'ನಿಮಗೊಂದು ಸಿಹಿ ಸುದ್ದಿ': ಗಂಡಸರಿಗೆ ಮಕ್ಕಳಾಗೊ ಕಾಲ ಬಂದಿದೆ!

Suvarna News   | Asianet News
Published : Aug 26, 2020, 02:52 PM ISTUpdated : Aug 26, 2020, 04:05 PM IST
'ನಿಮಗೊಂದು ಸಿಹಿ ಸುದ್ದಿ': ಗಂಡಸರಿಗೆ ಮಕ್ಕಳಾಗೊ ಕಾಲ ಬಂದಿದೆ!

ಸಾರಾಂಶ

ಹೆಣ್ಣು ಗರ್ಭ ಧರಿಸುವುದು ಪ್ರಕೃತಿ ಸಹಜ. ಸ್ವಲ್ಪ ಅಸಹಜತೆಯಾಗಿ ಗಂಡು ಗರ್ಭ ಧರಿಸಿದರೆ ಏನಾಗಬಹುದು..? ಸೀರೆಯಲ್ಲಿ ತುಂಬು ಗರ್ಭಿಣಿಯನ್ನು ಊಹಿಸಿದಂತೆ ಪ್ಯಾಂಟ್ ಶರ್ಟ್ ಧರಿಸಿದ ಗಂಡಸು ಗರ್ಭ ಧರಿಸಿದರೆ..? ಹೀಗೊಂದು ಕುತೂಹಲಕಾರಿ ವಿಚಾರ ನಿಮ್ಮನ್ನು ಕಾಯುತ್ತಿದೆ. ಏನು ಕಥೆ..? ಇಲ್ಲಿ ಓದಿ

ಹೆಣ್ಣು ಗರ್ಭ ಧರಿಸುವುದು ಪ್ರಕೃತಿ ಸಹಜ. ಸ್ವಲ್ಪ ಅಸಹಜತೆಯಾಗಿ ಗಂಡು ಗರ್ಭ ಧರಿಸಿದರೆ ಏನಾಗಬಹುದು..? ಸೀರೆಯಲ್ಲಿ ತುಂಬು ಗರ್ಭಿಣಿಯನ್ನು ಊಹಿಸಿದಂತೆ ಪ್ಯಾಂಟ್ ಶರ್ಟ್ ಧರಿಸಿದ ಗಂಡಸು ಗರ್ಭ ಧರಿಸಿದರೆ..? ಹೀಗೊಂದು ಕುತೂಹಲಕಾರಿ ವಿಚಾರ ನಿಮ್ಮನ್ನು ಕಾಯುತ್ತಿದೆ.

ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ.. ಹೆಣ್ಣು ಹೆಣ್ಣ ಮದುವೆಯಾಗೋ ಮೋಹ ಬಂತಯ್ಯ.. ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ ಇದು ಸಾಮಾನ್ಯವಾಗಿ ಎಲ್ಲರೂ ಕೇಳಿರುವ ಹಾಡು. ಈ ಹಾಡಿನ ಸಾಲುಗಳ ಅರ್ಥ ಬಿಂಬಿಸುವ ಸಾಕಷ್ಟು LG BT Q ಕಥೆಯನ್ನಾಧರಿಸಿದ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಬಂದಿವೆ.

KGF2 ಸೇರಿದ ಪ್ರಕಾಶ್ ರಾಜ್: ಶೂಟಿಂಗ್ ಶುರು.

ಪರಭಾಷೆ ಸಿನಿಮಾದಲ್ಲಿ ಗಂಡಸು ಗರ್ಭ ಧರಿಸಿದಂತಹ ಸಿನಿಮಾಗಳು ಬಂದಿವೆ. ಇದೀಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ  ಸಿದ್ಧಗೊಳ್ಳುತ್ತಿದೆ.

ಹೆಣ್ಣು ಗರ್ಭಧರಿಸಿದಾಗ ಪರೀಕ್ಷೆ ನಡೆಸೋ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು ಸಾಮಾನ್ಯ. ಆ ನಂತರ ಎಲ್ಲರೂ ಸಿಹಿ ಹಂಚುತ್ತಾರೆ. ಅದೇ ಒಬ್ಬ ಪುರುಷನನ್ನು ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಎಂದರೆ ಪ್ರತಿಕ್ರಿಯೆ ಹೇಗಿರಬಹುದು..? ಕ್ಷಣವೊಮ್ಮೆ ಬ್ಲಾಂಕ್ ಆಗಬಹುದೇನೋ.. ಗಂಡಸು ಗರ್ಭ ಧರಿಸುತ್ತಾನೆ ಎಂಬುದು ಈ ಜಮಾನದಲ್ಲೂ ವಿಚಿತ್ರ ಅನ್ನಿಸೋ ವಿಚಾರ.

ತಮ್ಮ ವೇಯಿಟ್ ಹೇಳಿದ ನೇಹಾ: ಇದಕ್ಕೆ ಗಟ್ಸ್ ಬೇಕು ಅಂದ್ರು ನೆಟ್ಟಿಗರು..!

ಇಂತಹದೊಂದು ವಿಚಿತ್ರವನ್ನು ಊಹಿಸಿಕೊಳ್ಳೋದೇ ಕಷ್ಟ ಎಂದೆನಿಸುವಾಗ ಇದನ್ನೇ ವೆಬ್ ಸರಣಿಯಾಗಿಸೋ ತಂಡದ ಧೈರ್ಯ ಮೆಚ್ಚಬೇಕಾದ್ದು. ಸದ್ಯ ಲೋಕಾರ್ಪಣೆಗೊಂಡಿರುವ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ ವ್ಯಾಪಕವಾಗಿ ವೈರಲ್ ಆಗಿದೆ. ಕನ್ನಡದ ಮಟ್ಟಿಗೆ ಇದು ಹೊಚ್ಚಹೊಸ ಕಾನ್ಸೆಪ್ಟ್ ಆಗಿರುವುದರಿಂದ ಜನರ ಗಮನ ಸೆಳೆದಿದೆ. ಒಂದೇ ದಿನದಲ್ಲಿ ಈ ಪೋಸ್ಟರ್ 8 ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದಿದೆ.

ಅರ್ಜುನ್ ಮತ್ತು ಡಿಡಿ ಎಂಬಿಬ್ಬರು ಫ್ರೆಂಡ್ಸ್. ಅದರಲ್ಲಿ ಅರ್ಜುನ್ ಸೆಲೆಬ್ರಿಟಿ ಬಾಣಸಿಗರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅದೊಂದು ದಿನ ಅರ್ಜುನ್ ಗರ್ಭ ಧರಿಸುತ್ತಾರೆ. ಏನು.? ಹೇಗೆ, ಯಾಕೆ ಅಂತ ಕೇಳ್ಬೇಡಿ, ನಮ್ಗೂ ಗೊತ್ತಿಲ್ಲ.

ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ

ಈ ಯುವಕ ಗರ್ಭ ಧರಿಸಿದ್ದು ಹೇಗೆ? ಹಿಂದಿನ ತಿಂಗಳಲ್ಲಿ ಏನೇನು ವಿಚಾರಗಳು ಘಟಿಸಿರುತ್ತವೆ? ಈ ನಡುವೆ ಗರ್ಭ ಧರಿಸಿದ ಹುಡುಗನ ಪ್ರಿಯತಮೆ ಹೇಗೆ ಪ್ರತಿಕ್ರಿಯಿಸುತ್ತಾಳೆ? ಏನೆಲ್ಲಾ ಅವಾಂತರಗಳು ಎದುರಾಗುತ್ತವೆ? ಉದ್ಭವಿಸುವ ಪ್ರತಿಯೊಂದು ಗೊಂದಲಗಳು ಪ್ರೇಕ್ಷಕರನ್ನು ಹೇಗೆ ನಗುವಿನಲ್ಲಿ ಮುಳುಗಿಸುತ್ತದೆ ಅನ್ನೋ ಕೌತುಕಗಳೆಲ್ಲಾ 8 ಎಪಿಸೋಡುಗಳ ಈ ರೋಚಕ ಮತ್ತು ಹಾಸ್ಯಭರಿತ ವೆಬ್ ಸರಣಿಯಲ್ಲಿ ಬಿಚ್ಚಿಕೊಳ್ಳಲಿದೆ.

ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಪ್ರಯೋಗವಿದು. ಉಪೇಂದ್ರ ಅವರ ಟೋಪಿವಾಲಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗಿ ಮೂಡಿಬರಲಿದ್ದಾರೆ.

ಕಂಡ್ಹಿಡಿ ನೋಡೋಣ ಟೀಸರ್‌ಗೆ ಮೆಚ್ಚುಗೆ

ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಿಂದ ಪರಿಚಯಗೊಳ್ಳುತ್ತಿದ್ದಾರೆ. ಇಷ್ಟಕಾಮ್ಯ ಸೇರಿದಂತೆ ಕನ್ನಡದ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಶೆಟ್ಟಿ ನಾಯಕಿಯಾಗಿದ್ದಾರೆ. ಉರ್ವಿ ಸಿನಿಮಾದ ಮೂಲಕ ಛಾಯಾಗ್ರಹಣದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಆನಂದ್ ಸುಂದರೇಶ್ ಛಾಯಾಗ್ರಹಣ ವಿರುವ ಈ ಸರಣಿಯ ಕ್ರಿಯೇಟೀವ್ ತಂಡದಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಪ್ರಿಯಾಂಕಾ ಎಂ ಆರ್, ಜಗದೀಶ್ ಸಿಂಗ್, ಯೋಗೇಶ್ ನಂಜಪ್ಪ, ಪ್ರಕಾಶ್ ಎಸ್ಆರ್, ಅನಿಲ್ ಕುಮಾರ್, ಅಕ್ಷೋಭ್ಯಾ, ಪ್ರಶಾಂತ್ ಆರ್ ಮತ್ತು ಮಂಜುನಾಥ್ ಸಿಂಗ್, ಪ್ರಜ್ವಲ್ ಮುದ್ದಿ ಕೆಲಸ ಮಾಡಲಿದ್ದಾರೆ.

ಕಾಫಿ ಡೇ ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ ಅಲ್ಲಿಯೇ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ ಅನ್ನು ವಿನೂತನವಾಗಿ ಅನಾವರಣ ಮಾಡಲಾಗಿದೆ. ಜನಸಾಮಾನ್ಯರೇ ಇದ್ದಲ್ಲಿಂದಲೇ ಸ್ಕ್ರಾಚ್ ಕಾರ್ಡ್ ಲಿಂಕ್ ಶೇರ್ ಮಾಡುವ ಮೂಲಕ ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ. ಮೊದಲೇ ಬಿಡುಗಡೆಗೊಂಡಿದ್ದ ಲಿಂಕ್ ಕ್ಲಿಕ್ ಮಾಡಿದರೆ, ಅದು ರೀ ಡೈರೆಕ್ಟ್ ಮಾಡುತ್ತದೆ. ಅಲ್ಲಿ ಸ್ಕ್ರಾಚ್ ಮಾಡಬಹುದು, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಬಹುದು. ಹಾಗೆ ಶೇರ್ ಮಾಡಿದ ಕೆಲವರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ನಡೆಯಲಿರುವ ಸಮಾರಂಭದಲ್ಲಿ ವಿಶೇಷ ಉಡುಗೊರೆಯನ್ನೂ ನೀಡಲಾಗುತ್ತಿದೆ.

ರಾಘವೇಂದ್ರ ರಾಜ್‌ಕುಮಾರ್ 25ನೇ ಸಿನಿಮಾ‌ 'ಆಡಿಸಿದಾತ' ಟೀಸರ್‌ ಬಿಡುಗಡೆ

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನ ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ. ಹೊಸತು ಅನ್ನೋ ಪದಕ್ಕೇ ಅನ್ವರ್ಥವಾಗಿರುವ ಆಲೋಚನೆಯೊಂದಿಗೆ ಯುವ ಪ್ರತಿಭೆಗಳೆಲ್ಲಾ ಸೇರಿ ʻನಿಮಗೊಂದು ಸಿಹಿ ಸುದ್ದಿʼ ನೀಡಲು ಮುಂದಾಗಿದೆ. ಸದ್ಯ ಕಾನಿ ಸ್ಟುಡಿಯೋ ವಿನ್ಯಾಸಗೊಳಿಸಿರುವ ಪೋಸ್ಟರ್ ಎಲ್ಲರ ವೈರಲ್ ಆಗಿರೋದರ ಜೊತೆ ಇದೇನು ಅಂತ ಜನರನ್ನು ಬೆರಗುಗೊಳಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

New Parents of Sandalwood: 2025ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಕನ್ನಡ ಹಿರಿತೆರೆ-ಕಿರುತೆರೆ ನಟರು
ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!