ಲುಕ್ ಹೇಗಿರಲಿದೆ ಎಂದು ಕುತೂಲ ಮೂಡಿಸಿದೆ.     

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ