ಕಬ್ಜ 2 ಸಿನಿಮಾ ಘೋಷಣೆ ಮಾಡಿದ ಆರ್‌.ಚಂದ್ರು; 25ನೇ ದಿನದ ಸಂಭ್ರಮಾಚರಣೆ ಹೀಗಿತ್ತು

Published : Apr 17, 2023, 09:08 AM IST
ಕಬ್ಜ 2 ಸಿನಿಮಾ ಘೋಷಣೆ ಮಾಡಿದ ಆರ್‌.ಚಂದ್ರು; 25ನೇ ದಿನದ ಸಂಭ್ರಮಾಚರಣೆ ಹೀಗಿತ್ತು

ಸಾರಾಂಶ

ಅದ್ಧೂರಿಯಾಗಿ ನಡೆಯಿತ್ತು ಕಬ್ಜ ಚಿತ್ರದ 25ನೇ ದಿನದ ಸಂಭ್ರಮಾಚರಣೆ. ಭಾಗ 2 ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ತಂಡ..  

ಪ್ಯಾನ್‌ ಇಂಡಿಯಾ ಸಿನಿಮಾ ನಿರ್ದೇಶಕ, ನಿರ್ಮಾಪಕ ಆರ್‌.ಚಂದ್ರು ತಮ್ಮ ನಿರ್ದೇಶನದ ಮುಂದಿನ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ 2’ ಶುರು ಮಾಡಿದ್ದಾರೆ. ‘ಕಬ್ಜ’ ಚಿತ್ರದ 25ನೇ ದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರಾದ ಎಚ್‌.ಎಂ. ರೇವಣ್ಣ, ರಾಮಚಂದ್ರ ಗೌಡ ‘ಕಬ್ಜ 2’ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಅಧಿಕೃತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆರ್‌.ಚಂದ್ರು, ‘ಕಬ್ಜ ಚಿತ್ರ 25ನೇ ಪೂರೈಸಿದೆ. ಈ ಹೊತ್ತಿನಲ್ಲಿ ನನ್ನ ಜೊತೆ ಮೂರು ವರ್ಷಗಳ ಕಾಲ ಧೂಳು, ಹೊಗೆ ಮಧ್ಯೆ ಕೆಲಸ ಮಾಡಿದ ಎಲ್ಲಾ ತಂತ್ರಜ್ಞರನ್ನು ನೆನೆಯುತ್ತೇನೆ. ಇದು ನನ್ನ ಸಿನಿಮಾ ಅಲ್ಲ. ತಂತ್ರಜ್ಞರ ಸಿನಿಮಾ. ಕಬ್ಜ ಗೆದ್ದಿದೆ. ಅದೇ ಖುಷಿಯಲ್ಲೇ ಕಬ್ಜ2 ಆರಂಭಿಸುತ್ತಿದ್ದೇನೆ. ಬರವಣಿಗೆ ನಡೆಯುತ್ತಿದೆ. ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ’ ಎಂದರು.

Kabza Review ಅದ್ದೂರಿ ಚಿತ್ರಿಕೆ ಅಗಾಧ ಕಥನ

ಅದಕ್ಕೂ ಮೊದಲು ಆರ್‌.ಚಂದ್ರು ಕುರಿತ ವಿಡಿಯೋ ಪ್ರದರ್ಶನ ಮಾಡಲಾಯಿತು. ಶಿಡ್ಲಘಟ್ಟದ ಕೇಶವಾರ ಗ್ರಾಮದ ಮಧ್ಯಮವರ್ಗದ ಚಂದ್ರು ಸಿನಿಮಾ ದಿಗ್ವಿಜಯ ಸಾಧಿಸಿದ್ದಲ್ಲದೇ ಕೃಷಿ ಕೆಲಸದಲ್ಲೂ ಯಶಸ್ಸು ಸಾಧಿಸಿರುವುದನ್ನು ತೋರಿಸಲಾಯಿತು. ಮುಂದೆ ರಾಜಕೀಯ ಕ್ಷೇತ್ರಕ್ಕೂ ಆರ್‌.ಚಂದ್ರು ಕಾಲಿಡುವ ಸಾಧ್ಯತೆಯನ್ನು ವಿಡಿಯೋದಲ್ಲಿ ತಿಳಿಸಲಾಯಿತು.

ಕನ್ನಡ, ಹಿಂದಿ, ಇಂಗ್ಲಿಷ್‌, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಸುನೀಲ್‌ ಪುರಾಣಿಕ್‌, ಬಿ. ಸುರೇಶ್‌ ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರಿಗೆ ಆರ್‌.ಚಂದ್ರು ಸ್ಮರಣಿಕೆ ಕೊಟ್ಟು ಗೌರವಿಸಿದರು. ವಿತರಕ ಮೋಹನ್‌ ಇದ್ದರು.

ಅಮೇಜಾನ್ ಪ್ರೈಮ್‌ನಲ್ಲೂ ಬಂತು:

ಮಾ.17ರಂದು 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ಬಿಡುಗಡೆಯಾಗಿತ್ತು. ಏಪ್ರಿಲ್ 14ರಂದು ಅಮೇಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಿದೆ.  ರಿಲೀಸ್‌ ಆದ ಒಂದೇ ತಿಂಗಳಿಗೆ ಓಟಿಟಿಗೆ ಬರುವ ಮೂಲಕ ಇನ್ನಷ್ಟು ಸಿನಿ ಪ್ರೇಮಿಗಳ ಮನಸ್ಸು ಗೆಲ್ಲುವುದಕ್ಕೆ ಮುಂದಾಗಿದ್ದಾರೆ. ಕಬ್ಜ ಮೊದಲನೇ ಭಾಗದ ಅಂತ್ಯದಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಂಡು ಎರಡನೇ ಭಾಗ ಬರಲಿದೆ ಎಂಬ ಸೂಚನೆ ನೀಡಿದ್ದರು. ಎರಡನೇ ಭಾಗ ಯಾವಾಗ ಆರಂಭವಾಗುತ್ತದೆ ಎಂಬುದು ಸದ್ಯದ ಕುತೂಹಲವಿತ್ತು ಆದರೆ ಈಗ ಗುಡ್‌ ನ್ಯೂಸ್‌ ಬಗ್ಗೆ ಕ್ಲಾರಿಟಿ ಸಿಕ್ಕಿದೆ...

ನಾಯಕಿಯರ ಪಕ್ಕ ನಿಂತುಕೊಳ್ಳಲು ನಾಚಿಕೊಂಡ ಆರ್‌ ಚಂದ್ರು; Last Bench ಬಾಯ್ಸ್‌ ರೀತಿ ಕಾಲೆಳೆದ ಉಪ್ಪಿ-ಕಿಚ್ಚ

100 ಕೋಟಿ ಕಲೆಕ್ಷನ್:

ಕಬ್ಜ ಸಿನಿಮಾ ರಿಲೀಸ್ ಆದ ಮೂರು ದಿನದಲ್ಲಿ ವಿಶ್ವಾದಾದ್ಯಂತ 50 ಕೋಟಿ ಕಲೆಕ್ಷನ್ ಮಾಡಿತ್ತು. ಒಂದೇ ವಾರದಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ.  ‘ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದೇ ಕಷ್ಟವಾಗಿದೆ. ರಾಜ್ಯದಲ್ಲಿ ಬಹುತೇಕ ಚಿತ್ರಮಂದಿರಗಳು ಮುಂಚ್ಚುತ್ತಿವೆ. ಇಂಥ ಹೊತ್ತಿನಲ್ಲಿ ಬಂದ ‘ಕಬ್ಜ’ ಸಿನಿಮಾ ಮೂಲಕ ಚಿತ್ರಮಂದಿರಗಳು ಉಸಿರಾಡುವಂತೆ ಆಗಿದೆ. ಥಿಯೇಟರ್‌ ಮಾಲೀಕರೇ ಮುಂದೆ ಬಂದು ಸಿನಿಮಾ ಕೇಳಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ರಾಜ್ಯದಲ್ಲೇ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಉಪೇಂದ್ರ ಅವರ ಎಲ್ಲ ಚಿತ್ರಗಳನ್ನು ನಾವೇ ಬಿಡುಗಡೆ ಮಾಡಿರುವುದು. ಎಲ್ಲವೂ ಒಳ್ಳೆಯ ಗಳಿಕೆ ಮಾಡಿವೆ. ‘ಕಬ್ಜ’ ಮಾತ್ರ ಆ ಎಲ್ಲ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿದೆ. ಈ ವರ್ಷದ ಬ್ಲಾಕ್‌ ಬಾಸ್ಟರ್‌ ಹಿಟ್‌ ಸಿನಿಮಾ ಇದು’ ಎಂದು ವಿತರಕ ಮೋಹನ್ ಹೇಳಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ