ದೀಪಿಕಾ ದಾಸ್ ಗುಡ್‌ನ್ಯೂಸ್ ಗುಟ್ಟೇನು? 'ಪಾರು ಪಾರ್ವತಿ'ಯ ರೋಚಕ ವಿವರ ಇಲ್ಲಿದೆ!

By Bhavani Bhat  |  First Published Sep 3, 2024, 9:50 AM IST

ದೀಪಿಕಾ ದಾಸ್ ಅವರು ಹೊಸ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. 'ಪಾರು ಪಾರ್ವತಿ' ಎಂಬ ಈ ಸಿನಿಮಾದಲ್ಲಿ ಅವರು ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಭೂತಕಾಲ ಮತ್ತು ವರ್ತಮಾನ ಕಾಲದಲ್ಲಿ ಸಾಗುವ ಎರಡು ರೀತಿಯ ಕಥಾಹಂದರವಿದೆ.


ದೀಪಿಕಾ ದಾಸ್ ಅಂದ ಕೂಡಲೆ ನೆನಪಾಗೋದು ಅವರ ನಟನೆಯ 'ನಾಗಿನಿ' ಸೀರಿಯಲ್. ಇದರಲ್ಲಿ ಅವರು ಎಷ್ಟು ಚೆನ್ನಾಗಿ ನಟಿಸಿದ್ದರು ಅಂದರೆ ಒಂದು ಟೈಮಲ್ಲಿ ಜನ ಈ ನಟಿಯನ್ನು 'ನಾಗಿನಿ' ಅಂತಲೇ ಕರೀತಿದ್ರು. ಈ ಸೀರಿಯಲ್ ದೀಪಿಕಾಗೆ ಬ್ರೇಕ್ ಅನ್ನೂ ಕೊಡ್ತು. ನಂತರ ಬಿಗ್‌ಬಾಸ್, ಸಿನಿಮಾ ಅಂತೆಲ್ಲ ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಓಡಾಡಿ, ನಡುವೆ ಬ್ರೇಕ್ ಬೇಕು ಅಂತ ಒಂದಿಷ್ಟು ಫಾರಿನ್ ಟ್ರಿಪ್ಪೂ ಹೊಡ್ದು, 'ಎಲ್ಲಿ ಮರೆಯಾದ್ರು ದೀಪಿಕಾ?' ಅಂತ ಅವರ ಫ್ಯಾನ್ಸ್ ಹುಡುಕೋ ಹೊತ್ತಿಗೆ ಪತಿ ಜೊತೆಗೆ ಪ್ರತ್ಯಕ್ಷವಾಗಿ ಬಿಟ್ಟರು. ಸೋಷಿಯಲ್ ಮೀಡಿಯಾದಲ್ಲಿ ಗಂಡನ ಜೊತೆಗಿರೋ ಫೋಟೋ ಪೋಸ್ಟ್ ಮಾಡಿ ನಾನೀಗ ಮಿಸ್ಸೆಸ್ ಆಗಿದ್ದೀನಿ ಅಂದುಬಿಟ್ಟರು. ನಾಗಿನಿ ನಟಿ ಬಗ್ಗೆ ಕನಸು ಕಾಣ್ತಿದ್ದ ಪಡ್ಡೆ ಹುಡುಗ್ರ ಹೃದಯ ನುಚ್ಚುನೂರಾಯ್ತು. ಇದರ ಬಗ್ಗೆ ಎಲ್ಲ ತಲೆ ಕೆಡಿಸಿಕೊಳ್ಳದ ಈ ನಟಿ ಇದೀಗ ಫಾರಿನ್ ಟೂರ್‌ನಲ್ಲಿ ಚೆಂದ ಚೆಂದದ ಬಟ್ಟೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ತಾ ಅಭಿಮಾನಿಗಳ ನೊಂದ ಹೃದಯಕ್ಕೆ ತಂಪೆರೆಯೋ ಕೆಲಸ ಮಾಡಲಾರಂಭಿಸಿದರು.

ನಿನ್ನೆ ತಾನೇ ಈ ನಟಿ, 'ನಾನೊಂದು ವಿಷ್ಯ ಹೇಳ್ಬೇಕು. ಯಾವ್ದಕ್ಕೂ ಸ್ವಲ್ಪ ಹೊತ್ತು ಕಾಯಿರಿ' ಅಂತ ಒಂದು ಟೈಮ್ ಸ್ಲಾಟ್ ಫಿಕ್ಸ್ ಮಾಡಿ ಅಷ್ಟೊತ್ತಿಗೆ ಗುಡ್‌ನ್ಯೂಸ್ ಅನೌನ್ಸ್ ಮಾಡ್ತೀನಿ ಅಂದುಬಿಟ್ಟರು. ಮದುವೆ ಆಯ್ತು, ಮದುವೆ ನಂತರ ಟ್ರಿಪ್ ಮೇಲೆ ಟ್ರಿಪ್ ಹೊಡೆದದ್ದೂ ಆಯ್ತು. ಇನ್ನು ಗುಡ್‌ನ್ಯೂಸ್‌ ಕೊಡದೇ ಮತ್ತೇನ್ ಮಾಡ್ತಾರೆ ಅಂತ ಗೊಣಗುತ್ತಲೇ ಫ್ಯಾನ್ಸ್ ಗುಡ್‌ನ್ಯೂಸ್‌ಗೆ ಎದುರು ನೋಡತೊಡಗಿದರು. ಕೊನೆಗೂ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡದ ದೀಪಿಕಾ ಗುಡ್‌ನ್ಯೂಸ್ ಕೊಟ್ಟೇಬಿಟ್ಟಿದ್ದಾರೆ.

Tap to resize

Latest Videos

ಗುಡ್‌ನ್ಯೂಸ್ ಅನೌನ್ಸ್ ಮಾಡ್ತಾರಂತೆ ನಟಿ ದೀಪಿಕಾ ದಾಸ್, ಅದೇನು ಗೊತ್ತಾ?

ಆದರೆ ಈ ಗುಡ್‌ನ್ಯೂಸ್ 'ಸೋ ಕಾಲ್ಡ್' ಗುಡ್‌ನ್ಯೂಸ್ ಅಲ್ಲ. ಬದಲಿಗೆ ಅವರು ಹೊಸ ಸಿನಿಮಾ ಮಾಡ್ತಿರೋ ಗುಡ್‌ನ್ಯೂಸ್. ಹೌದು, ಬಹಳ ದಿನಗಳ ನಂತರ ದೀಪಿಕಾ ದಾಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಕ್ಕೆ ರೆಡಿ ಆಗಿದ್ದಾರೆ. 'ಪಾರು ಪಾರ್ವತಿ' ಎಂಬ ಸಿನಿಮಾದಲ್ಲಿ ಅವರು ನಾಯಕಿಯಾಗಿದ್ದಾರೆ. 'ಇದೊಂದು ಅಡ್ವೆಂಚರಸ್ ಸಿನಿಮಾ. 'ಪಾರು ಪಾರ್ವತಿ' ಸಿನಿಮಾ ನನಗೆ ವೈಯಕ್ತಿಕವಾಗಿ ಚಾಲೆಂಜಿಂಗ್ ಆಗಿತ್ತು. ಈ ಸಿನಿಮಾದಲ್ಲಿ ನಾನು ಪಾಯಲ್ ಅನ್ನೋ ಪಾತ್ರವನ್ನು ಮಾಡುತ್ತಿದ್ದೇನೆ. ನಿಜ ಜೀವನದಲ್ಲಿ ನಾನು ಯಾವ ರೀತಿಯ ಪಾತ್ರವನ್ನು ಇಷ್ಟಪಡುತ್ತೇನೋ, ಅಂಥದ್ದೊಂದು ಪಾತ್ರ ಈ ಪಾಯಲ್. ನನ್ನ ರಿಯಲ್ ಲೈಫ್ ಅಲ್ಲಿ ನಾನು ಜೀವಿಸುತ್ತಿರುವ ಪಾತ್ರ ಇದು. ಈ ಸಿನಿಮಾದಲ್ಲಿ ನಟಿಸುವುದಕ್ಕೆ ಇದು ನನಗೆ ತುಂಬಾನೇ ಪ್ಲಸ್ ಪಾಯಿಂಟ್' ಎನ್ನುತ್ತಾ ಸಿನಿಮಾ ಬಗ್ಗೆ, ಪಾತ್ರದ ಬಗ್ಗೆ ದೀಪಿಕಾ ವಿವರ ನೀಡ್ತಾರೆ.

ಇದಲ್ಲದೇ ಸಿನಿಮಾ ಬಗ್ಗೆ ಇನ್ನೊಂದಿಷ್ಟು ಡೀಟೇಲ್ಸ್‌ ಅನ್ನೂ ಹಂಚಿಕೊಂಡಿದ್ದಾರೆ. 'ಈ ಪಾಯಲ್ ಕಥೆ ಸಿನಿಮಾದಲ್ಲಿ ಭೂತಕಾಲ ಮತ್ತು ವರ್ತಮಾನ ಕಾಲದಲ್ಲಿ ಸಾಗುತ್ತದೆ. ಎರಡು ರೀತಿಯ ಕಾಲಘಟ್ಟಗಳನ್ನು ಇದು ಪ್ರೆಸೆಂಟ್ ಮಾಡುತ್ತದೆ. ಹೀಗೆ ಎರಡು ರೀತಿಯ ವ್ಯಕ್ತಿತ್ವ ಯಾಕೆ? ಹೇಗೆ ಎಂಬುದೇ ನಮ್ಮ ಸಿನಿಮಾದ ಹೈಲೈಟ್ ವಿಷಯ. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಒಳ್ಳೆಯ ಅಥವಾ ನೋವಿನ ನೆನಪುಗಳು ಇದ್ದೇ ಇರುತ್ತವೆ. ಅದೇ ರೀತಿ ನಮ್ಮ ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಅಂತಹ ಫ್ಲಾಶ್‌ಬ್ಯಾಕ್ ಇದೆ. ಈ ಪಾತ್ರಕ್ಕಾಗಿ ತೂಕವನ್ನು ಕೂಡ ಕಡಿಮೆ ಮಾಡಿಕೊಂಡಿದ್ದೇನೆ. ಜೊತೆಗೆ ಕೂದಲಿಗೂ ಕತ್ತರಿ ಹಾಕಿದ್ದೇನೆ. ಎಲ್ಲವೂ ಪಾತ್ರಕ್ಕಾಗಿಯೇ ಮಾಡಿರುವುದರಿಂದ, ನನಗೆ ಖುಷಿ ಇದೆ' ಎನ್ನುತ್ತಾರೆ ದೀಪಿಕಾ. ಅಂದಹಾಗೆ, ದೀಪಿಕಾ ಅವರು ಜಾಸ್ತಿ ಪ್ರವಾಸ ಮಾಡುತ್ತಾರೆ. ಈ ಸಿನಿಮಾದಲ್ಲೂ ಅವರಿಗೆ ಟ್ರಾವೆಲ್ ಮಾಡುವ ಹುಡುಗಿಯ ಪಾತ್ರವೇ ಸಿಕ್ಕಿದೆ.

ಸೀತಾರಾಮ: ಪಾಪ ಅಶೋಕ್! ಒಂದು ಕಡೆ ಪ್ರಿಯಾ, ಇನ್ನೊಂದು ಕಡೆ ರಾಮ್, ಒಳ್ಳೇವ್ರಿಗೆ ಯಾವತ್ತು ಹೀಗೇನ?

ಅಲ್ಲಿಗೆ ದೀಪಿಕಾರನ್ನು ಸಿನಿಮಾದಲ್ಲಿ ಒಳ್ಳೆ ಪಾತ್ರದಲ್ಲಿ ನೋಡಬೇಕು ಅನ್ನೋ ಅವರ ಅಭಿಮಾನಿಗಳ ಕನಸು ನನಸಾಗಿದೆ. ಸೋ ಪಾರು ಪಾರ್ವತಿಗೆ ಆಲ್‌ ದಿ ಬೆಸ್ಟ್!

 

 
 
 
 
 
 
 
 
 
 
 
 
 
 
 

A post shared by Deepika Das (@deepika__das)

click me!